Live-in Relation | ಎರಡು ದಶಕದ ಸಹಬಾಳ್ವೆ ಬಳಿಕ ಪ್ರಿಯತಮನ ವಿರುದ್ಧ ರೇಪ್ ಕೇಸ್: ಪ್ರಕರಣ ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್
Tuesday, November 19, 2024
ಎರಡು ದಶಕದ ಸಹಬಾಳ್ವೆ ಬಳಿಕ ಪ್ರಿಯತಮನ ವಿರುದ್ಧ ರೇಪ್ ಕೇಸ್: ಪ್ರಕರಣ ರದ್ದುಪಡಿಸಿದ ಕರ್ನಾಟಕ ಹೈಕೋರ್ಟ್
ಸುಮಾರು 22 ವರ್ಷಗಳ ಕಾಲ ಲಿವ್ ಇನ್ ರಿಲೇಶನ್ (ಸಹಜೀವನ) ನಡೆಸಿ ಬಳಿಕ ಪ್ರಿಯತಮನ ವಿರುದ್ಧ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದು, ಈ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ರದ್ದುಪಡಿಸಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ಹೊರಡಿಸಿದೆ.
ಅತ್ಯಾಚಾರ, ಜೀವ ಬೆದರಿಕೆ ಮತ್ತು ವಂಚನೆ ಸೇರಿದಂತೆ ಇನ್ನಿತರ ಆರೋಪಗಳನ್ನು ಹೊರಿಸಿ ಮಾಜಿ ಗೆಳತಿ ತನ್ನ ಪ್ರಿಯಕರನ ವಿರುದ್ಧ ಬೆಂಗಳೂರಿನ ಬ್ಯಾಡರಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರನ್ನು ರದ್ದುಪಡಿಸಬೇಕೆಂದು ಕೋರಿ ನೆಲಮಂಗಲದ ಸತೀಶ್ ಎಂಬವರು ಹೈಕೋರ್ಟ್‌ಗೆ ಅರ್ಜಿ ಸ್ಲಲಿಸಿದ್ದರು.