-->
ಸಾಲ ತೀರಿಸಿದರೂ ಆಸ್ತಿ ದಾಖಲೆ ವಾಪಸ್ ನೀಡದೆ ಸತಾಯಿಸಿದ ಬ್ಯಾಂಕ್‌ಗೆ 2 ಲಕ್ಷ ರೂ. ಜುಲ್ಮಾನೆ: ಹೈಕೋರ್ಟ್ ಆದೇಶ

ಸಾಲ ತೀರಿಸಿದರೂ ಆಸ್ತಿ ದಾಖಲೆ ವಾಪಸ್ ನೀಡದೆ ಸತಾಯಿಸಿದ ಬ್ಯಾಂಕ್‌ಗೆ 2 ಲಕ್ಷ ರೂ. ಜುಲ್ಮಾನೆ: ಹೈಕೋರ್ಟ್ ಆದೇಶ

ಸಾಲ ತೀರಿಸಿದರೂ ಆಸ್ತಿ ದಾಖಲೆ ವಾಪಸ್ ನೀಡದೆ ಸತಾಯಿಸಿದ ಬ್ಯಾಂಕ್‌ಗೆ 2 ಲಕ್ಷ ರೂ. ಜುಲ್ಮಾನೆ: ಹೈಕೋರ್ಟ್ ಆದೇಶ

ಸಾಲ ತೀರಿಸಿದರೂ ಸಾಲಕ್ಕೆ ಅಡಮಾನ ಇಟ್ಟಿದ್ದ ಆಸ್ತಿಯ ದಾಖಲೆಗಳನ್ನು ವಾಪಸ್ ನೀಡದೆ ಸತಾಯಿಸಿದ ರಾಷ್ಟ್ರೀಕೃತ ಬ್ಯಾಂಕ್‌ಗೆ 2 ಲಕ್ಷ ರೂ. ಜುಲ್ಮಾನೆ ವಿಧಿಸಿ ಕರ್ನಾಟಕ ಹೈಕೋರ್ಟ್ ಆದೇಶ ಹೊರಡಿಸಿದೆ.


ದಾವಣಗೆರೆಯ ಎಂ.ಬಿ. ಆಗ್ರೋಫುಡ್ ಇಂಡಸ್ಟ್ರೀಸ್ ಲಿ. ನಿರ್ದೇಶಕ ಎಂ.ಬಿ. ಸೋಮಶೇಖರ್ ಗೌಡ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.


ಸೋಮಶೇಖರ್ ಗೌಡ ಅವರ ಪುತ್ರ ಸಾಲ ಮರುಪಾವತಿ ಮಾಡದೆ ಮೃತಪಟ್ಟಿರುತ್ತಾರೆ. ಈ ವೇಳೆ, ಸಂಸ್ಥೆಯ ಕಾನೂನಾತ್ಮಕ ವಾರಿಸುದಾರರಾದ ಅರ್ಜಿದಾರರು ಸ್ವಯಂ ಪ್ರೇರಣೆಯಿಂದ ಏಕಗಂಟಿನಲ್ಲಿ ಸಾಲವನ್ನು ಮರುಪಾವತಿ ಮಾಡಿದ್ದರು. ಸುಮಾರು 19 ಕೋಟಿ ರೂ.ಗೂ ಹೆಚ್ಚು ಸಾಲ ಮರುಪಾವತಿ ಮಾಡಿದ ಬಳಿಕವೂ ಬ್ಯಾಂಕ್ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ನೀಡದೆ ಸತಾಯಿಸುತ್ತಿತ್ತು.


ಬ್ಯಾಂಕ್‌ನ ಈ ಕ್ರಮವನ್ನು ವಿಪರ್ಯಾಸ ಮತ್ತು ವಿಚಿತ್ರ ಹಾಗೂ ಅಸಂಬಂಧ ನಡವಳಿಕೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್ ಬ್ಯಾಂಕ್‌ಗೆ ದಂಡ ವಿಧಿಸುವ ಮೂಲಕ ಬಿಸಿ ಮುಟ್ಟಿಸಿದೆ.


ಮಗ ಸಾಲ ತೀರಿಸದೆ ಮೃತಪಟ್ಟ ಬಳಿಕ ತಂದೆ ಸಾಲ ತೀರಿಸುವ ಕುರಿತು ಬ್ಯಾಂಕ್‌ನೊಂದಿಗೆ ಮಾತುಕತೆ ನಡೆಸಿದ್ದಾರೆ.. ಸಾಲದ ಜೊತೆಗೆ 5 ಲಕ್ಷ ಕಾನೂನು ವೆಚ್ಚವನ್ನೂ ಪಾವತಿಸಿದ್ದಾರೆ. ಹೀಗಾಗಿ ಬ್ಯಾಂಕ್‌ಗೆ ಮೂಲ ಸಾಲಗಾರ(ಮಗ) ಇನ್ನಿಲ್ಲ ಎಂಬುದು ಗೊತ್ತಿದೆ. ಆದರೂ ಆಸ್ತಿ ದಾಖಲೆಗಳನ್ನು ಹಿಂತಿರುಗಿಸಲು ಮೀನ-ಮೇಷ ಎಣಿಸಿದ್ದು ಸರಿಯಲ್ಲ. ಸಾಲ ತೀರಿಸುವ ವ್ಯಕ್ತಿ ಮೂಲ ಸಾಲಗಾರನಲ್ಲ ಎಂದು ನೆಪ ಹೇಳುತ್ತಿರುವುದು ಸಮಂಜಸವಲ್ಲ. ಇದು ಖಾಸಗಿ ಲೇವಾದೇವಿದಾರರ ಕ್ರೂರ ನಡವಳಿಕೆಗೆ ಸಮನಾಗಿದೆ ಎಂದು ಹೈಕೋರ್ಟ್ ಟೀಕಿಸಿದೆ.


Ads on article

Advertise in articles 1

advertising articles 2

Advertise under the article