-->
ವಿಕಲಚೇತನ ನೌಕರರ ವರ್ಗಾವಣೆ: ವಿನಾಯಿತಿ ನೀಡಿ ಸರ್ಕಾರದಿಂದ ಸುತ್ತೋಲೆ

ವಿಕಲಚೇತನ ನೌಕರರ ವರ್ಗಾವಣೆ: ವಿನಾಯಿತಿ ನೀಡಿ ಸರ್ಕಾರದಿಂದ ಸುತ್ತೋಲೆ

ವಿಕಲಚೇತನ ನೌಕರರ ವರ್ಗಾವಣೆ: ವಿನಾಯಿತಿ ನೀಡಿ ಸರ್ಕಾರದಿಂದ ಸುತ್ತೋಲೆ

ವಿಕಲಚೇತನ ನೌಕರರಿಗೆ ಮತ್ತು ಅಧಿಕಾರಿಗಳಿಗೆ ನಿಯತಕಾಲಿಕ ಹಾಗೂ ಪುನರಾವರ್ತಿತ ವರ್ಗಾವಣೆಗಳಿಂದ ವಿನಾಯಿತಿ ನೀಡಿ ರಾಜ್ಯ ಸರ್ಕಾರ ಮಹತ್ವದ ಸುತ್ತೋಲೆ ಹೊರಡಿಸಿದೆ.


ಇದೇ ವೇಳೆ, ಪದೋನ್ನತಿ ಮತ್ತಿತರ ಅನಿವಾರ್ಯ ಸಂದರ್ಭದಲ್ಲಿ ಹತ್ತಿರದ ಜಾಗಕ್ಕೆ ಸ್ಥಳ ನಿಯುಕ್ತಿಗೊಳಿಸಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹೊರಡಿಸಿದ ಸುತ್ತೋಲೆಯಲ್ಲಿ ಸೂಚಿಸಲಾಗಿದೆ.


ಸಾರ್ವತ್ರಿಕ ವರ್ಗಾವಣೆ ಅವಧಿಯಲ್ಲೂ ವಿಕಲಚೇತನ ನೌಕರರಿಗೆ ತೊಂದರೆಯಾಗದಂತೆ ಎಲ್ಲ ಸಕ್ಷಮ ಪ್ರಾಧಿಕಾರಗಳು ಎಚ್ಚರಿಕೆ ವಹಿಸಬೇಕು ಎಂದು ತಿಳಿಸಲಾಗಿದೆ.


ಈ ವಿನಾಯಿತಿ ಕೇವಲ ವಿಕಲಚೇತನ ನೌಕರರಿಗೆ ಮಾತ್ರವಲ್ಲ. ಮನೆಯಲ್ಲಿ ಇರುವ ಮಕ್ಕಳು, ಪತಿ/ಪತ್ನಿ ಅಥವಾ ಪೋಷಕರು ಅಂಗವೈಕಲ್ಯ ಅನುಭವಿಸುತ್ತಿದ್ದರೆ, ಅವರ ನಿರ್ವಹಣೆಯನ್ನು ಹೊತ್ತಿರುವ ನೌಕರರಿಗೂ ಅನ್ವಯಿಸಬೇಕು ಎಂದು ಸುತ್ತೋಲೆ ಹೇಳಿದೆ.


ಅಂಗವಿಕಲ ವ್ಯಕ್ತಿಗಳ ಹಕ್ಕು - 2016 ಕಾಯ್ದೆ ಪ್ರಕಾರ, ವಿಕಲಚೇತನ ನೌಕರರು ಹಾಗೂ ವಿಕಲಚೇತನರು ಅವಲಂಬಿತರಾಗಿರುವ ನೌಕರರಿಗೆ ನಿಯತಕಾಲಿಕ ಮತ್ತು ಪುನರಾವರ್ತಿತ ವರ್ಗಾವಣೆಯಿಂದ ವಿನಾಯಿತಿ ನೀಡಲು ಪ್ರಸ್ತಾವನೆ ಕಲ್ಪಿಸಲಾಗಿತ್ತು.


ಇದರ ಪ್ರಕಾರ ಸುತ್ತೋಲೆ ಹೊರಡಿಸಲಾಗಿದ್ದು, ವಿಕಲ ಚೇತನ ನೌಕರರಿಗೆ ನಿಯತಕಾಲಿಕ ಮತ್ತು ಪುನರಾವರ್ತಿತ ವರ್ಗಾವಣೆಯಿಂದ ವಿನಾಯಿತಿ ನೀಡಬೇಕು. ವಿಕಲಚೇತನರು ನೇಮಕಾತಿಗೆ ಆಯ್ಕೆಯಾದ ನಂತರದಲ್ಲಿ ನೀಡುವ ಪ್ರಾರಂಭಿಕ ನಿಯುಕ್ತಿ ಹಾಗೂ ಪದೋನ್ನತಿ ನಂತರದ ವರ್ಗಾವಣೆ ಅಗತ್ಯವಿದ್ದರೆ ಸಾಧ್ಯವಾದಷ್ಟು ಹತ್ತಿರದ ಸ್ಥಳಕ್ಕೆ ನಿಯುಕ್ತಿಗೊಳಿಸಬೇಕು.


ಸರ್ಕಾರಿ ನೌಕರನ ಅವಲಂಬಿತ ಮಕ್ಕಳು, ಪತಿ ಯಾ ಪತಿ, ತಂದೆ ತಾಯಿ ಇವರಲ್ಲಿ ಯಾರಾದರೂ ತೀವ್ರ ಅಂಗವೈಕಲ್ಯ ಹೊಂದಿದ್ದು, ಸರ್ಕಾರಿ ನೌಕರರು ಅವರ ಜವಾಬ್ದಾರಿ ಯಾ ಸಂರಕ್ಷಣೆ ವಹಿಸಿದ್ದರೆ ಸೂಕ್ತ ದಾಖಲೆ ಒದಗಿಸಬೇಕು. ದಾಖಲೆಗಳನ್ನು ಪರಿಶೀಲಿಸಿ ಅರ್ಹರಾದರೆ ವರ್ಗಾವಣೆಯಿಂದ ವಿನಾಯಿತಿ ನೀಡಬಹುದು. ವರ್ಗಾವಣೆ ಅನಿವಾರ್ಯವಾದರೆ ಸಾಧ್ಯವಾದಷ್ಟು ಹತ್ತಿರದ ಸ್ಥಳಕ್ಕೆ ನಿಯುಕ್ತಿ ಮಾಡಬೇಕು ಎಂದು ತಿಳಿಸಲಾಗಿದೆ.

Ads on article

Advertise in articles 1

advertising articles 2

Advertise under the article