-->
ಮಧ್ಯಂತರ ಯಾ ದಾವಾ ಬಾಕಿ ಜೀವನಾಂಶವನ್ನು ಪ್ರಶ್ನಿಸುವಂತಿಲ್ಲ: ಮೇಲ್ಮನವಿ ತಿರಸ್ಕರಿಸಿದ ಹೈಕೋರ್ಟ್‌

ಮಧ್ಯಂತರ ಯಾ ದಾವಾ ಬಾಕಿ ಜೀವನಾಂಶವನ್ನು ಪ್ರಶ್ನಿಸುವಂತಿಲ್ಲ: ಮೇಲ್ಮನವಿ ತಿರಸ್ಕರಿಸಿದ ಹೈಕೋರ್ಟ್‌

ಮಧ್ಯಂತರ ಯಾ ದಾವಾ ಬಾಕಿ ಜೀವನಾಂಶವನ್ನು ಪ್ರಶ್ನಿಸುವಂತಿಲ್ಲ: ಮೇಲ್ಮನವಿ ತಿರಸ್ಕರಿಸಿದ ಹೈಕೋರ್ಟ್‌

ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 28 ಮತ್ತು ಕೌಟುಂಬಿಕ ನ್ಯಾಯಾಲಯಗಳ ಕಾಯ್ದೆ ಸೆಕ್ಷನ್ 19ರ ಅಡಿಯಲ್ಲಿ ಮಧ್ಯಂತರ ಯಾ ದಾವಾ ಬಾಕಿ ಜೀವನಾಂಶವನ್ನು ಪ್ರಶ್ನಿಸುವಂತಿಲ್ಲ ಎಂದು ಮದ್ರಾಸ್ ಹೈಕೋರ್ಟ್‌ ತೀರ್ಪು ನೀಡಿದೆ.


ನ್ಯಾ. ಎಂ. ಸುಂದರ್ ಮತ್ತು ನ್ಯಾ. ಕೆ. ಗೋವಿಂದರಾಜನ್ ತಿಳಕವಾಡಿ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.


ಮಧ್ಯಂತರ ಜೀವನಾಂಶದ ಇಂತಹ ಆದೇಶಗಳನ್ನು ಸಂವಿಧಾನದ 227ನೇ ವಿಧಿಯಡಿ ಕ್ರಿಮಿನಲ್ ಮರುಪರಿಶೀಲನಾ ಅರ್ಜಿಗಳ ಮೂಲಕವೇ ಪ್ರಶ್ನಿಸಬಹುದು ಎಂದು ನ್ಯಾಯಪೀಠ ಹೇಳಿದೆ.


ಈರೋಡ್‌ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಚೇದನ ಪ್ರಕ್ರಿಯೆಗಳು ಬಾಕಿ ಇರುವಾಗ, ಮಾಸಿಕ ವೆಚ್ಚ ಮತ್ತು ದಾವಾ ವೆಚ್ಚ ಭರಿಸಲು ಪತ್ನಿಗೆ ಜೀವನಾಂಶವನ್ನು ನೀಡುವ ನ್ಯಾಯಾಲಯದ ಮಧ್ಯಂತರ ಆದೇಶವನ್ನು ಪತಿ ಪ್ರಶ್ನಿಸಿದ್ದರು.


ಇದೇ ವೇಳೆ, ಪತ್ನಿ ಕೂಡ ಈ ಆದೇಶವನ್ನು ಪ್ರಶ್ನಿಸಿ ಹೆಚ್ಚಿನ ಮೊತ್ತದ ಜೀವನಾಂಶಕ್ಕೆ ಅರ್ಹಳಾಗಿದ್ದೇನೆ ಎಂದು ಮೊರೆ ಹೋಗಿದ್ದರು.


ಕೌಟುಂಬಿಕ ನ್ಯಾಯಾಲಯದ ಸೆಕ್ಷನ್ 19ರಡಿಯಲ್ಲಿ ಗಂಡ ಮತ್ತು ಹೆಂಡತಿ ಇಬ್ಬರೂ ಸಿವಿಲ್ ಮಿಸಲೇನಿಯಸ್ ಅರ್ಜಿಯನ್ನು ಸಲ್ಲಿಸಿದ್ದರು.Ads on article

Advertise in articles 1

advertising articles 2

Advertise under the article