ಯುವ ವಕೀಲರು ವೃತ್ತಿ ತೊರೆಯುವ ಭೀತಿ; ಕಿರಿಯ ವಕೀಲರಿಗೆ 5000 ರೂ. ಸಂಬಳ ಸರಿಯಲ್ಲ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್
ಯುವ ವಕೀಲರು ವೃತ್ತಿ ತೊರೆಯುವ ಭೀತಿ; ಕಿರಿಯ ವಕೀಲರಿಗೆ 5000 ರೂ. ಸಂಬಳ ಸರಿಯಲ್ಲ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್
ಹಿರಿಯ ವಕೀಲರು ತಮ್ಮ ಕಿರಿಯ ವೃತ್ತಿ ಬಾಂಧವರಿಗೆ 5000 ರೂ. ಸಂಬಳ ನೀಡುವ ಪ್ರವೃತ್ತಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಕಳವಳ ವ್ಯಕ್ತಪಡಿಸಿದ್ದಾರೆ. ಇಂತಹ ಪ್ರವೃತ್ತಿಯಿಂದ ಯುವ ವಕೀಲರು ವೃತ್ತಿಯಿಂದಲೇ ಶಾಶ್ವತವಾಗಿ ದೂರ ಸರಿಯುವಂತಾಗಬಹುದು ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಮಧುರೈನಲ್ಲಿ ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠ ಸ್ಥಾಪನೆಯ 20ನೇ ವಾರ್ಷಿಕೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಕಿರಿಯ ವಕೀಲರು ವೃತ್ತಿಯಲ್ಲಿ ಕಲಿಕೆಗಾಗಿ, ಅನುಭವ ಹೆಚ್ಚಿಸಿಕೊಳ್ಳಲು ಮತ್ತು ಮಾನ್ಯತೆಯನ್ನು ಪಡೆಯಲು ಹಿರಿಯ ವಕೀಲರ ಬಳಿ ಬರುತ್ತಾರೆ. ಅವರಲ್ಲಿ ನಿಮ್ಮ ಹಕ್ಕು ಚಲಾಯಿಸುವ ಮನೋಭಾವನೆಯನ್ನು ಬಿಟ್ಟು ಅವರಿಗೆ ಮಾರ್ಗದರ್ಶನ ನೀಡಿ, ಕಿರಿಯರಿಂದಲೂ ಹಿರಿಯ ವಕೀಲರು ಕಲಿಯಬೇಕಾದದ್ದು ಬಹಳಷ್ಟಿದೆ ಎಂದು ಅವರು ಕಿವಿಮಾತು ಹೇಳಿದರು.
ಕಿರಿಯ ವಕೀಲರು ಸಮಕಾಲೀನ ವಾಸ್ತವಗಳ ಬಗ್ಗೆ ಹೆಚ್ಚು ಜ್ಞಾನವನ್ನು ಹೊಂದಿದ್ದಾರೆ. ಅವರ ಕಠಿಣ ಪರಿಶ್ರಮಕ್ಕೆ ಅನುಗುಣವಾಗಿ ಗೌರವಾನ್ವಿತ ಮೊತ್ತವನ್ನು ನೀಡಿ. ಸಾಕಷ್ಟು ಸಂಬಳವಿಲ್ಲವಿಲ್ಲದೆ ಕೆಲಸ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದರು.
ಇದು ಜನರು ಕಡಿಮೆ ಹಣಕ್ಕಾಗಿ ನಿದ್ರೆ ಮತ್ತು ಹೆಚ್ಚು ಗಂಟೆಗಳ ಕಾಲ ಕೆಲಸ ಮಾಡುವ ನಿರೀಕ್ಷೆಯಾಗಿದೆ ಎಂದ ಚಂದ್ರಚೂಡ್, ಸಾಮಾಜಿಕ ಹಾಗೂ ಕಠಿಣ ಆರ್ಥಿಕ ಹಿನ್ನೆಲೆಯಿಂದ ಬಂದವರೂ ಸಮರ್ಥ ವಕೀಲರಾಗಿ ರೂಪುಗೊಳ್ಳುತ್ತಾರೆ ಎಂದು ಅವರು ತಿಳಿಸಿದರು.