-->
ಕಾನೂನು ವೃತ್ತಿ ಪವಿತ್ರದ್ದು; ಈ ವೃತ್ತಿಗೆ ಪ್ರಬುದ್ಧರು ಬರುವಂತಾಗಬೇಕು: ಸುಪ್ರೀಂ ಕೋರ್ಟ್‌

ಕಾನೂನು ವೃತ್ತಿ ಪವಿತ್ರದ್ದು; ಈ ವೃತ್ತಿಗೆ ಪ್ರಬುದ್ಧರು ಬರುವಂತಾಗಬೇಕು: ಸುಪ್ರೀಂ ಕೋರ್ಟ್‌

ಕಾನೂನು ವೃತ್ತಿ ಪವಿತ್ರದ್ದು; ಈ ವೃತ್ತಿಗೆ ಪ್ರಬುದ್ಧರು ಬರುವಂತಾಗಬೇಕು: ಸುಪ್ರೀಂ ಕೋರ್ಟ್‌

ಕಾನೂನು ಪದವಿ (ಎಲ್‌ಎಲ್‌ಬಿ) ಶೈಕ್ಷಣಿಕ ಕೋರ್ಸ್‌ನ ಅವಧಿಯನ್ನು ಇಳಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಳ್ಳಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ.


"ಅಶ್ವಿನಿ ಕುಮಾರ್ ಉಪಾಧ್ಯಾಯ Vs ಭಾರತ ಸರ್ಕಾರ" ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಈ ತೀರ್ಪು ನೀಡಿದೆ. ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಮತ್ತು ನ್ಯಾ. ಜೆ.ಬಿ. ಪರ್ದಿವಾಲಾ ಅವರಿದ್ದ ನ್ಯಾಯಪೀಠ, ವಕೀಲ ವೃತ್ತಿ ಪ್ರವೇಶಿಸುವ ಮುನ್ನ ವಿದ್ಯಾರ್ಥಿಗಳು ಕೇವಲ ಮೂರು ವರ್ಷ ಕಾನೂನು ಅಧ್ಯಯನ ಮಾಡಿದರೆ ಸಾಕು ಎಂಬ ವಾದವನ್ನು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದರು.


ಕಾನೂನು ವೃತ್ತಿಗೆ ಪ್ರಬುದ್ಧರು ಬರಬೇಕಾದ ಅಗತ್ಯವಿದೆ. ಐದು ವರ್ಷಗಳ ಶೈಕ್ಷಣಿಕ ಪದವಿ ತುಂಬಾ ಪ್ರಯೋಜನಕಾರಿ ಮತ್ತು ಪರಿಣಾಮಕಾರಿ ಎಂಬುದು ಸಾಬೀತಾಗಿದೆ ಎಂದು ಹೇಳಿದ ನ್ಯಾ. ಚಂದ್ರಚೂಡ್, ನಾವೆಲ್ಲ ಮೂರು ವರ್ಷ ಬಿ.ಎ. ಪದವಿ ಅಧ್ಯಯನ ಮಾಡಿ ನಂತರ ಕಾನೂನು ವ್ಯಾಸಂಗ ಮಾಡುತ್ತಿದ್ದೆವು ಎಂಬುದನ್ನು ನೆನಪಿಸಿದರು.


ಅವಧಿ ಕಿರಿದು ಮಾಡಬೇಕು ಎಂಬ ವಾದ ಮಂಡಿಸಿದ ವಕೀಲರ ವಾದವನ್ನು ಕೇಳಿ ಅಸಮಾಧಾನಗೊಂಡ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಒಂದು ಹಂತದಲ್ಲಿ "ಮೂರು ವರ್ಷದ ಕೋರ್ಸ್‌ ಆದರೂ ಏಕೆ ಬೇಕು. ಹೈಸ್ಕೂಲ್ ಮುಗಿಯುತ್ತಿದ್ದಂತೆಯೇ ಪ್ರ್ಯಾಕ್ಟೀಸ್ ಆರಂಭಿಸಬಹುದು" ಎಂದು ಮಾರ್ಮಿಕವಾಗಿ ನುಡಿದರು.


ಅಂತಿಮವಾಗಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹಿಂದಕ್ಕೆ ಪಡೆಯಲು ಅರ್ಜಿದಾರರಿಗೆ ಅನುಮತಿ ನೀಡಲಾಯಿತು.


ಈಗ ಇರುವ ನಿಯಮದ ಪ್ರಕಾರ, ಪದವಿ ಪೂರ್ವ ಶಿಕ್ಷಣ ಪಡೆದ ಬಳಿಕ ನೇರವಾಗಿ ಎಲ್‌ಎಲ್‌ಬಿ ಪದವಿ ಪಡೆಯಲು ಬಯಸುವವರು ಐದು ವರ್ಷಗಳ ಅಧ್ಯಯನ ಮಾಡಬೇಕಾಗುತ್ತದೆ. ಆಧರೆ, ಯಾವುದೇ ಅನ್ಯ ಪದವಿ ಪಡೆದು ಕಾನೂನು ವ್ಯಾಸಂಗ ಮಾಡಲು ಬಯಸಿದರೆ ಅಂಥವರು ಮೂರು ವರ್ಷಗಳ ಕಾನೂನು ಪದವಿ(ಎಲ್‌ಎಲ್‌ಬಿ) ಶಿಕ್ಷಣ ಪಡೆಯಬಹುದಾಗಿದೆ.Ads on article

Advertise in articles 1

advertising articles 2

Advertise under the article