7 ಮದುವೆ: ಎಲ್ಲ ಪತಿಯರ ವಿರುದ್ಧ 498A ಕೇಸು: ಕಾನೂನು ದುರ್ಬಳಕೆ ವಿರುದ್ಧ ಸ್ವತಃ ಬೆಚ್ಚಿ ಬಿದ್ದ ನ್ಯಾಯಮೂರ್ತಿಗಳು
Sunday, July 28, 2024
7 ಮದುವೆ: ಎಲ್ಲ ಪತಿಯರ ವಿರುದ್ಧ 498A ಕೇಸು: ಕಾನೂನು ದುರ್ಬಳಕೆ ವಿರುದ್ಧ ಸ್ವತಃ ಬೆಚ್ಚಿ ಬಿದ್ದ ನ್ಯಾಯಮೂರ್ತಿಗಳು
ಏಳು ಮದುವೆಯಾಗಿ ಏಳು ಮಂದಿ ಪತಿಯರ ವಿರುದ್ಧವೂ ವರದಕ್ಷಿಣೆ ಕಿರುಕುಳ ಪ್ರಕರಣ ದಾಖಲಿಸಿದ್ದು ಮಾತ್ರವಲ್ಲದೆ, ಎಲ್ಲ ಏಳೂ ಮಂದಿಯಿಂದಲೂ ಜೀವನಾಂಶ ಪಡೆದಿರುವ ಮಹಿಳೆಯ ಪ್ರಕರಣ ಕರ್ನಾಟಕ ಹೈಕೋರ್ಟ್‌ನಲ್ಲಿ ಸದ್ದು ಮಾಡಿದೆ.
ಏಳನೇ ಪತಿಯ ವಿರುದ್ಧದ ದಾಖಲಿಸಿದ ಕೇಸ್ ಬಗ್ಗೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆದಾಗ ಸ್ವತಃ ನ್ಯಾಯಾಧೀಶರೇ ಈಕೆಯ ಕೃತ್ಯಗಳ ಬಗ್ಗೆ ಬೆಚ್ಚಿ ಬಿದ್ದಿದ್ದಾರೆ.
ಈಕೆಯ ಬಗ್ಗೆ ಹೆಚ್ಚಿನ ಮಾಹಿತಿಯೊಂದಿಗೆ ಮುಂದಿನ ವಿಚಾರಣೆಗೆ ಆಗಮಿಸುವಂತೆ ಪತಿಯ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಮುಂದೂಡಿದರು.