ಒಂದೇ ಮನೆಯಿಂದ ಮೂವರು ಜಡ್ಜ್‌ಗಳು: ಶಿರಸಿ ಕುಟುಂಬದ ಅಪರೂಪದ ಸಾಧನೆ
ಒಂದೇ ಮನೆಯಿಂದ ಮೂವರು ಜಡ್ಜ್‌ಗಳು: ಶಿರಸಿ ಕುಟುಂಬದ ಅಪರೂಪದ ಸಾಧನೆ
2024ರ ಸಿವಿಲ್ ನ್ಯಾಯಾಧೀಶರ ಪರೀಕ್ಷೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಉತ್ತರ ಕನ್ನಡ ಜಿಲ್ಲೆ ಶಿರಸಿಯ ಎಚ್.ಜೆ. ಶ್ರೇಯಾ ಸಿವಿಲ್ ನ್ಯಾಯಾಧೀಶರ ಹುದ್ದೆಗೆ ಆಯ್ಕೆಯಾಗಿದ್ದಾರೆ.
ಈ ಮೂಲಕ ಅವರ ಕುಟುಂಬ ಅಪರೂಪದ ಸಾಧನೆ ಮೆರೆದಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಒಂದೇ ಮನೆಯಿಂದ ಮೂವರು ನ್ಯಾಯಾಧೀಶರು ಹೊರ ಹೊಮ್ಮಿದ್ದಾರೆ.
ಇದೀಗ ಸೇರ್ಪಡೆಗೊಂಡಿರುವ ಎಚ್.ಜೆ. ಶ್ರೇಯಾ ಮೂರನೇಯವರು. ಅವರ ತಾಯಿ ನಿವೃತ್ತ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ರೂಪಾ ನಾಯ್ಕ.
ಶ್ರೇಯಾ ಅವರ ಸಹೋದರಿ ಎಚ್.ಜೆ. ಶಿಲ್ಪಾ 2019ರ ಬ್ಯಾಚ್‌ನಲ್ಲಿ ನ್ಯಾಯಾಧೀಶರಾಗಿ ಆಯ್ಕೆಯಾಗಿದ್ದು, ಪ್ರಸ್ತುತ ಮಂಗಳೂರಿನಲ್ಲಿ ಸಿವಿಲ್ ನ್ಯಾಯಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹೈಕೋರ್ಟ್ ಅಧಿಸೂಚನೆಗೊಳಿಸಿದ 33 ಸಿವಿಲ್ ನ್ಯಾಯಾಧೀಶರ ಆಯ್ಕೆ ಪಟ್ಟಿಯಲ್ಲಿ ಶ್ರೇಯಾ ಸ್ಥಾನ ಪಡೆದಿದ್ದಾರೆ. ಅವರ ತಂದೆ ನಿವೃತ್ತ ಸಹಾಯಕ ಅರಣ್ಯ ಸಂರಕ್ಷನಾಧಿಕಾರಿ ಜೆ.ಜೆ. ನಾಯ್ಕ.