ಬೇಸಿಗೆ ಹಿನ್ನೆಲೆ: ವಕೀಲರ ಕೋಟ್ ವಸ್ತ್ರಸಂಹಿತೆಗೆ ವಿನಾಯಿತಿ: ವಕೀಲರ ಸಂಘದ ಮನವಿಗೆ ಹೈಕೋರ್ಟ್ ಗ್ರೀನ್ ಸಿಗ್ನಲ್
Tuesday, April 16, 2024
ಬೇಸಿಗೆ ಹಿನ್ನೆಲೆ: ವಕೀಲರ ಕೋಟ್ ವಸ್ತ್ರಸಂಹಿತೆಗೆ ವಿನಾಯಿತಿ: ವಕೀಲರ ಸಂಘದ ಮನವಿಗೆ ಹೈಕೋರ್ಟ್ ಗ್ರೀನ್ ಸಿಗ್ನಲ್
ಬೇಸಿಗೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ವಿಚಾರಣಾ ನ್ಯಾಯಾಲಯಗಳಲ್ಲಿ ವಕೀಲರು ಕರಿ ಕೋಟು ಧರಿಸಿ ವಸ್ತ್ರ ಸಂಹಿತೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿಲ್ಲ ಎಂದು ಕರ್ನಾಟಕ ಹೈಕೋರ್ಟ್ ವಿನಾಯಿತಿ ನೀಡಿದೆ.
ಬೇಸಿಗೆ ಮುಗಿಯುವ ತನಕ ವಕೀಲರಿಗೆ ಈ ವಿನಾಯಿತಿಯ ಲಾಭ ಸಿಗಲಿದ್ದು, ವಕೀಲರ ಸಂಘದ ಈ ಪ್ರಸ್ತಾಪಕ್ಕೆ ಮುಖ್ಯ ನ್ಯಾಯಮೂರ್ತಿ ಎನ್. ವಿ. ಅಂಜಾರಿಯಾ ಅವರು ಗ್ರೀನ್ ಸಿಗ್ನಲ್ ನೀಡಿದ್ದಾರೆ ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಹೇಳಿದ್ದಾರೆ.
ಬೇಸಿಗೆ ಮುಗಿಯುವವರೆಗೆ ವಕೀಲರಿಗೆ ಸೆಖೆಯಿಂದ ಕೋಟು ಧರಿಸುವ ಪರಿಸ್ಥಿತಿಯಿಂದ ಮುಕ್ತಿ ಸಿಗಲಿದೆ. ವಿಪರೀತ ಸೆಖೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲ ವಿಚಾರಣಾ ನ್ಯಾಯಾಲಯಗಳಲ್ಲಿ ವಕೀಲರು ಕೋಟು ಧರಿಸದೆ ಕೋರ್ಟ್ ಕಲಾಪದಲ್ಲಿ ಭಾಗವಹಿಸಬಹುದು. ಈ ವಿನಾಯಿತಿಗೆ ಸ್ವತಃ ಸಿಜೆ ಸಮ್ಮತಿ ನೀಡಿದ್ದಾರೆ ಎಂದು ಅವರು ಹೇಳಿದ್ದಾರೆ.