-->
ಭಯ, ಪಕ್ಷಪಾತ ಬಿಟ್ಟು ನಿರ್ಭೀತಿಯಿಂದ ನ್ಯಾಯದಾನ ಮಾಡಿ; ಹೈಕೋರ್ಟ್, ಸುಪ್ರೀಂ ಕೋರ್ಟ್‌ ನಿಮ್ಮ ಬೆಂಬಲಕ್ಕೆ ಇದೆ: ಜಡ್ಜ್‌ಗಳಿಗೆ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅಭಯ

ಭಯ, ಪಕ್ಷಪಾತ ಬಿಟ್ಟು ನಿರ್ಭೀತಿಯಿಂದ ನ್ಯಾಯದಾನ ಮಾಡಿ; ಹೈಕೋರ್ಟ್, ಸುಪ್ರೀಂ ಕೋರ್ಟ್‌ ನಿಮ್ಮ ಬೆಂಬಲಕ್ಕೆ ಇದೆ: ಜಡ್ಜ್‌ಗಳಿಗೆ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅಭಯ

ಭಯ, ಪಕ್ಷಪಾತ ಬಿಟ್ಟು ನಿರ್ಭೀತಿಯಿಂದ ನ್ಯಾಯದಾನ ಮಾಡಿ; ಹೈಕೋರ್ಟ್, ಸುಪ್ರೀಂ ಕೋರ್ಟ್‌ ನಿಮ್ಮ ಬೆಂಬಲಕ್ಕೆ ಇದೆ: ಜಡ್ಜ್‌ಗಳಿಗೆ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅಭಯ
ಕ್ರಿಮಿನಲ್ ಪ್ರಕರಣಗಳ ನಿರ್ಧಾರದಲ್ಲಿ ಜಿಲ್ಲಾ ನ್ಯಾಯಾಲಯಗಳು ಮೊದಲ ಕೇಂದ್ರ ಬಿಂದುವಾಗಿವೆ. ತಂಡವಾಗಿ ಯುವ ನ್ಯಾಯಾಧೀಶರಿಗೆ ನೀವು ಮಾರ್ಗದರ್ಶನ ನೀಡಬೇಕು. ಭಯ, ಪಕ್ಷಪಾತ ಬಿಟ್ಟು ನಿರ್ಭೀತಿಯಿಂದ ನಿಷ್ಪಕ್ಷಪಾತವಾಗಿ ನ್ಯಾಯದಾನ ಮಾಡಿ, ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ ಸದಾ ನಿಮ್ಮ ಬೆಂಬಲಕ್ಕೆ ಇದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನ್ಯಾಯಾಂಗ ಅಧಿಕಾರಿಗಳಿಗೆ ಅಭಯ ನೀಡಿದರು.


ಬೆಂಗಳೂರಿನ ಜಿಕೆವಿಕೆಯ ಬಾಬು ರಾಜೇಂದ್ರ ಪ್ರಸಾದ್ ಇಂಟರ್‌ನ್ಯಾಷನಲ್ ಕನ್ವೆಂಷನ್ ಸೆಂಟರ್‌ನಲ್ಲಿ ಆರಂಭವಾದ ಎರಡು ದಿನಗಳ 21ನೇ ದ್ವೈವಾರ್ಷಿಕ ರಾಜ್ಯಮಟ್ಟದ ನ್ಯಾಯಾಂಗ ಅಧಿಕಾರಿಗಳ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.


ನೀವು ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡಬೇಕು ಎಂದು ಹೇಳಿದ ನ್ಯಾ. ಚಂದ್ರಚೂಡ್, ಕರಾವಳಿ ಕರ್ನಾಟಕದ ಹೆಸರಾಂತ ಸಾಹಿತಿ, ಜ್ಞಾನಪೀಠ ಸಾಹಿತಿ ಶಿವರಾಮ ಕಾರಂತರ ಮಾತನ್ನು ನೆನಪಿಸಿದರು. 


ಪಕ್ಷಿ ನಂಬಿಕೆ ಇಟ್ಟಿರುವುದು ಅದರ ರೆಕ್ಕೆಯ ಮೇಲೆಯೇ ವಿನಃ ಕೊಂಬೆಯ ಮೇಲಲ್ಲ ಎಂದು ಶಿವರಾಮ ಕಾರಂತರ ಮಾತನ್ನು ಉದ್ದರಿಸಿದ ಚಂದ್ರಚೂಡ್, ಅವರ ಮಾತುಗಳು ನಮಗೆ ಸದಾ ಸ್ಫೂರ್ತಿದಾಯಕವಾಗಿರಬೇಕು, ಯಾವುದೇ ಜಾಮೀನು ಅರ್ಜಿಯನ್ನು ನಿರ್ಧರಿಸುವಾಗ ನಾವು ನಮ್ಮ ಮೇಲೆ ನಂಬಿಕೆ ಇಡಬೇಕು. ಸದಾ ಭಯವನ್ನು ಮತ್ತು ಪಕ್ಷಪಾತವನ್ನು ಬದಿಗಿರಿಸಿ ನ್ಯಾಯದಾನ ಮಾಡಬೇಕು. ನಿಮ್ಮ ನಿಷ್ಪಕ್ಷಪಾತ ನ್ಯಾಯದಾನದ ನಡೆಗೆ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ಸದಾ ಬೆಂಬಲಕ್ಕೆ ಇರುತ್ತದೆ ಎಂದು ಅವರು ಭರವಸೆ ನೀಡಿದರು.


ಆದರೆ, ನೀವು ನಿಮ್ಮ ಸಾಮರ್ಥ್ಯದ ಮೇಲೆ ನಂಬಿಕೆ ಇಡಬೇಕು ಎಂದು ಸಿಜೆಐ ಅವರು ನ್ಯಾಯಾಂಗ ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.


ಪಾರ್ಟಿ ಇನ್ ಪರ್ಸನ್ ಬಗ್ಗೆ ಸಹಾನುಭೂತಿ ಇರಲಿ!

ಪಾರ್ಟಿ ಇನ್ ಪರ್ಸನ್ ರೂಪದಲ್ಲಿ ತಮ್ಮ ಪ್ರಕರಣಗಳಲ್ಲಿತಾವೇ ವಾದಿಸುವವರು ಕೆಲವೊಮ್ಮೆ ನಿಯಮ ತಪ್ಪಿ ನಡವಳಿಕೆ ತೋರುತ್ತಾರೆ. ನ್ಯಾಯಾಲಯದ ಅಂಕೆಯನ್ನು ಮೀರಿ ವರ್ತಿಸುತ್ತಾರೆ. ಅದಕ್ಕಾಗಿ ಅವರನ್ನು ಟೀಕಿಸುವುದು ಸರಿಯಲ್ಲ.. ಅವರು ಹಾಗೆ ಏಕೆ ವರ್ತಿಸುತ್ತಿದ್ದಾರೆ ಎಂಬುದನ್ನು ಸಹಾನುಭೂತಿಯಿಂದ ಅರಿಯಬೇಕು. ಒತ್ತಡ ನಿಭಾಯಿಸುವುದು ಮತ್ತುಪ್ರಕರಣ ಇತ್ಯರ್ಥಪಡಿಸುವುದು ನ್ಯಾಯದಾನದ ಭಾಗ ಎಂದು ಸಿಜೆಐ ಚಂದ್ರಚೂಡ್ ಹೇಳಿದರು.


ದ್ವೈವಾರ್ಷಿಕ ಸಮ್ಮೇಳನದಲ್ಲಿ ನ್ಯಾಯಾಂಗ ಅಧಿಕಾರಿಗಳು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಈ ಸಮ್ಮೇಳನದಲ್ಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳಾದ ಎ.ಎಸ್. ಬೋಪಣ್ಣ, ನ್ಯಾ. ಬಿ.ವಿ. ನಾಗರತ್ನ ಮತ್ತು ನ್ಯಾ. ಅರವಿಂದ ಕುಮಾರ್ ಉಪಸ್ಥಿತರಿದ್ದರು.Ads on article

Advertise in articles 1

advertising articles 2

Advertise under the article