-->
ಮಾರಾಟವು ಒಪ್ಪಂದವಲ್ಲ: ಅಪ್ರಾಪ್ತರಿಗೆ ಸ್ಥಿರಾಸ್ತಿ ಮಾರಾಟಕ್ಕೆ ನಿರ್ಬಂಧವಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಮಾರಾಟವು ಒಪ್ಪಂದವಲ್ಲ: ಅಪ್ರಾಪ್ತರಿಗೆ ಸ್ಥಿರಾಸ್ತಿ ಮಾರಾಟಕ್ಕೆ ನಿರ್ಬಂಧವಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಮಾರಾಟವು ಒಪ್ಪಂದವಲ್ಲ: ಅಪ್ರಾಪ್ತರಿಗೆ ಸ್ಥಿರಾಸ್ತಿ ಮಾರಾಟಕ್ಕೆ ನಿರ್ಬಂಧವಿಲ್ಲ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು





ಖಂಡಿತ ಕ್ರಯಪತ್ರದ ಮೂಲಕ ಸ್ಥಿರಾಸ್ತಿಯನ್ನು ಅಪ್ರಾಪ್ತ ವಯಸ್ಕರಿಗೆ ಮಾರಾಟ ಮಾಡಲು ಯಾವುದೇ ನಿರ್ಬಂಧ ಇಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.


ಸುಪ್ರೀಂ ಕೋರ್ಟ್‌ನ ನ್ಯಾ. ಸಿ.ಟಿ. ರವಿ ಕುಮಾರ್ ಮತ್ತು ನ್ಯಾ. ಸಂಜಯ್ ಕುಮಾರ್ ಅವರಿದ್ದ ನ್ಯಾಯಪೀಠ ಈ ಮಹತ್ವದ ತೀರ್ಪು ನೀಡಿದೆ.


ಮಾರಾಟ ಕರಾರು ಒಪ್ಪಂದವು ಆಸ್ತಿ ವರ್ಗಾವಣೆ ಕಾಯ್ದೆಯ ಸೆಕ್ಷನ್ 54ರ ಪ್ರಕಾರ ಒಂದು ಒಪ್ಪಂದವಾಗಿದೆ. ಆದರೂ, ಮಾರಾಟ ಪ್ರಕ್ರಿಯೆಯು ಯಾವುದೇ ರೀತಿಯ ಒಪ್ಪಂದವಲ್ಲ. ಅದು ಒಂದು ನಿಗದಿಪಡಿಸಿದ ಮೌಲ್ಯಕ್ಕೆ ಆಸ್ತಿಯ ಮಾರಾಟ ಪ್ರಕ್ರಿಯೆ. ಹಾಗಾಗಿ, ಅಪ್ರಾಪ್ತರಿಗೆ ಸ್ಥಿರಾಸ್ತಿ ಮಾರಾಟ ಮಾಡಲು ಯಾವುದೇ ನಿರ್ಬಂಧ ಇಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.


ಕರಾರು ಪತ್ರದ ಮೂಲಕ ಅಪ್ರಾಪ್ತ ವಯಸ್ಕರು ಸ್ಥಿರಾಸ್ತಿಯ ಮೇಲೆ ಒಡೆತನವನ್ನು ಹೊಂದಬಹುದು. ಭಾರತೀಯ ಒಪ್ಪಂದ ಕಾಯ್ದೆ 1872 ಇದರ ಸೆಕ್ಷನ್ 11 ಈ ಕರಾರಿಗೆ ಅಡ್ಡಿಯಾಗದು. ಈ ಕಲಂ ಒಪ್ಪಂದದ ಪಕ್ಷಕಾರರ ಅರ್ಹತೆಯ ಬಗ್ಗೆ ತಿಳಿಸುತ್ತದೆ. ಆದರೆ, ಮಾರಾಟ ವರ್ಗಾವಣೆಯು ಒಪ್ಪಂದವಲ್ಲ ಎಂಬುದನ್ನು ನ್ಯಾಯಪೀಠ ವ್ಯಾಖ್ಯಾನಿಸಿದೆ.


ಭಾರತೀಯ ಒಪ್ಪಂದ ಕಾಯ್ದೆ 1872 ಇದರ ಸೆಕ್ಷನ್ 11 ರ ಪ್ರಕಾರ ಅಪ್ರಾಪ್ತ ವಯಸ್ಕರು ಒಪ್ಪಂದದ ಪಕ್ಷಕಾರರಾಗಲು ಸಾಧ್ಯವಿಲ್ಲ.


ಕ್ರಯ ಪತ್ರದ ಮೂಲಕ ನಡೆದ ಸ್ಥಿರಾಸ್ತಿ ಮಾರಾಟ ಯಾ ವರ್ಗಾವಣೆಯಿಂದ ಅಪ್ರಾಪ್ತರು ಆ ಸ್ಥಿರಾಸ್ತಿಯ ಒಡೆತನ ಗಳಿಸಬಹುದು. ಅವರು ಪ್ರಾಪ್ತ ವಯಸ್ಕರಾದಾಗ, ಸದ್ರಿ ಖರೀದಿಸಿದ ಆಸ್ತಿಯನ್ನು ಮಾರಾಟ ಮಾಡಲು ಯಾವುದೇ ನಿರ್ಬಂಧವಿಲ್ಲ ಎಂದು ನ್ಯಾಯಪೀಠ ಹೇಳಿದೆ. ಅವರು ಪ್ರಾಪ್ತ ವಯಸ್ಕರಾದಾಗ, ಈ ಹಿಂದೆ ನಡೆದಿದ್ದ ಕ್ರಯಪತ್ರವನ್ನು ಪ್ರಶ್ನಿಸಲು ಬರುವುದಿಲ್ಲ ಎಂದು ನ್ಯಾಯಪೀಠ ವಿವರಿಸಿದೆ.


Neelam Gupta Vs Rajendra Kumar Gupta

Supreme Court of India, Civil Appeal 3159/2019

Ads on article

Advertise in articles 1

advertising articles 2

Advertise under the article