-->
ಅನುಕಂಪದ ಉದ್ಯೋಗ: 1996ರ ನಿಯಮಗಳಿಗೆ ತಿದ್ದುಪಡಿ; ಹೊಸ ನಿಯಮಗಳ ವಿವರ ಇಲ್ಲಿದೆ.

ಅನುಕಂಪದ ಉದ್ಯೋಗ: 1996ರ ನಿಯಮಗಳಿಗೆ ತಿದ್ದುಪಡಿ; ಹೊಸ ನಿಯಮಗಳ ವಿವರ ಇಲ್ಲಿದೆ.

ಅನುಕಂಪದ ಉದ್ಯೋಗ: 1996ರ ನಿಯಮಗಳಿಗೆ ತಿದ್ದುಪಡಿ; ಹೊಸ ನಿಯಮಗಳ ವಿವರ ಇಲ್ಲಿದೆ.

ಕರ್ನಾಟಕ ರಾಜ್ಯ ನಾಗರಿಕ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು -1996ಗೆ ತಿದ್ದುಪಡಿ ತರಲಾಗಿದೆ. ರಾಜ್ಯ ಸರ್ಕಾರ ಈ ಬಗ್ಗೆ ಪರಿಷ್ಕೃತ ತಿದ್ದುಪಡಿ ನಿಯಮಗಳನ್ನು ಹೊಂದಿರುವ ಅಧಿಸೂಚನೆಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ಅಧೀನ ಕಾರ್ಯದರ್ಶಿ ಪ್ರಕಟಿಸಿದ್ದಾರೆ.


ಅನುಕಂಪದ ಉದ್ಯೋಗದ ಸೌಲಭ್ಯವನ್ನು ಕುಟುಂಬದ ಅವಲಂಬಿತರಿಗೆ ವಿಸ್ತರಿಸುವ ನಿಟ್ಟಿನಲ್ಲಿ ಸರ್ಕಾರ 2021ರ ಫೆಬ್ರವರಿ 2ರಂದು ಅಧಿಸೂಚನೆ ಹೊರಡಿಸಿ ಆಕ್ಷೇಪಣೆಗಳಿದ್ದರೆ ಸಲ್ಲಿಸುವಂತೆ ಆಹ್ವಾನ ನೀಡಿತ್ತು.


ಆಕ್ಷೇಪಣೆಗಳು ಮತ್ತು ತಕರಾರುಗಳನ್ನು ಪರಿಶೀಲಿಸಿದ ಬಳಿಕ 2021ರ ಎಪ್ರಿಲ್ 9ರಂದು ನಿಯಮಗಳಿಗೆ ತಿದ್ದುಪಡಿ ತಂದು ಕರ್ನಾಟಕ ರಾಜ್ಯ ನಾಗರಿಕ ಸೇವಾ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನಿಯಮಗಳು -2021ನ್ನು ಜಾರಿಗೆ ತರಲಾಗಿದೆ.


ಈ ಪ್ರಕಾರ ಅನುಕಂಪದ ನೌಕರಿಯನ್ನು ಮೃತನ ಪತ್ನಿ, ಮಗ ಅಥವಾ ಅವಿವಾಹಿತ ಮಗಳಿಗಷ್ಟೇ ಸೀಮಿತಗೊಳಿಸದೆ ಕುಟುಂಬ ಸದಸ್ಯರೆಲ್ಲರಿಗೂ ವಿಸ್ತರಿಸಲಾಗಿದೆ.


ಹೊಸ ನಿಯಮಗಳು:

ನಿಯಮ 2(ಬಿ) ಪ್ರಕಾರ ಕುಟುಂಬದ ಸದಸ್ಯರಿಗೆ ಅನುಕಂಪದ ಉದ್ಯೋಗ


ಸರ್ಕಾರಿ ಉದ್ಯೋಗಿಯಾಗಿದ್ದ ಪುರುಷ ಸಾವನ್ನಪ್ಪಿದ್ದಲ್ಲಿ ಆತನ ಮೇಲೆ ಅವಲಂಬಿತರಾಗಿದ್ದ ಪತ್ನಿ, ಮಗ ಮತ್ತು ಮಗಳಿಗೆ ಅನುಕಂಪದ ಉದ್ಯೋಗ ಸಿಗಲಿದೆ. ಇದರಲ್ಲಿ ಮಗಳು ಅವಿವಾಹಿತೆ, ವಿವಾಹಿತೆ, ವಿಚ್ಚೇದಿತೆ ಅಥವಾ ವಿಧವೆ ಎಂಬುದು ಹೊಸ ನಿಯಮಗಳಲ್ಲಿ ಪರಿಗಣನೆಯಾಗುವುದಿಲ್ಲ.


ಒಂದು ವೇಳೆ ಮೃತನ ಪತ್ನಿ ನೇಮಕಾತಿಗೆ ಅರ್ಹಳಿಲ್ಲದಿದ್ದರೆ ಅಥವಾ ಆಕೆ ಇಚ್ಚಿಸದಿದ್ದರೆ ಆಕೆ ಸೂಚಿಸುವ ಮಗ ಅಥವಾ ಮಗಳು ಉದ್ಯೋಗಕ್ಕೆ ಅರ್ಹತೆ ಪಡೆಯುತ್ತಾರೆ.


ಒಂದು ವೇಳೆ ಪತ್ನಿ ಮೃತ ನೌಕರಿನಿಗಿಂತ ಮೊದಲೇ ಮೃತಪಟ್ಟಿದ್ದರೆ ಮಕ್ಕಳು ತಮ್ಮ ವಯಸ್ಸಿಗೆ ಅನುಗುಣವಾಗಿ ಆದ್ಯತೆ ನೀಡಲಾಗುತ್ತದೆ.


ಸರ್ಕಾರಿ ಉದ್ಯೋಗಿಯಾಗಿದ್ದ ಮಹಿಳೆ ಸಾವನ್ನಪ್ಪಿದ್ದಲ್ಲಿ ಆಕೆಯ ಮೇಲೆ ಅವಲಂಬಿತರಾಗಿದ್ದ ಪತಿ, ಮಗ ಮತ್ತು ಮಗಳಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆಯುವ ಅರ್ಹತೆ ಪಡೆಯುತ್ತಾರೆ. ಮೊದಲಿಗೆ ಮಕ್ಕಳು ಉದ್ಯೋಗಕ್ಕೆ ಅರ್ಹತೆ ಪಡೆದುಕೊಳ್ಳಲಿದ್ದಾರೆ. ಈ ಪೈಕಿ ಯಾವ ಮಕ್ಕಳಿಗೆ ಉದ್ಯೋಗ ಎಂಬುದನ್ನು ವಿಧುರ ಪತಿ ನಿರ್ಧರಿಸಲಿದ್ದಾರೆ.


ಒಂದು ವೇಳೆ, ಮೃತರ ಮಕ್ಕಳು ಅರ್ಹರಿಲ್ಲದೆ ಇದ್ದರೆ ಅಥವಾ ನೇಮಕಾತಿಗೆ ಇಚ್ಚಿಸದೇ ಇದ್ದರೆ ವಿಧುರ ಪತಿ ನೌಕರಿಗೆ ಅರ್ಜಿ ಹಾಕಲು ಅರ್ಹತೆ ಪಡೆಯುತ್ತಾರೆ.


ಇನ್ನು, ಮೃತ ಮಹಿಳಾ ಉದ್ಯೋಗಿಗಿಂತ ಮೊದಲೇ ಪತಿ ಮೃತಪಟ್ಟಿದ್ದರೆ ಮಕ್ಕಳು ತಮ್ಮ ವಯಸ್ಸಿಗೆ ಅನುಗುಣವಾಗಿ ಆದ್ಯತೆ ನೀಡಲಾಗುತ್ತದೆ.


ಸರ್ಕಾರಿ ಉದ್ಯೋಗಿಯಾಗಿದ್ದ ಪುರುಷ ಸಾವನ್ನಪ್ಪಿದ್ದಲ್ಲಿ ಆತ ಅವಿವಾಹಿತನಾಗಿದ್ದರೆ, ಆತನ ಮೇಲೆ ಅವಲಂಬಿತರಾಗಿದ್ದ ಸಹೋದರಿ ಅಥವಾ ಸಹೋದರ ಉದ್ಯೋಗ ಕೋರಬಹುದಾಗಿದೆ. 


ಯಾವ ಸಹೋದರ/ಸಹೋದರಿಗೆ ಉದ್ಯೋಗ ಎಂಬುದನ್ನು ಮೃತ ನೌಕರನ ತಂದೆ ತಾಯಿ ಆಯ್ಕೆ ಮಾಡಬಹುದಾಗಿದೆ. ಒಂದು ವೇಳೆ, ಈತನ ತಂದೆ, ತಾಯಿ ನಡುವೆ ಭಿನ್ನಾಭಿಪ್ರಾಯ ಉಂಟಾದರೆ, ತಾಯಿಯ ನಿರ್ಧಾರವನ್ನು ಪರಿಗಣಿಸುವುದಾಗಿದೆ.


ಸರ್ಕಾರಿ ಉದ್ಯೋಗಿಯಾಗಿದ್ದ ಪುರುಷ ಸಾವನ್ನಪ್ಪಿದ್ದಲ್ಲಿ ಆತ ಅವಿವಾಹಿತನಾಗಿದ್ದರೆ, ಆತನ ಮೇಲೆ ಅವಲಂಬಿತರಾಗಿದ್ದ ಸಹೋದರಿ ಅಥವಾ ಸಹೋದರ ಉದ್ಯೋಗ ಕೋರಬಹುದಾಗಿದೆ. ಯಾವ ಸಹೋದರ/ಸಹೋದರಿಗೆ ಉದ್ಯೋಗ ಎಂಬುದನ್ನು ಮೃತ ನೌಕರನ ತಂದೆ ತಾಯಿ ಆಯ್ಕೆ ಮಾಡಬಹುದಾಗಿದೆ. ಒಂದು ವೇಳೆ, ಈತನ ತಂದೆ, ತಾಯಿ ನಡುವೆ ಭಿನ್ನಾಭಿಪ್ರಾಯ ಉಂಟಾದರೆ, ತಾಯಿಯ ನಿರ್ಧಾರವನ್ನು ಪರಿಗಣಿಸುವುದಾಗಿದೆ.


ಒಂದು ವೇಳೆ, ಮೃತ ಪುರುಷ ಉದ್ಯೋಗಿಗಿಂತ ಮೊದಲೇ ಅವರ ತಂದೆ/ತಾಯಿ ಮೃತಪಟ್ಟಿದ್ದರೆ ಸಹೋದರ/ಸಹೋದರಿಯರಿಗೆ ತಮ್ಮ ವಯಸ್ಸಿಗೆ ಅನುಗುಣವಾಗಿ ಆದ್ಯತೆ ನೀಡಲಾಗುತ್ತದೆ.ಸರ್ಕಾರಿ ಉದ್ಯೋಗಿಯಾಗಿದ್ದ ಮಹಿಳೆ ಸಾವನ್ನಪ್ಪಿದ್ದಲ್ಲಿ ಆಕೆ ಅವಿವಾಹಿತಳಾಗಿದ್ದರೆ, ಆಕೆಯ ಮೇಲೆ ಅವಲಂಬಿತರಾಗಿದ್ದ ಸಹೋದರಿ ಅಥವಾ ಸಹೋದರ ಉದ್ಯೋಗ ಕೋರಬಹುದಾಗಿದೆ. ಯಾವ ಸಹೋದರ/ಸಹೋದರಿಗೆ ಉದ್ಯೋಗ ಎಂಬುದನ್ನು ಮೃತ ನೌಕರನ ತಂದೆ ತಾಯಿ ಆಯ್ಕೆ ಮಾಡಬಹುದಾಗಿದೆ. ಒಂದು ವೇಳೆ, ಆಕೆಯ ತಂದೆ, ತಾಯಿ ನಡುವೆ ಭಿನ್ನಾಭಿಪ್ರಾಯ ಉಂಟಾದರೆ, ತಾಯಿಯ ನಿರ್ಧಾರವನ್ನು ಪರಿಗಣಿಸುವುದಾಗಿದೆ.


ಒಂದು ವೇಳೆ, ಮೃತ ಮಹಿಳಾ ಉದ್ಯೋಗಿಗಿಂತ ಮೊದಲೇ ಅವರ ತಂದೆ/ತಾಯಿ ಮೃತಪಟ್ಟಿದ್ದರೆ ಸಹೋದರ/ಸಹೋದರಿಯರಿಗೆ ತಮ್ಮ ವಯಸ್ಸಿಗೆ ಅನುಗುಣವಾಗಿ ಆದ್ಯತೆ ನೀಡಲಾಗುತ್ತದೆ.ಅನುಕಂಪದ ನೌಕರಿಗೆ ಅರ್ಜಿ ಸಲ್ಲಿಸುವ ವೇಳೆ ಅರ್ಜಿದಾರರ ವಯೋಮಿತಿ 55 ದಾಟಿರಬಾರದು.


ಸರ್ಕಾರಿ ನೌಕರರು ಮೃತಪಟ್ಟ ಒಂದು ವರ್ಷದ ಒಳಗೆ ಅವಲಂಬಿತರು ಅನುಕಂಪದ ಉದ್ಯೋಗ ಕೋರಿ ಮೃತ ವ್ಯಕ್ತಿ ಕೆಲಸ ಮಾಡುತ್ತಿದ್ದ ಇಲಾಖೆಯ ಮುಖ್ಯಸ್ಥರಿಗೆ ನಿಗದಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಬೇಕು.


ಒಂದು ವೇಳೆ, ಅನುಕಂಪದ ಉದ್ಯೋಗಕ್ಕೆ ಅರ್ಹರಿದ್ದವರು ಅಪ್ರಾಪ್ತರಾಗಿದ್ದಲ್ಲಿಲ ನೌಕರ ಮೃತಪಟ್ಟ 2 ವರ್ಷಗಳಲ್ಲಿ 18 ವರ್ಷ ವಯಸ್ಸು ಪೂರೈಸಬೇಕು. ನಂತರದ ಎರಡು ವರ್ಷಗಳ ಒಳಗೆ ಅರ್ಜಿ ಸಲ್ಲಿಸಬೇಕು.
Ads on article

Advertise in articles 1

advertising articles 2

Advertise under the article