-->
ಇಂಡಿಯನ್ ಲಾ ರಿಪೋರ್ಟ್ ತೀರ್ಪುಗಳು ದ್ವಿಭಾಷೆಯಲ್ಲಿ ಲಭ್ಯ: ಇಲ್ಲಿದೆ ಮಾಹಿತಿ

ಇಂಡಿಯನ್ ಲಾ ರಿಪೋರ್ಟ್ ತೀರ್ಪುಗಳು ದ್ವಿಭಾಷೆಯಲ್ಲಿ ಲಭ್ಯ: ಇಲ್ಲಿದೆ ಮಾಹಿತಿ

ಇಂಡಿಯನ್ ಲಾ ರಿಪೋರ್ಟ್ ತೀರ್ಪುಗಳು ದ್ವಿಭಾಷೆಯಲ್ಲಿ ಲಭ್ಯ: ಇಲ್ಲಿದೆ ಮಾಹಿತಿ

ಕರ್ನಾಟಕ ಹೈಕೋರ್ಟ್‌ ತೀರ್ಪುಗಳನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಒದಗಿಸುವ ಇಂಡಿಯನ್ ಲಾ ರಿಪೋರ್ಟ್ ತೀರ್ಪುಗಳು ಎಲ್ಲರಿಗೂ ಸುಲಭವಾಗಿ ಲಭ್ಯವಾಗಿದೆ.


ಇಂಡಿಯನ್ ಲಾ ರಿಪೋರ್ಟ್‌ (E-ILR) ಸೇವೆಯನ್ನು ಮುಕ್ತವಾಗಿ ಎಲ್ಲರಿಗೂ ಸಿಗುವಂತೆ ಮಾಡಲಾಗಿದ್ದು, ಈ ಸೇವೆಯನ್ನು ಇನ್ನು ಮುಂದೆ ನ್ಯಾಯಾಧೀಶರು, ವಕೀಲರು, ನ್ಯಾಯಾಂಗ ನೌಕರರು ಮತ್ತು ಸಾರ್ವಜನಿಕರು ಉಚಿತವಾಗಿ ಪಡೆಯಬಹುದು.ಮೊದಲು ಈ ವ್ಯವಸ್ಥೆ ಪುಸ್ತಕ ರೂಪದಲ್ಲಿ ದೊರೆಯುತ್ತಿತ್ತು. ಇದಕ್ಕೆ ವಕೀಲರು ದೊಡ್ಡ ಮೊತ್ತದ ಹಣವನ್ನು ಪಾವತಿಸಬೇಕಿತ್ತು. ಈಗ ಈ ತೀರ್ಪುಗಳು ಡಿಜಿಟಲ್ ರೂಪದಲ್ಲಿ ದೊರೆಯುತ್ತಿರುವುದು ನ್ಯಾಯಾಂಗದ ತೀರ್ಪುಗಳು ಎಲ್ಲರಿಗೂ ದೊರೆಯುವಂತಾಗಿದೆ.


ಡಿಜಿಟಲ್ ರೂಪಕ್ಕೆ ಹಲವು ಬಳಕೆದಾರ ಸ್ನೇಹಿ ಅಂಶಗಳನ್ನು ಸೇರ್ಪಡೆಗೊಳಿಸಲಾಗಿದೆ.  ನ್ಯಾಯಮೂರ್ತಿಗಳು, ನ್ಯಾಯಾಂಗ ಅಧಿಕಾರಿಗಳು, ವಕೀಲರು, ದಾವೆದಾರರು, ಸರ್ಕಾರಿ ಅಧಿಕಾರಿಗಳು, ಕಾನೂನು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ಈ ತೀರ್ಪುಗಳು ಮುಕ್ತವಾಗಿ ಹಾಗೂ ಉಚಿತವಾಗಿ ಲಭ್ಯವಾಗಲಿದೆ.


ಭಾಷಾಂತರಿಸಿದ ತೀರ್ಪುಗಳ ಜೊತೆಗೆ ಡಿಜಿಟಲ್ ಕಾನೂನು ವರದಿಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಒದಗಿಸುವ ಕೃತಕ ಬುದ್ದಿಮತ್ತೆ ಆಧಾರಿತ ಕಾನೂನು ಭಾಷಾಂತರ ಸಲಹಾ ಸಮಿತಿಯ ಉದ್ದೇಶವನ್ನು ದ್ವಿಭಾಷಾ ಇ-ಐಎಲ್‌ಆರ್ ಮೂಲಕ ಸಾಕಾರಗೊಂಡಿದೆ.

ಹೆಚ್ಚಿನ ವಿವರಗಳಿಗೆ ಈ ಕೆಳಗಿನ ವೆಬ್ ಲಿಂಕ್ ಕ್ಲಿಕ್ ಮಾಡಬಹುದು

http://hck.gov.in.ilr


ಇಂಡಿಯನ್ ಲಾ ರಿಪೋರ್ಟ್ ತೀರ್ಪುಗಳು ದ್ವಿಭಾಷೆಯಲ್ಲಿ ಲಭ್ಯ: ಇಲ್ಲಿದೆ ಮಾಹಿತಿAds on article

Advertise in articles 1

advertising articles 2

Advertise under the article