-->
PTCL ಕಾಯ್ದೆಗೆ ತಿದ್ದುಪಡಿ: ಪರಿಶಿಷ್ಟರ ಭೂಮಿ ವರ್ಗಾವಣೆಗೆ ನಿಯಮ ಬಿಗಿ; ಹೊಸ ನಿಯಮಗಳೇನು..?

PTCL ಕಾಯ್ದೆಗೆ ತಿದ್ದುಪಡಿ: ಪರಿಶಿಷ್ಟರ ಭೂಮಿ ವರ್ಗಾವಣೆಗೆ ನಿಯಮ ಬಿಗಿ; ಹೊಸ ನಿಯಮಗಳೇನು..?

PTCL ಕಾಯ್ದೆಗೆ ತಿದ್ದುಪಡಿ: ಪರಿಶಿಷ್ಟರ ಭೂಮಿ ವರ್ಗಾವಣೆಗೆ ನಿಯಮ ಬಿಗಿ; ಹೊಸ ನಿಯಮಗಳೇನು..?





ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಮುದಾಯಕ್ಕೆ ಸರ್ಕಾರ ನೀಡಿದ ಭೂಮಿಯನ್ನು ವರ್ಗಾವಣೆ ಮಾಡಲು ಹಾಲಿ ಇರುವ ಕಾಯ್ದೆಯಲ್ಲಿನ ನಿಯಮಗಳಿಗೆ ತಿದ್ದುಪಡಿ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.


ಕರ್ನಾಟಕ ಅನುಸೂಚಿತ ಜಾತಿಗಳ ಮತ್ತು ಅನುಸೂಚಿತ ಬುಡಕಟ್ಟುಗಳ (ಕೆಲವು ಭೂಮಿಗಳ ವರ್ಗಾವಣೆ ನಿಷೇಧ) ನಿಯಮಗಳು 1979ರಲ್ಲಿನ ನಿಯಮಗಳನ್ನು ತಿದ್ದುಪಡಿ ಮಾಡಿ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ.


ಎಸ್‌ಸಿ, ಎಸ್‌ಟಿ ಸಮುದಾಯದ ಜನರಿಗೆ ಮಂಜೂರು ಮಾಡಿದ ಭೂಮಿಗಳನ್ನು ಮಾರಾಟ ಇಲ್ಲವೇ ವರ್ಗಾವಣೆ ಮಾಡಲು ಕೋರಿ ಬಂದ ಅರ್ಜಿಗಳನ್ನು ಹಲವು ಹಂತದಲ್ಲಿ ಪರಿಶೀಲನೆ ನಂತರವೇ ಅನುಮತಿ ನೀಡಲು ಅವಕಾಶವಾಗುವಂತೆ ಬಿಗಿ ನಿಯಮಗಳನ್ನು ಕಾಯ್ದೆಯಲ್ಲಿ ಸೇರ್ಪಡೆ ಮಾಡಲಾಗಿದೆ.


ಹೊಸ ನಿಯಮಗಳೇನು..?

PTCL ಕಾಯ್ದೆಯಡಿ ಮಂಜೂರಾದ ಭೂಮಿಯ ಹಕ್ಕು ವರ್ಗಾವಣೆಗೆ ಅನುಮತಿ ಕೋರುವ ಮಂಜೂರಾತಿ ಪಡೆದವನು ಅಥವಾ ಆತನ ಕಾನೂನಾತ್ಮಕ ವಾರದುದಾರರು ನಿಗದಿಪಡಿಸಿದ ನಮೂನೆಯಲ್ಲಿ ಅರ್ಜಿಯನ್ನು ಭರ್ತಿ ಮಾಡಿ ತಾಲೂಕು ತಹಶೀಲ್ದಾರರಿಗೆ ಖುದ್ದಾಗಿ ಸಲ್ಲಿಸಬೇಕು.

ತಹಶೀಲ್ದಾರರು ಸೂಕ್ತವಾದ ವಿಚಾರಣೆ ಮಾಡಿ, ಸಲ್ಲಿಸಿದ ದಾಖಲೆಯನ್ನು ಪರಿಶೀಲಿಸಿ ತಮ್ಮ ಅಭಿಪ್ರಾಯದೊಂದಿಗೆ ಉಪ-ವಿಭಾಗಾಧಿಕಕಾರಿಯವರಿಗೆ ಸಲ್ಲಿಸಬೇಕು.

ಉಪವಿಭಾಗಾಧಿಕಾರಿಯವರು ಈ ವರದಿಯನ್ನು ಸಂಪೂರ್ಣವಾಗಿ ಪರಿಶೀಲಿಸಿದ ನಂತರ ಭೂಮಿಯ ವರ್ಗಾವಣೆಗೆ ಅನುಮತಿ ನೀಡಬಹುದು ಎಂಬ ಬಗ್ಗೆ ಜಿಲ್ಲಾಧಿಕಾರಿಗೆ ಶಿಫಾರಸು ಮಾಡಬೇಕು.

ಅಧಿಕಾರಿಗಳ ಪರಿಶೀಲನೆ ವೇಳೆ, ದಬ್ಬಾಳಿಕೆ, ತಪ್ಪು ನಿರೂಪಣೆ, ಮೋಸ ಇಲ್ಲವೇ ಭೂಮಿಯ ತಪ್ಪು ಮೌಲ್ಯ ನಿರ್ಧರಣೆ ಇರುವುದನ್ನು ಖಚಿತಪಡಿಸಿಕೊಳ್ಳಲು ವಿಚಾರಣೆ ನಡೆಸುವ ಅಧಿಕಾರ ಇರುತ್ತದೆ. ಇಂತಹ ಯಾವುದೇ ಲೋಪ ಯಾ ತಪ್ಪು ಕಂಡುಬಂದರೆ ಭೂಮಿಯ ವರ್ಗಾವಣೆಗಾಗಿ ಅನುಮತಿ ನಿರಾಕರಿಸುವಂತೆ ಶಿಫಾರಸ್ಸು ಮಾಡತಕ್ಕದ್ದು ಎಂದು ನಿಯಮ ಸೇರ್ಪಡೆ ಮಾಡಲಾಗಿದೆ.


ಉಪವಿಭಾಗಾಧಿಕಾರಿಗಳ ಕಡೆಯಿಂದ ಬಂದ ದಸ್ತಾವೇಜು ಮತ್ತು ವರದಿ ಪರಿಶೀಲಿಸಿದ ನಂತರ ಜಿಲ್ಲಾಧಿಕಾರಿಯವರು, ಭೂಮಿ ವರ್ಗಾವಣೆ ಕುರಿತ ಅನುಮತಿ ಅರ್ಜಿಯನ್ನು ತಮ್ಮ ಶಿಫಾರಸ್ಸಿನೊಂದಿಗೆ ಕಂದಾಯ ಆಯುಕ್ತರಿಗೆ ಸಲ್ಲಿಸಬೇಕು.

ಇದಾದ ನಂತರ ಕಂದಾಯ ಆಯುಕ್ತರು ಅರ್ಜಿಯನ್ನು ಪರಿಷ್ಕರಿಸಿ ಭೂಮಿಯ ವರ್ಗಾವಣೆಗೆ ಸರ್ಕಾರದ ಅನುಮತಿ ಅಥವಾ ನಿರ್ಧಾರಕ್ಕಾಗಿ ಅಪರ ಮುಖ್ಯ ಕಾರ್ಯದರ್ಶಿ/ ಪ್ರಧಾನ ಕಾರ್ಯದರ್ಶಿ/ ಕಾರ್ಯದರ್ಶಿ(ಕಂದಾಯ) ಅವರಿಗೆ ಭೂಮಿ ವರ್ಗಾವಣೆ ಕುರಿತ ಎಲ್ಲ ಅರ್ಜಿಗಳನ್ನು ತಮ್ಮ ಶಿಫಾರಸ್ಸಿನೊಂದಿಗೆ ಸಲ್ಲಿಸಬೇಕು.


ಈ ಅಧಿಕಾರಿಗಳು ಕೆಳ ಹಂತದ ಅಧಿಕಾರಿಗಳು ಸಲ್ಲಿಸಿದ ಶಿಫಾರಸ್ಸುಗಳನ್ನು ಪರಿಶೀಲಿಸಿ ಸರ್ಕಾರದ ಅನುಮತಿ ಯಾ ನಿರ್ಧಾರವನ್ನು ಕಂದಾಯ ಆಯುಕ್ತಿರಗೆ ತಿಳಿಸಬೇಕು. ಭೂಮಿ ವರ್ಗಾವಣೆ ಅನುಮೋದನೆ ಪಡೆದ ನಮತರ ಕಂದಾಯ ಆಯುಕ್ತರು ಅನುಮತಿ ನೀಡಿ ಆದೇಶ ಹೊರಡಿಸಬೇಕು.


ಸರ್ಕಾರದಿಂದ ಅನುಮತಿ ದೊರೆತ ನಂತರ ಉಪವಿಭಾಗಾಧಿಕಾರಿಯವರು ನರ್ಗಾವಣೆಗೆ ಅನುವು ಮಾಡಿಕೊಡಲು ಸದತಿ ಭೂಮಿಯನ್ನು ಪಿಟಿಸಿಎಲ್ ನಿಶಾನೆಯನ್ನು ತೆಗೆದುಹಾಕಲಿದ್ದಾರೆ ಎಂದು ನಿಯಮದಲ್ಲಿ ಸವಿವರವಾಗಿ ತಿಳಿಸಲಾಗಿದೆ.


ಬಾಧಿತರಿಗೆ 30 ದಿನಗಳ ಕಾಲಾವಕಾಶ

ಭೂಮಿ ವರ್ಗಾವಣೆಗೆ ಅನುಮತಿ ನೀಡಿರುವ ಅಥವಾ ನಿರಾಕರಿಸಿರುವ ಕಂದಾಯ ಆಯುಕ್ತರು ಆದೇಶದಿಂದ ಬಾಧಿತನಾದ ವ್ಯಕ್ತಿ, ಆದೇಶ ಹೊರಡಿಸಿದ 30 ದಿನದೊಳಗೆ ಆದೇಶ ಪುನರ್ ಅವಲೋಕಿಸುವಂತೆ ಕೋರಿ ಮುಖ್ಯ ಕಾರ್ಯದರ್ಶಿ ಯಾ ಪ್ರಧಾನ ಕಾರ್ಯದರ್ಶಿ ಯಾ ಕಾರ್ಯದರ್ಶಿಯವರಿಗೆ ಲಿಖಿತ ಮನವಿ ಸಲ್ಲಿಸಬಹುದು ಎಂದು ನಿಯಮದಲ್ಲಿ ತಿಳಿಸಲಾಗಿದೆ.




Ads on article

Advertise in articles 1

advertising articles 2

Advertise under the article