-->
ವಿಚಾರಣಾ ನ್ಯಾಯಾಲಯಗಳ ಎಲ್ಲ ತಪ್ಪುಗಳನ್ನು ಸಂದೇಹದಿಂದಲೇ ನೋಡಲಾಗದು: ಹೈಕೋರ್ಟ್‌ ಅಭಿಮತ

ವಿಚಾರಣಾ ನ್ಯಾಯಾಲಯಗಳ ಎಲ್ಲ ತಪ್ಪುಗಳನ್ನು ಸಂದೇಹದಿಂದಲೇ ನೋಡಲಾಗದು: ಹೈಕೋರ್ಟ್‌ ಅಭಿಮತ

ವಿಚಾರಣಾ ನ್ಯಾಯಾಲಯಗಳ ಎಲ್ಲ ತಪ್ಪುಗಳನ್ನು ಸಂದೇಹದಿಂದಲೇ ನೋಡಲಾಗದು: ಹೈಕೋರ್ಟ್‌ ಅಭಿಮತ

ಜಿಲ್ಲಾ ನ್ಯಾಯಾಲಯಗಳಲ್ಲಿ ವಿಚಾರಣಾ ನ್ಯಾಯಾಲಯಗಳ ನ್ಯಾಯಾಧೀಶರ ನೂರಾರು ತಪ್ಪುಗಳನ್ನು ಪಟ್ಟಿ ಮಾಡಲಾಗುತ್ತಿದ್ದು, ನ್ಯಾಯಾಂಗ ಪ್ರಕ್ರಿಯೆಯಲ್ಲಿನ ಪ್ರತಿಯೊಂದು ತಪ್ಪುಗಳನ್ನು ದುರುದ್ದೇಶದಿಂದ ನೋಡಲಾಗದು ಎಂದು ಅಲಹಾಬಾದ್ ಹೈಕೋರ್ಟ್‌ ತೀರ್ಪು ನೀಡಿದೆ.


ಲಕ್ನೋ ಮುಖ್ಯ ನ್ಯಾಯಿಕ ದಂಡಾಧಿಕಾರಿ (ಚೀಫ್ ಜುಡೀಷಿಯಲ್ ಮ್ಯಾಜಿಸ್ಟ್ರೇಟ್) ನ್ಯಾಯಾಲಯವು ಆಸ್ತಿ ವಿವಾದವೊಂದರ ಪ್ರಕರಣದಲ್ಲಿ ನೀಡಿದ ಆದೇಶದಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಈ ತೀರ್ಪು ನೀಡಿದೆ.


ಅಲಹಾಬಾದ್ ಹೈಕೋರ್ಟ್‌ನ ನ್ಯಾ. ಮೊಹಮ್ಮದ್ ಫೈಜ್ ಆಲಂ ಖಾನ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.


ಯಾರೋ ಕಿಡಿಗೇಡಿಗಳು ದುರುದ್ದೇಶದಿಂದ ಆದೇಶ ಹಾಳೆ (order sheet)ನ್ನು ದುರ್ಬಳಕೆ ಮಾಡಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಈ ಪ್ರಕರಣದ ಕುರಿತು ತನಿಖೆ ನಡೆಸುತ್ತಿದೆ ಎಂಬ ಮಾಹಿತಿಯನ್ನು ನ್ಯಾಯಪೀಠಕ್ಕೆ ನೀಡಲಾಯಿತು. ಆದರೆ, ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.


ಸಿಜೆಎಂ /ವಿಚಾರಣಾ ನ್ಯಾಯಾಲಯದಲ್ಲಿ ದಿನವೂ ನೂರಾರು ಪ್ರಕರಣಗಳನ್ನು ಪಟ್ಟಿ ಮಾಡಲಾಗುತ್ತದೆ. ಇದರಿಂದಾಗಿ ಎಲ್ಲ ಪ್ರಕರಣಗಳ ಮೇಲೆ ನ್ಯಾಯಾಂಗ ಅಧಿಕಾರಿಗಳು ಪ್ರತಿಯೊಂದು ಪ್ರಕರಣದ ಮೇಲೂ ನಿಗಾ ಇಡಲು ಸಾಧ್ಯವಾಗದು. ಕಚೇರಿಯ ಗುಮಾಸ್ತರನ್ನು ಕೆಲವೊಮ್ಮೆ ಅವಲಂಬಿಸಬೇಕಾಗುತ್ತದೆ. ಇದು ವಿಚಾರಣಾ ನ್ಯಾಯಾಲಯಗಳ ವ್ಯವಹಾರ ತಿಳಿದವರಿಗೆ ಗೊತ್ತಿರುತ್ತದೆ. ಈ ಕಾರಣದಿಂದ, ವಿಚಾರಣೆ ವೇಳೆ ವಿಚಾರಣಾ ನ್ಯಾಯಾಲಯದ ನ್ಯಾಯಾಂಗ ಅಧಿಕಾರಿಗಳು ಮಾಡಿದ ಪ್ರತಿಯೊಂದು ತಪ್ಪನ್ನೂ ದುರುದ್ದೇಶದಿಂದ ಮಾಡಿದ್ದಾರೆ ಎಂದು ಹೇಳಲು ಬರುವುದಿಲ್ಲ ಎಂದು ಸ್ಪಷ್ಟಪಡಿಸಿತು.


ಪ್ರಕರಣದ ವಿವರ:

ವಿಚಾರಣಾ ನ್ಯಾಯಾಲಯ ಮೊದಲು ಏಪ್ರಿಲ್ 8ಕ್ಕೆ ವಿಚಾರಣಾ ದಿನಾಂಕವನ್ನು ನಿಗದಿ ಮಾಡಿತ್ತು. ಆದರೆ, ನಂತರ ಅದನ್ನು ತಪ್ಪಾಗಿ ಏಪ್ರಿಲ್ 3ಕ್ಕೆ ಬದಲಿಸಲಾಯಿತು. ಅರ್ಜಿದಾರರನ್ನು ಪ್ರತಿನಿಧಿಸುವ ವಕೀಲರಿಗೆ ಈ ಬಗ್ಗೆ ಯಾವುದೇ ಮಾಹಿತಿ ನೀಡದೆ ದಿನಾಂಕವನ್ನು ಮುಂದೂಡಲಾಯಿತು. ಏಪ್ರಿಲ್ 3ರ ಆದೇಶವನ್ನು ವಕೀಲರ ಗೈರುಹಾಜರಿಯಲ್ಲಿ ಅಂಗೀಕರಿಸಲಾಗಿದೆ ಎಂದು ಅರ್ಜಿದಾರರು ಹೈಕೋರ್ಟ್‌ ಮೊರೆ ಹೋಗಿದ್ದರು.


ಈ ಘಟನೆಯ ಬಗ್ಗೆ ಆದೇಶ ಹಾಳೆಯ ಪ್ರತಿಯೊಂದಿಗೆ ವರದಿ ಸಲ್ಲಿಸುವಂತೆ ಮೇ 13ರಂದು ಸಿಜೆಎಂಗೆ ತಿಳಿಸಿದ ನ್ಯಾಯಾಲಯ ಪ್ರಕರಣಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶ ನೀಡಿತ್ತು. ಆದರೂ, ತನಿಖೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ಮಧ್ಯಪ್ರವೇಶ ಮಾಡದಿರಲು ನ್ಯಾಯಪೀಠ ನಿರ್ಧರಿಸಿತು.Ads on article

Advertise in articles 1

advertising articles 2

Advertise under the article