-->
ಯುವ ವಕೀಲರಿಗೆ ನಿಗದಿತ ಸಂಭಾವನೆ ನೀಡಲು ಕ್ರಮ ಕೈಗೊಳ್ಳಿ: ಬಿಸಿಐಗೆ ಹೈಕೋರ್ಟ್ ನಿರ್ದೇಶನ

ಯುವ ವಕೀಲರಿಗೆ ನಿಗದಿತ ಸಂಭಾವನೆ ನೀಡಲು ಕ್ರಮ ಕೈಗೊಳ್ಳಿ: ಬಿಸಿಐಗೆ ಹೈಕೋರ್ಟ್ ನಿರ್ದೇಶನ

ಯುವ ವಕೀಲರಿಗೆ ನಿಗದಿತ ಸಂಭಾವನೆ ನೀಡಲು ಕ್ರಮ ಕೈಗೊಳ್ಳಿ: ಬಿಸಿಐಗೆ ಹೈಕೋರ್ಟ್ ನಿರ್ದೇಶನ


ಹೊಸತಾಗಿ ವಕೀಲ ವೃತ್ತಿಯಲ್ಲಿ ತೊಡಗಿಸಿಕೊಂಡ ನವ ವಕೀಲರಾಗಿ ಮತ್ತು ಇಂಟರ್ನಿಗಳಿಗೆ ನಿರ್ದಿಷ್ಟ ಸ್ಟೈಫಂಡ್ ಅಥವಾ ಗೌರವಯುತ ಸಂಭಾವನೆಯನ್ನು ನಿಗದಿಪಡಿಸುವ ವಿಚಾರವನ್ನು ತಕ್ಷಣದಲ್ಲೇ ನಿರ್ಧರಿಸಿ ಎಂದು ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಮತ್ತು ದೆಹಲಿ ಬಾರ್ ಕೌನ್ಸಿಲ್‌ಗೆ ದೆಹಲಿ ಹೈಕೋರ್ಟ್ ನಿರ್ದೇಶನ ನೀಡಿದೆ.ಅಶೀಶ್ ಶೆರಾನ್ ಎಂಬ ಯುವ ವಕೀಲ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (IPL)ಯನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾ. ಮನ್ಮೀತ್ ಪ್ರೀತಮ್ ಸಿಂಗ್ ಅರೋರಾ ಅವರಿದ್ದ ವಿಭಾಗೀಯ ಪೀಠ ನಿರ್ದೇಶನ ನೀಡಿದೆ.ಅರ್ಜಿದಾರರು ಬಿಸಿಐ ಮತ್ತು ಬಿಸಿಡಿಗೆ ಈಗಾಗಲೇ ಲಿಖಿತ ಮನವಿ ಸಲ್ಲಿಸಿದ್ದಾರೆ. ಆದರೆ, ಈ ವಿಚಾರವಾಗಿ ಪ್ರಾಧಿಕಾರಗಳು ಇನ್ನೂ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಮನವಿಯನ್ನು ಪರಿಗಣಿಸಲು ಮತ್ತು ಅದನ್ನು ಇತ್ಯರ್ಥಪಡಿಸಲು ಪ್ರಾಧಿಕಾರಿಗಳಿಗೆ ಸ್ವಲ್ಪ ಸಮಯಾವಕಾಶ ಬೇಕಾಗಿದೆ. ಈ ಹಂತದಲ್ಲಿ ಅರ್ಜಿಯು ಅಕಾಲಿಕವಾಗಿದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.


ಅದೇ ರಿತಿ. ಈ ಹಂತದಲ್ಲಿ ಅರ್ಜಿಯ ಕೋರಿಕೆಗೆ ಸಂಬಂಧಿಸಿದಂತೆ ಶೀಘ್ರವಾಗಿ ಕ್ರಮ ಕೈಗೊಳ್ಳಲು ಭಾರತೀಯ ವಕೀಲರ ಪರಿಷತ್ತು ಮತ್ತು ದೆಹಲಿ ಬಾರ್ ಕೌನ್ಸಿಲ್‌ಗೆ ನಿರ್ದೇಶನ ನೀಡಿ ಅರ್ಜಿಯನ್ನು ನ್ಯಾಯಪೀಠ ಇತ್ಯರ್ಥಪಡಿಸಿತು.


ಕಾನೂನು ಕ್ಷೇತ್ರದಲ್ಲಿ ಸಾಧನೆ ಮಾಡುವವರಿಗೆ ಆರ್ಥಿಕ ಸ್ಥಿರತೆ ಅಗತ್ಯ. ಆದರೆ, ಆರ್ಥಿಕ ಸಂಕಷ್ಟಗಳ ಕಾರಣಕ್ಕೆ ಪ್ರತಿಭಾವಂತ ವ್ಯಕ್ತಿಗಳೂ ನಿರುತ್ಸಾಹಗೊಳ್ಳುತ್ಥಾರೆ. ಇದರಿಂದ ಪ್ರತಿಭಾನ್ವಿತ ವಕೀಲರು ಅರ್ಧಕ್ಕೆ ಕಮರಿ ಹೋಗುತ್ತಾರೆ, ಇಲ್ಲವೇ ವೈಯಕ್ತಿಕ ಸಮಸ್ಯೆಯಿಂದ ತೊಳಲಾಡುತ್ತಾರೆ. ಇದರಿಂದ ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯಿಂದ ಬಂದವರು ವಕೀಲ ವೃತ್ತಿಯಲ್ಲಿ ಮುಂದುವರಿಯಲು ಸಾಧ್ಯವಾಗುತ್ತಿಲ್ಲ ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.


ವಕೀಲರಾಗಿ ವೃತ್ತಿಪರ ಬೆಳವಣಿಗೆಗೆ ಅಡ್ಡಿಯಾಗುತ್ತಿರುವ ಆರ್ಥಿಕ ಸಮಸ್ಯೆಗಳಿಂದ ಹೊರಬರಲು ಯುವ ವಕೀಲರು ಮತ್ತು ಇಂಟರ್ನಿಗಳಿಗೆ ಸ್ಟ್ಯಾಂಡರ್ಡ್‌ ಸ್ಟೈಫಂಡ್ ಮತ್ತು ಸಂಭಾವನೆ ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸಬೇಕು ಎಂದು ಅರ್ಜಿಯಲ್ಲಿ ಕೋರಿದ್ದರು.Ads on article

Advertise in articles 1

advertising articles 2

Advertise under the article