-->
ಗಂಡನಿಂದ ತಿಂಗಳಿಗೆ ಆರು ಲಕ್ಷ ರೂ. ಜೀವನಾಂಶ ಬೇಡಿಕೆ: ಮಹಿಳೆಯ ಅರ್ಜಿಗೆ ಹೈಕೋರ್ಟ್‌ ಪ್ರತಿಕ್ರಿಯೆ

ಗಂಡನಿಂದ ತಿಂಗಳಿಗೆ ಆರು ಲಕ್ಷ ರೂ. ಜೀವನಾಂಶ ಬೇಡಿಕೆ: ಮಹಿಳೆಯ ಅರ್ಜಿಗೆ ಹೈಕೋರ್ಟ್‌ ಪ್ರತಿಕ್ರಿಯೆ

ಗಂಡನಿಂದ ತಿಂಗಳಿಗೆ ಆರು ಲಕ್ಷ ರೂ. ಜೀವನಾಂಶ ಬೇಡಿಕೆ: ಮಹಿಳೆಯ ಅರ್ಜಿಗೆ ಹೈಕೋರ್ಟ್‌ ಪ್ರತಿಕ್ರಿಯೆ





ಐಷಾರಾಮಿ ಜೀವನ ನಡೆಸುವ ಕಾರಣಕ್ಕೆ ತನಗೆ ವಿಚ್ಚೇದಿತ ಗಂಡನಿಂದ ತಿಂಗಳಿಗೆ ಆರು ಲಕ್ಷ ರೂ. ಜೀವನಾಂಶ ನೀಡುವಂತೆ ನಿರ್ದೇಶಿಸಬೇಕು ಎಂದು ಮಹಿಳೆ ಕರ್ನಾಟಕ ಹೈಕೋರ್ಟ್‌ ಮುಂದೆ ಅರ್ಜಿ ಸಲ್ಲಿಸಿದ್ದು, ಈ ಅರ್ಜಿ ವಿಚಾರಣೆ ವೇಳೆ, ಸ್ವತಃ ನ್ಯಾಯಾಧೀಶರೇ ಹೌಹಾರಿದ್ದಾರೆ.


ಅರ್ಜಿ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ ನ್ಯಾಯಪೀಠ, ಅಷ್ಟೊಂದು ಖರ್ಚು ಮಾಡುವುದಿದ್ದರೆ ಆಕೆಯೇ ದುಡಿಯಲಿ ಎಂದು ಮೌಖಿಕವಾಗಿ ಎಚ್ಚರಿಕೆ ನೀಡಿದೆ. ಪ್ರಕರಣದ ವಿಚಾರಣೆಯ ಕುರಿತ ವೀಡಿಯೋ ವೈರಲ್ ಆಗಿದೆ.


ಕರ್ನಾಟಕ ಹೈಕೋರ್ಟ್‌ ನ್ಯಾ. ಲಲಿತಾ ಕನ್ನೆಘಂಟಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಪ್ರಕರಣದ ವಿಚಾರಣೆ ನಡೆಸಿತು. ನ್ಯಾಯಾಲಯ ಪ್ರಕ್ರಿಯೆ ದುರ್ಬಳಕೆ ಮಾಡುವುದರ ಬಗ್ಗೆ ಅರ್ಜಿದಾರರನ್ನು ಎಚ್ಚರಿಸಿರುವ ನ್ಯಾಯಪೀಠ, ಈ ಪ್ರಕರಣದ ಮೂಲಕ ಕಾನೂನು ದುರ್ಬಳಕೆ ಮಾಡುವವರಿಗೆ ಸ್ಪಷ್ಟ ಸಂದೇಶ ಹೊರಡಿಸಲಾಗುವುದು ಎಂದು ಖಡಕ್ ಆಗಿ ಹೇಳಿದೆ.


ಅರ್ಜಿದಾರ ಮಹಿಳೆಯ ಪರ ವಾದ ಮಂಡಿಸಿದ ವಕೀಲರು, ಅರ್ಜಿದಾರರ ಪತಿ ಬ್ರ್ಯಾಂಡೆಡ್ ಡ್ರೆಸ್ , ಶೂಗಳನ್ನು ಧರಿಸುತ್ತಾರೆ. ಹಾಗಾಗಿ, ಮಹಿಳೆಗೂ ಪ್ರತಿ ತಿಂಗಳು ರೂ. 15000/- ಶೂ ಹಾಗೂ ಉಡುಪಿ ಖರೀದಿಗೆ ಬೇಕು. ಅರ್ಜಿದಾರರಿಗೆ ಪೌಷ್ಟಿಕ ಆಹಾರದ ಅಗತ್ಯವಿದೆ. ಮನೆಯಲ್ಲಿ ತಯಾರಿಸುವ ಆಹಾರಕ್ಕಾಗಿ ಆಕೆಗೆ ತಿಂಗಳಿಗೆ 60 ಸಾವಿರ ರೂ. ಬೇಕು, ಇನ್ನು ಒಂದಷ್ಟು ಸಾವಿರ ಮನೆಯ ಹೊರಗಿನ ತಿಂಡಿ-ತಿನಿಸುಗಳಿಗೆ ಬೇಕಾಗುತ್ತದೆ. ಇನ್ನು ಪ್ರತಿ ತಿಂಗಳಿಗೆ ನಾಲ್ಕರಿಂದ ಐದು ಲಕ್ಷ ರೂ. ಮೊಣಕಾಲಿನ ನೋವಿಗೆ ಔಷಧಿ ಮತ್ತು ಫಿಸಿಯೋಥೆರಪಿಗೆ ಖರ್ಚಾಗುತ್ತದೆ ಎಂದು ಪಟ್ಟಿ ಮಾಡಿದ್ದಾರೆ.




ಇಷ್ಟೆಲ್ಲ ಪಟ್ಟಿ ನೀಡಿದ ಬಳಿಕ, ಕನಿಷ್ಟ ಐದು ಲಕ್ಷ ರೂ.ಗಳನ್ನಾದರೂ ನೀಡುವಂತೆ ವಿಚ್ಚೇದಿತ ಪತಿಗೆ ನಿರ್ದೇಶಿಸಬೇಕು ಎಂದು ಮಹಿಳೆಯ ಪರ ವಕೀಲರು ನ್ಯಾಯಪೀಠವನ್ನು ಕೋರಿಕೊಂಡರು. ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಪೀಠ, ಚೌಕಾಸಿ ಮಾಡಲು ಇದು ಮಾರುಕಟ್ಟೆಯಲ್ಲ. ಅವರಿಗೆ ನೀವಾದರೂ ತಿಳಿ ಹೇಳಿ, ಆಕೆಯ ನೈಜ ಅವಶ್ಯಕತೆಗಳಿಗೆ ಎಷ್ಟು ಬೇಕು ಎಂದು ಸ್ಪಷ್ಟಪಡಿಸಿದರೆ ಪರಿಹಾರ ನಿರ್ಧರಿಸಬಹುದು. ಇಲ್ಲದಿದ್ದರೆ ಅರ್ಜಿಯನ್ನು ವಜಾ ಮಾಡುವುದಾಗಿ ನ್ಯಾಯಪೀಠ ಎಚ್ಚರಿಸಿತು.


ಅರ್ಜಿದಾರರು ತಿಂಗಳಿಗೆ 6,16,300/- ರೂ. ಪ್ರತಿ ತಿಂಗಳು ಜೀವನಾಂಶವಾಗಿ ಬೇಕು ಎಂದು ಬೇಡಿಕೆ ಇಟ್ಟಿರುವ ಬಗ್ಗೆ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು. ಜೀವನಾಂಶ ಯಾವುದೇ ಕಾರಣಕ್ಕೂ ಗಂಡನಿಗೆ ಶಿಕ್ಷೆಯಾಗಬಾರದು. ಅಷ್ಟೊಂದು ಹಣ ಖರ್ಚು ಮಾಡಲು ಬಯಸಿದರೆ ಆಕೆಯೇ ಸಂಪಾದಿಸಲಿ. ಗಂಡನ ಮೇಲೆ ಏಕೆ ಅವಲಂಬಿತರಾಗಬೇಕು. ಆಕೆಗೆ ಕುಟುಂಬದ ಅನ್ಯ ಯಾವುದೇ ಜವಾಬ್ದಾರಿ ಇಲ್ಲ. ಮಕ್ಕಳನ್ನು ಸಾಕಬೇಕೆಂದಿಲ್ಲ. ಸ್ವಂತ ಖರ್ಚಿಗೆ ಇಷ್ಟೊಂದು ದೊಡ್ಡ ಮೊತ್ತದ ಬೇಡಿಕೆ ಇಟ್ಟಿರುವುದು ಅಸಮಂಜಸ ಎಂದು ನ್ಯಾಯಪೀಠ ಹೇಳಿತು.


ಕೌಟುಂಬಿಕ ನ್ಯಾಯಾಲಯ ಪತ್ನಿಗೆ ಮಾಸಿಕ ರೂ. 5000/- ಜೀವನಾಂಶ ನಿಗದಿಪಡಿಸಿತ್ತು. ಈ ಬಗ್ಗೆ ಮೇಲ್ಮನವಿ ಸಲ್ಲಿಸಿದ್ದ ಅರ್ಜಿದಾರರು ತಮಗೆ ಪತಿಯಿಂದ 6 ಲಕ್ಷದ ಜೀವನಾಂಶ ದೊರಕಿಸಿಕೊಡಬೇಕು ಎಂದು ಅರ್ಜಿಯಲ್ಲಿ ಕೋರಿಕೊಂಡಿದ್ದರು.






https://twitter.com/DeepikaBhardwaj?ref_src=twsrc%5Etfw%7Ctwcamp%5Etweetembed%7Ctwterm%5E1826237815962907135%7Ctwgr%5Ef866c0b939cf865c02ca7f2b8467f7de404c34c7%7Ctwcon%5Es1_&ref_url=https%3A%2F%2Flawtime.in%2F%3Fp%3D3015





Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu