ಆಲೂಗಡ್ಡೆಯನ್ನೇ ಲಂಚವಾಗಿ ಕೇಳಿದ ಪೊಲೀಸ್: ಪಾಪಿ ಸಬ್ ಇನ್ಸ್‌ಪೆಕ್ಟರ್ ಅಮಾನತು!
ಆಲೂಗಡ್ಡೆಯನ್ನೇ ಲಂಚವಾಗಿ ಕೇಳಿದ ಪೊಲೀಸ್: ಪಾಪಿ ಸಬ್ ಇನ್ಸ್‌ಪೆಕ್ಟರ್ ಅಮಾನತು!
ಈ ಪೊಲೀಸ್ ಅಧಿಕಾರಿ ಬಡಪಾಯಿ ವ್ಯಾಪಾರಿಯ ಮೇಲೆ ಒಂದಿನಿತೂ ಕರುಣೆ ತೋರಲಿಲ್ಲ. ಲಂಚ ಕೊಡಲು ದುಡ್ಡು ಇಲ್ಲ ಎಂದರೂ ಕೇಳಲಿಲ್ಲ. ಮಾರಾಟಕ್ಕೆ ತಂದ ಆಲೂಗಡ್ಡೆಯನ್ನೇ ಲಂಚವಾಗಿ ಕೇಳಿದ..
ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಕನ್ನೌಜ್‌ನಲ್ಲಿ. ಇಲ್ಲಿನ ಸೌರೀಖ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಮಕೃಪಾಲ್ ಲಂಚಕ್ಕೆ ಬೇಡಿಕೆ ಸಲ್ಲಿಸಿದ ಪೊಲೀಸ್ ಅಧಿಕಾರಿ. ಪ್ರಕರಣ ಮೇಲಾಧಿಕಾರಿಗಳ ಗಮನಕ್ಕೆ ಬರುತ್ತಲೇ ಇಲಾಖಾ ತನಿಖೆಗೆ ಆದೇಶ ನೀಡಿರುವ ಪೊಲೀಸರು, ಆರೋಪಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್‌ನನ್ನು ಅಮಾನತು ಮಾಡಿದ್ಧಾರೆ.
ಪ್ರಕರಣವೊಂದನ್ನು ಇತ್ಯರ್ಥಪಡಿಸಲು ಸಬ್ ಇನ್ಸ್‌ಪೆಕ್ಟರ್ ಬಡಪಾಯಿ ವ್ಯಾಪಾರಿಯಿಂದ ಭಾರೀ ಮೊತ್ತದ ಲಂಚ ಕೇಳಿದ್ದಾನೆ. ಆದರೆ, ಆತನ ಬಳಿ ದುಡ್ಡು ಇರಲಿಲ್ಲ. ಆಗ ಅಧಿಕಾರಿ ಆಲೂಗಡ್ಡೆ ನೀಡುವಂತೆ ಬೇಡಿಕೆ ಸಲ್ಲಿಸಿದ್ದಾನೆ.
ಈ ದೃಶ್ಯ ಮೊಬೈಲ್‌ನಲ್ಲಿ ವೈರಲ್ ಆಗುತ್ತಿದ್ದಂತೆಯೇ ಎಚ್ಚೆತ್ತ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಕುಮಾರ್ ಆನಂದ್, ಆರೋಪಿ ಪೊಲೀಸ್‌ರನ್ನು ಸಸ್ಪೆಂಡ್ ಮಾಡಿದ್ದಾರೆ.