ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ: ಕೈ ನಾಯಕನಿಗೆ ಕೋರ್ಟ್ ಸಮನ್ಸ್!
ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ: ಕೈ ನಾಯಕನಿಗೆ ಕೋರ್ಟ್ ಸಮನ್ಸ್!
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಪುಣೆಯ ಕೋರ್ಟ್ ಸಮನ್ಸ್ ಜಾರಿಗೊಳಿಸಿದೆ.
ವಿನಾಯಕ ದಾಮೋದರ ಸಾವರ್ಕರ್ ಅವರ ವಿರುದ್ಧ ಇಂಗ್ಲೆಂಡ್‌ನಲ್ಲಿ ಭೇಟಿ ನೀಡಿದ್ದ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವಮಾನಕಾರಿ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಿ ಸಾವರ್ಕರ್ ಮೊಮ್ಮಗ ಸಾತ್ಯಕಿ ಈ ಮೊಕದ್ದಮೆಯನ್ನು ದಾಖಲಿಸಿದ್ದಾರೆ.
ಈ ದೂರಿನ ಸಂಜ್ಞೇಯತೆಯನ್ನು ಪಡೆದುಕೊಂಡ ಪುಣೆಯ ನ್ಯಾಯಿಕ ದಂಡಾಧಿಕಾರಿ ಅಕ್ಷಿ ಜೈನ್ ಅವರು ಸಮನ್ಸ್ ಜಾರಿ ಮಾಡಿದ್ದು, ಆಗಸ್ಟ್ 19ರಂದು ಹಾಜರಾಗುವಂತೆ ಆದೇಶ ನೀಡಿದ್ಧಾರೆ.
ಸದ್ರಿ ಮಾನಹಾನಿ ದೂರಿನ ಕುರಿತು ಸಿಆರ್‌ಪಿಸಿ ಸೆಕ್ಷನ್ 202ರ ಪ್ರಕಾರ ತನಿಖೆ ನಡೆಸುವಂತೆ ಪುಣೆ ಪೊಲೀಸರಿಗೆ ಸೂಚನೆ ನೀಡಿತ್ತು. ಪೊಲೀಸರು ಮೇ 27ರಂದು ನ್ಯಾಯಾಧೀಶರ ಮುಂದೆ ತನಿಖಾ ವರದಿಯನ್ನು ಸಲ್ಲಿಸಿದ್ದರು.
ಇದರ ನಂತರ ನ್ಯಾಯಾಲಯ ಸದ್ರಿ ದೂರಿನ ಆಧಾರದಲ್ಲಿ ರಾಹುಲ್ ಗಾಂಧಿ ವಿರುದ್ಧ ಕಾನೂನು ಪ್ರಕ್ರಿಯೆಯನ್ನು ಮುಂದುವರಿಸಲು ಆದೇಶ ನೀಡಿದ್ಧಾರೆ.
ರಾಹುಲ್ ಗಾಂಧಿಯವರು ಮಾನಹಾನಿಕರ ಆರೋಪಗಳ ಭಾಷಣವನ್ನು ಇಂಗ್ಲೆಂಡ್‌ನಲ್ಲಿ ಮಾಡಿದ್ದರೂ ಅದರ ಪರಿಣಾಮ ಪುಣೆಯಲ್ಲಿ ಅನುಭವಿಸಲಾಯಿತು. ಏಕೆಂದರೆ ಅದು ಭಾರತದಾದ್ಯಂತ ಪ್ರಕಟವಾಯಿತು ಮತ್ತು ಮರು ಪ್ರಸಾರವಾಯಿತು ಎಂದು ಸಾತ್ಯಕಿ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ.