ಮೈಂಡ್ ಆಫ್ ಡಿಕ್ಟೇಟರ್: ಪ್ರಧಾನಿ ಕುರಿತ ವೀಡಿಯೋ ಹಂಚಿಕೊಂಡ ವಕೀಲರ ವಿರುದ್ಧ ಎಫ್‌ಐಆರ್
ಮೈಂಡ್ ಆಫ್ ಡಿಕ್ಟೇಟರ್: ಪ್ರಧಾನಿ ಕುರಿತ ವೀಡಿಯೋ ಹಂಚಿಕೊಂಡ ವಕೀಲರ ವಿರುದ್ಧ ಎಫ್‌ಐಆರ್
ಲೋಕಸಭಾ ಚುನಾವಣೆ ವೇಳೆ ಮತದಾರರ ಮೇಲೆ ಪ್ರಭಾವ ಬೀರುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾದ ಯೂಟ್ಯೂಬರ್ ಧ್ರುವ ರಾಠಿ ಅವರ ಮೈಂಡ್ ಆಫ್ ಡಿಕ್ಟೇಟರ್ ಎಂಬ ವೀಡಿಯೋ ಹಂಚಿಕೊಂಡ ವಕೀಲರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ವಕೀಲ ಜಯಂತ್ ವಾಲಿಂಜ್ಕರ್ ಅವರು ನೀಡಿದ ದೂರಿನ ಮೇರೆಗೆ ನ್ಯಾಯವಾದಿ ಆದೇಶ್ ಬನ್ಸೋಡೆ ಎಂಬವರ ವಿರುದ್ಧ ಮೀರಾ ಭಯಂದರ್ ವಸಾಯಿ ವಿರಾರ್ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.
ವಸಾಯ್ ನ್ಯಾಯಾಲಯ ವಕೀಲರ ಸಂಘದ ವಾಟ್ಸ್ಯಾಪ್ ಗ್ರೂಪ್‌ನಲ್ಲಿ ಮೈಂಡ್ ಆಫ್ ಡಿಕ್ಟೇಟರ್ ಎಂಬ ಶೀರ್ಷಿಕೆ ಹೊಂದಿರುವ ಯೂಟ್ಯೂಬರ್ ಧ್ರುವ ರಾಠಿ ಅವರ ವೀಡಿಯೋ ಹಂಚಿಕೊಂಡಿದ್ದು, ನಿಮ್ಮ ಮತ ಚಲಾಯಿಸುವ ಮೊದಲು ಈ ವೀಡಿಯೋ ವೀಕ್ಷಿಸಿ ಎಂಬ ಸಂದೇಶವನ್ನು ಹಾಕಿದ್ದರು. ಈ ಕೃತ್ಯವನ್ನು ಅವರು ಉದ್ದೇಶಪೂರ್ವಕವಾಗಿ ಮಾಡಿದ್ದು, ಚುನಾವಣೆಯ ಸಂದರ್ಭದಲ್ಲಿ ಮತದಾರರ ಮೇಲೆ ಪ್ರಭಾವ ಬೀರಿದ್ಧಾರೆ ಎಂದು ಆರೋಪಿಸಲಾಗಿದೆ.
ವಕೀಲರು ಹಂಚಿಕೊಂಡ ವೀಡಿಯೋ ಮತ್ತು ಸಂದೇಶವು ಲೋಕಸಭಾ ಚುನಾವಣಾ ಅಭ್ಯರ್ಥಿಗಳ ಬಗ್ಗೆ ಸುಳ್ಳು ಮಾಹಿತಿ ನೀಡಿ ಮತದಾರರ ಮೇಲೆ ಪ್ರಭಾವ ಬೀರಲು ಯತ್ನ ನಡೆಸಲಾಗಿದೆ ಎಂದು ಆರೋಪಿಸಲಾಗಿದ್ದು, ಪೊಲೀಸ್ ಆಯುಕ್ತರ ನಿರ್ಬಂಧಕಾಜ್ಞೆಗಳನ್ನು ಉಲ್ಲಂಘಿಸಲಾಗಿದೆ ಎಂದು ಎಫ್‌ಐಆರ್‌ನಲ್ಲಿ ತಿಳಿಸಲಾಗಿದೆ.