ಸರ್ಕಾರಿ ನೌಕರರು, ನಿವೃತ್ತರಿಗೆ ರಾಜ್ಯ ಸರ್ಕಾರ ಭರ್ಜರಿ ಗಿಫ್ಟ್: ತುಟ್ಟಿಭತ್ಯೆಯಲ್ಲಿ ಭಾರೀ ಹೆಚ್ಚಳ
ಸರ್ಕಾರಿ ನೌಕರರು, ನಿವೃತ್ತರಿಗೆ ರಾಜ್ಯ ಸರ್ಕಾರ ಭರ್ಜರಿ ಗಿಫ್ಟ್: ತುಟ್ಟಿಭತ್ಯೆಯಲ್ಲಿ ಭಾರೀ ಹೆಚ್ಚಳ
ರಾಜ್ಯ ಸರ್ಕಾರಿ ನೌಕರರು ಮತ್ತು ನಿವೃತ್ತ ನೌಕರರ ತುಟ್ಟಿಭತ್ಯೆ (Dearness Allowance)ಯನ್ನು ಹೆಚ್ಚಳ ಮಾಡಲಾಗಿದೆ. ಆಗಸ್ಟ್ 1 ರಿಂದ ಪೂರ್ವಾನ್ವಯಗೊಳಿಸಿ ಶೇಕಡಾ 2.25ರಷ್ಟು ತುಟ್ಟಿ ಭತ್ಯೆಯನ್ನು ಹೆಚ್ಚಳ ಮಾಡಲಾಗಿದೆ.
ನೌಕರರು ತಮ್ಮ ಮೂಲ ವೇತನದ ಶೇಕಡಾ 8.50ರಷ್ಟು ತುಟ್ಟಿ ಭತ್ಯೆ ಪಡೆಯುತ್ತಿದ್ದು, ಆರ್ಥಿಕ ಇಲಾಖೆಯ ಹೊಸ ಆದೇಶದಿಂದಾಗಿ ಒಟ್ಟು ತುಟ್ಟಿ ಭತ್ಯೆ ಪ್ರಮಾಣ ಶೇ. 10.75ಕ್ಕೆ ಏರಿಕೆಯಾಗಿದೆ.
ರಾಜ್ಯದ ಸುಮಾರು 5.20 ಲಕ್ಷ ಸರ್ಕಾರಿ ನೌಕರರು, ನಿಗಮ, ಮಂಡಳಿ, ಅನುದಾನಿತ ಸಂಸ್ಥೆಗಳ 3 ಲಕ್ಷ ಸಿಬ್ಬಂದಿ, 4.50 ಲಕ್ಷ ನಿವೃತ್ತ ಸರ್ಕಾರಿ ನೌಕರರಿಗೆ ಈ ಹೆಚ್ಚಳದ ಆದೇಶ ಅನ್ವಯವಾಗಲಿದೆ.
ಏಳನೇ ವೇತನ ಆಯೋಗದ ಶಿಫಾರಸಿನಂತೆ ಇದೇ ಆಗಸ್ಟ್1ರಿಂದ ಪರಿಷ್ಕೃತ ವೇತನ ಶ್ರೇಣಿ ಜಾರಿಗೊಳಿಸಲಾಗಿತ್ತು. ಶೇಕಡಾ 31ರಷ್ಟು ತುಟ್ಟಿ ಭತ್ಯೆಯನ್ನು ಮೂಲವೇತನದಲ್ಲಿ ವಿಲೀನಗೊಳಿಸಿ ಶೇ. 27.50ರಷ್ಟು ಫಿಟ್‌ಮೆಂಟ್ ನೀಡಲಾಗಿತ್ತು.