ಆರು ವರ್ಷಗಳ ಸಂಬಂಧ: ಪ್ರಿಯಕರನ ವಿರುದ್ಧ ಅತ್ಯಾಚಾರ ಕೇಸು ದಾಖಲಿಸಿದ ಯುವತಿ- ಕೇಸು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ಹೈಕೋರ್ಟ್
ಆರು ವರ್ಷಗಳ ಸಂಬಂಧ: ಪ್ರಿಯಕರನ ವಿರುದ್ಧ ಅತ್ಯಾಚಾರ ಕೇಸು ದಾಖಲಿಸಿದ ಯುವತಿ- ಕೇಸು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ಹೈಕೋರ್ಟ್
ಸುದೀರ್ಘ ಆರು ವರ್ಷಗಳ ಕಾಲ ಪ್ರೀತಿಸಿದ ಬಳಿಕ ಹಳಸಿದ ಸಂಬಂಧದ ಕಾರಣಕ್ಕೆ ಪ್ರಿಯಕರನ ವಿರುದ್ಧ ಯುವತಿ ದಾಖಲಿಸಿದ ಅತ್ಯಾಚಾರ ಕೇಸನ್ನು ಕರ್ನಾಟಕ ಹೈಕೋರ್ಟ್ ಹೈಕೋರ್ಟ್ ರದ್ದುಗೊಳಿಸಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಅರ್ಜಿದಾರರು ಮತ್ತು ದೂರುದಾರರ ನಡುವಿನ ಸಂಬಂಧ ಆರು ವರ್ಷಗಳಾಗಿದ್ದು, ಪ್ರೀತಿ ಕ್ಷೀಣಿಸಿದ ಕಾರಣಕ್ಕೆ ಸಮ್ಮತಿಯಿಂದ ನಡೆಸಲಾದ ದೈಹಿಕ ಸಂಬಂಧವನ್ನು ಅತ್ಯಾಚಾರ ಎಂಬ ಪದದ ವ್ಯಾಪ್ತಿಯಲ್ಲಿ ಪರಿಗಣಿಸಲಾಗದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಮಾಜಿ ಪ್ರೇಯಸಿ ತನ್ನ ವಿರುದ್ಧ ಬೆಂಗಳೂರಿನ ಜೀವನ್ ಬಿಮಾ ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಕೋರಿ ಆರೋಪಿಯು ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡ ನ್ಯಾಯಪೀಠ, ಆರು ವರ್ಷಗಳ ಕಾಲ ಪ್ರೀತಿಸಿದ ವಯಸ್ಕರ ನಡುವೆ ನಡೆದಿರುವ ಸಮ್ಮತಿ ಪೂರ್ವಕ ಲೈಂಗಿಕ ಕ್ರಿಯೆಯನ್ನು ಅತ್ಯಾಚಾರ ಎಂದು ಪರಿಗಣಿಸಲಾಗದು ಎಂದು ಅಭಿಪ್ರಾಯಪಟ್ಟು ಪ್ರಕರಣವನ್ನು ರದ್ದುಪಡಿಸಿದೆ.