-->
ರಾಷ್ಟ್ರೀಯ ಬ್ಯಾಂಕ್‌ನಲ್ಲಿ ಕನ್ನಡಿಗರಿಗೆ ಅಧಿಕಾರಿಯ ನೇಮಕಾತಿ: 300 ಹುದ್ದೆಗೆ ಅರ್ಜಿ ಸಲ್ಲಿಸಿ

ರಾಷ್ಟ್ರೀಯ ಬ್ಯಾಂಕ್‌ನಲ್ಲಿ ಕನ್ನಡಿಗರಿಗೆ ಅಧಿಕಾರಿಯ ನೇಮಕಾತಿ: 300 ಹುದ್ದೆಗೆ ಅರ್ಜಿ ಸಲ್ಲಿಸಿ

ರಾಷ್ಟ್ರೀಯ ಬ್ಯಾಂಕ್‌ನಲ್ಲಿ ಕನ್ನಡಿಗರಿಗೆ ಅಧಿಕಾರಿಯ ನೇಮಕಾತಿ: 300 ಹುದ್ದೆಗೆ ಅರ್ಜಿ ಸಲ್ಲಿಸಿ





ದೇಶದ ಪ್ರತಿಷ್ಠಿತ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಒಂದಾದ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ (ಯುಬಿಐ) ತನ್ನಲ್ಲಿ ಖಾಲಿ ಇರುವ 1500 ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ಹುದ್ದೆಗಳಲ್ಲಿ ಕನ್ನಡಿಗರಿಗೆ 300 ಅಧಿಕಾರಿಗಳ ಹುದ್ದೆಯನ್ನು ಮೀಸಲಾಗಿಡಲಾಗಿದೆ.


ಅರ್ಜಿ ಸಲ್ಲಿಸಲು ನವೆಂಬರ್ 13, 2024ರಂದು ಕೊನೆಯ ದಿನವಾಗಿರುತ್ತದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿಗಳು ಒಂದು ರಾಜ್ಯದ ಖಾಲಿ ಹುದ್ದೆಗೆ ಮಾತ್ರ ಅರ್ಜಿ ಸಲ್ಲಿಸಬಹುದು.


ವಯೋಮಿತಿ ಕನಿಷ್ಟ 20 ಮತ್ತು ಗರಿಷ್ಟ 30 ವರ್ಷ ವಯಸ್ಸಾಗಿರಬೇಕು. ಅಂಗವಿಕಲ ಮತ್ತು ವಿಶೇಷ ಚೇತನರಿಗೆ ವಯೋಮಿತಿಯಲ್ಲಿ ಸಡಿಲಿಕೆ ಇದೆ.


ವೇತನ ಶ್ರೇಣಿ: ಈ ಹುದ್ದೆಗಳು ಜೂನಿಯರ್ ಮ್ಯಾನೇಜ್‌ಮೆಂಟ್ ಗ್ರೇಡ್ ಸ್ಕೇಲ್ 1 ಹುದ್ದೆಯಾಗಿದೆ. ಆರಂಭದಲ್ಲೇ ರೂ. 48480ರಿಂದ ರೂ. 85920 ವರೆಗೆ ವೇತನ ಇರುತ್ತದೆ.


ಇದೊಂದು ಅಪರೂಪದ ಅವಕಾಶವಾಗಿರುತ್ತದೆ. ಸಾಮಾನ್ಯವಾಗಿ ಐಬಿಪಿಎಸ್ ಅಂದರೆ ಬ್ಯಾಂಕ್ ಸಿಬ್ಬಂದಿ ನೇಮಕಾತಿ ಸಂಸ್ಥೆ ನಡೆಸುವ ಪ್ರಾಥಮಿಕ ಮತ್ತು ಮುಖ್ಯ (ಪ್ರಿಲಿಮ್ಸ್ & ಮೈನ್ಸ್‌) ಪರೀಕ್ಷೆ ಹಾಗೂ ಸಂದರ್ಶನ ಎಂಬ ಮೂರು ಹಂತದ ನೇಮಕಾತಿ ಪ್ರಕ್ರಿಯೆ ಇರುತ್ತದೆ.


ಆದರೆ, ಈ ಹುದ್ದೆಗಳಿಗೆ ನೇರವಾಗಿ ಒಂದೇ ಮುಖ್ಯ ಪರೀಕ್ಷೆ ಇರುತ್ತದೆ. ಪರೀಕ್ಷೆಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳ ಅರ್ಹತೆ ಆಧಾರದಲ್ಲಿ ನೇಮಕಾತಿ ನಡೆಯುತ್ತದೆ. ಹಾಗಾಗಿ, ಕನ್ನಡಿಗರು ಈ ಹುದ್ದೆಯ ಅವಕಾಶವನ್ನು ಬಳಸಿಕೊಳ್ಳಬಹುದು.



ಹೆಚ್ಚಿನ ಮಾಹಿತಿಗೆ ಬ್ಯಾಂಕಿನ ಅಧಿಕೃತ ವೆಬ್‌ಸೈಟ್‌ನ್ನು ಸಂಪರ್ಕಿಸಬಹುದು..

www.unionbankofindia.co.in

Ads on article

Advertise in articles 1

advertising articles 2

Advertise under the article