-->
ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌: ವಿವಿಧ ಹುದ್ದೆಗಳಿಗೆ ನೇಮಕಾತಿಗಾಗಿ ನೇರ ಸಂದರ್ಶನ

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌: ವಿವಿಧ ಹುದ್ದೆಗಳಿಗೆ ನೇಮಕಾತಿಗಾಗಿ ನೇರ ಸಂದರ್ಶನ

ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌: ವಿವಿಧ ಹುದ್ದೆಗಳಿಗೆ ನೇಮಕಾತಿಗಾಗಿ ನೇರ ಸಂದರ್ಶನ




ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಂಗ ಸಂಸ್ಥೆಯಾದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಅಡಿಯಲ್ಲಿ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಹಾಗೂ ಇತರ ಆರೋಗ್ಯ ಯೋಜನೆಗಳನ್ನು ಅನುಷ್ಟಾನಗೊಳಿಸುತ್ತಿದೆ.


ಈ ಮೇಲೆ ತಿಳಿಸಿದ ಆರೋಗ್ಯ ಯೋಜನೆಗಳ ಸುಗಮ ಹಾಗೂ ಸುಲಲಿತ ಅನುಷ್ಟಾನಕ್ಕಾಗಿ ಟ್ರಸ್ಟ್ ವತಿಯಿಂದ ನೇರ ಸಂದರ್ಶನ ಕಾರ್ಯ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳ ನೇಮಕಾತಿಗಾಗಿ ನೇರ ಸಂದರ್ಶನ ನಡೆಸಲು ಅಧಿಸೂಚನೆ ಪ್ರಕಟಿಸಲಾಗಿದೆ.


ಈ ಹುದ್ದೆಯು ಕಚೇರಿಯಲ್ಲಿ ಇದ್ದುಕೊಂಡು ಕರ್ತವ್ಯ ನಿರ್ವಹಿಸುವ ಹುದ್ದೆಯಾಗಿರುತ್ತದೆ. ಗುತ್ತಿಗೆ ಅವಧಿಯು ಒಂದು ವರ್ಷದ್ದಾಗಿದ್ದು, ಕಾರ್ಯಕ್ಷಮತೆಯ ಆಧಾರದ ಮೇಲೆ ಮುಂದಿನ ಎರಡು ವರ್ಷಗಳ ಅವಧಿಗೆ ವಿಸ್ತರಿಸಿ ನವೀಕರಿಸಬಹುದಾಗಿದೆ.


ನೇರ ಸಂದರ್ಶನದ ದಿನಾಂಕ ಮತ್ತು ಸಮಯ ವಿವರಗಳು ಹೀಗಿದೆ.

ನೋಂದಣಿಗೆ ದಿನಾಂಕ 8-10-2024 ಬೆಳಿಗ್ಗೆ 10 ಗಂಟೆಯಿಂದ 12 ಗಂಟೆಯ ವರೆಗೆ

ಸಂದರ್ಶನ ಮಧ್ಯಾಹ್ನ 12 ಗಂಟೆಯಿಂದ ಮಧ್ಯಾಹ್ನ 4 ಗಂಟೆ ವರೆಗೆ

ಮಧ್ಯಾಹ್ನ ಕಂಪ್ಯೂಟರ್ ಪರೀಕ್ಷೆ ಸಂಜೆ 4 ಗಂಟೆಯಿಂದ 5 ಗಂಟೆಯ ವರೆಗೆ


ಹೆಚ್ಚಿನ ಮಾಹಿತಿಗೆ ಈ ಕೆಳಕಂಡ ವಿಳಾಸ ಅಥವಾ ವೆಬ್‌ಸೈಟನ್ನು ಸಂದರ್ಶಿಸಬಹುದು.


ಸ್ಥಳ: ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ ಮೀಟಿಂಗ್ ಹಾಲ್, ಏಳನೇ ಮಹಡಿ, ಆರೋಗ್ಯ ಸೌಧ, ಮಾಗಡಿ ರಸ್ತೆ, ಬೆಂಗಳೂರು- 560023


http://arogya.karnataka.gov.in/sast/


Ads on article

Advertise in articles 1

advertising articles 2

Advertise under the article