ಲೋಕ ಅದಾಲತ್ ಪೀಠಾಸೀನ ಅಧಿಕಾರಿ ನ್ಯಾಯಾಧೀಶರ ನೆಲೆಯಲ್ಲಿ ಆದೇಶ ಹೊರಡಿಸಲಾಗದು: ಕರ್ನಾಟಕ ಹೈಕೋರ್ಟ್ ತೀರ್ಪು
ಲೋಕ ಅದಾಲತ್ ಪೀಠಾಸೀನ ಅಧಿಕಾರಿ ನ್ಯಾಯಾಧೀಶರ ನೆಲೆಯಲ್ಲಿ ಆದೇಶ ಹೊರಡಿಸಲಾಗದು: ಕರ್ನಾಟಕ ಹೈಕೋರ್ಟ್ ತೀರ್ಪು
ಲೋಕ ಅದಾಲತ್‌ನ ಪೀಠಾಸೀನ ಅಧಿಕಾರಿಯೊಬ್ಬರು ‘ನ್ಯಾಯಾಧೀಶರ’ ಕರ್ತವ್ಯವನ್ನು ನಿಭಾಯಿಸುವ ಹಾಗಿಲ್ಲ. ಅವರ ಪಾತ್ರ ಕೇವಲ ರಾಜಿ ಸಂಧಾನಕಾರರದ್ದು ಮಾತ್ರ ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಸಿಂಧಗಿ ತಾಲೂಕು ಕಾನೂನು ಪ್ರಾಧಿಕಾರ (ಲೋಕ ಅದಾಲತ್) ಜಾರಿಗೊಳಿಸಿರುವ ರಾಜಿ ಆದೇಶವನ್ನು ರದ್ದುಪಡಿಸಲು ಕೋರಿ ಸಲ್ಲಿಸಿದ ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾ. ಶ್ರೀಶಾನಂದ ಅವರಿದ್ದ ಕರ್ನಾಟಕ ಹೈಕೋರ್ಟ್‌ನ ಕಲ್ಬುರ್ಗಿ ವಿಭಾಗೀಯ ಏಕ ಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಸಿವಿಲ್ ಪ್ರಕ್ರಿಯಾ ಸಂಹಿತೆ (ಸಿಪಿಸಿ) ಆದೇಶ 23 ನಿಯಮ 3ರ ಪ್ರಕಾರ ಸಲ್ಲಿಸಲಾಗುವ ಯಾವುದೇ ಅರ್ಜಿಯನ್ನು ಅಥವಾ ನ್ಯಾಯಾಂಗ ಆದೇಶಗಳನ್ನು ಲೋಕ ಅದಾಲತ್ ಪರಿಗಣಿಸಲು ಸಾಧ್ಯವಿಲ್ಲ ಎಂದು ನ್ಯಾಯಪೀಠ ಹೇಳಿದೆ.
ವಾದ ವಿವಾದ ಆಲಿಸಿದ ನ್ಯಾಯಪೀಠ, ಅರ್ಜಿದಾರರು ಸಲ್ಲಿಸಿದ ಅರ್ಜಿಯನ್ನು ಪುರಸ್ಕರಿಸಿ, ಸಿಂಧಗಿ ತಾಲೂಕು ಕಾನೂನು ಪ್ರಾಧಿಕಾರ( ಲೋಕ ಅದಲಾತ್ ) ಹೊರಡಿಸಿದ ರಾಜಿ ಒಪ್ಪಂದವನ್ನು ರದ್ದುಪಡಿಸಿತು.
ಪ್ರಕರಣ: ಪೂಜಾ Vs ಸಿದ್ದಣ್ಣ
ಕರ್ನಾಟಕ ಹೈಕೋರ್ಟ್, WP 205205/2019, Dated 18-03-2024