-->
ಮತ್ತೊಬ್ಬನನ್ನು ಮದುವೆಯಾಗಲು ತನ್ನ ಮಗಳನ್ನೇ ಕೊಂದ ತಾಯಿ: ಸಮಾಜವನ್ನೇ ಬೆಚ್ಚಿಬೀಳಿಸಿದ ಘಟನೆ

ಮತ್ತೊಬ್ಬನನ್ನು ಮದುವೆಯಾಗಲು ತನ್ನ ಮಗಳನ್ನೇ ಕೊಂದ ತಾಯಿ: ಸಮಾಜವನ್ನೇ ಬೆಚ್ಚಿಬೀಳಿಸಿದ ಘಟನೆ

ಮತ್ತೊಬ್ಬನನ್ನು ಮದುವೆಯಾಗಲು ತನ್ನ ಮಗಳನ್ನೇ ಕೊಂದ ತಾಯಿ: ಸಮಾಜವನ್ನೇ ಬೆಚ್ಚಿಬೀಳಿಸಿದ ಘಟನೆ





ಇನ್‌ಸ್ಟಗ್ರಾಮ್‌ನಲ್ಲಿ ಪರಿಚಯವಾದ ವ್ಯಕ್ತಿಯೊಬ್ಬರನ್ನು ಮದುವೆಯಾಗಲು ಮಹಿಳೆಯೊಬ್ಬರು ತನ್ನ ಐದು ವರ್ಷದ ಮಗಳನ್ನೇ ಕತ್ತು ಹಿಸುಕಿ ಕೊಲೆ ಮಾಡಿದ ಘಟನೆ ನಡೆದಿದೆ.


ನಾಗರಿಕ ಸಮಾಜವನ್ನೇ ಬೆಚ್ಚಿ ಬೀಳಿಸಿದ ಈ ಘಟನೆ ನಡೆದಿರುವುದು ವಾಯವ್ಯ ದೆಹಲಿಯಲ್ಲಿ. ಸಂಬಂಧಿಕರ ಜೊತೆಗೆ ಮಹಿಳೆ ಹಿಮಾಚಲ ಪ್ರದೇಶದಲ್ಲಿ ನೆಲೆಸಿದ್ದರು. ನಂತರ ದೆಹಲಿಗೆ ವಾಸಸ್ಥಳವನ್ನು ಬದಲಾಯಿಸಿದ್ದರು.


ಮಹಿಳೆಯ ಮೊದಲ ಪತಿ ಹಲವು ವರ್ಷಗಳ ಹಿಂದೆಯೇ ಆಕೆಯನ್ನು ತ್ಯಜಿಸಿದ್ದರು. ಇದಾದ ಬಳಿಕ ಮಹಿಳೆಗೆ ಸಾಮಾಜಿಕ ಜಾಲತಾಣವಾದ ಇನ್‌ಸ್ಟಗ್ರಾಮ್‌ನಲ್ಲಿ ರಾಹುಲ್ ಎಂಬ ವ್ಯಕ್ತಿಯ ಪರಿಚಯವಾಯಿತು. ಅವರನ್ನು ಮದುವೆ ಮಾಡಿಕೊಳ್ಳುವ ಇಚ್ಚೆಯಿಂದ ಮಹಿಳೆ ತನ್ನ ವಾಸ್ತವ್ಯವನ್ನು ದೆಹಲಿಗೆ ಬದಲಾಯಿಸಿಕೊಂಡಿದ್ದರು.


ಆದರೆ, ಮಗುವನ್ನು ಹೊಂದಿದ್ದ ಮಹಿಳೆಯನ್ನು ಮದುವೆಯಾಗಲು ರಾಹುಲ್ ನಿರಾಕರಿಸಿದ್ದರು.. ಇದರಿಂದ ಹತಾಶೆಗೊಂಡ ಮಹಿಳೆ ತನ್ನ ಮಗಳನ್ನೇ ಕೊಂದು ಹಾಕಿದ್ದಾರೆ ಎಂದು ಪೊಲೀಸರು ವಿವರಿಸಿದ್ದಾರೆ.


ಆಸ್ಪತ್ರೆಗೆ ಕರೆತರುವ ವೇಳೆಯೇ ಮಗು ಮೃತಪಟ್ಟಿದೆ ಎಂದು ದೀಪ್‌ಚಂದ್ ಬಂಧು ಆಸ್ಪತ್ರೆಯ ವೈದ್ಯಾಧಿಕಾರಿಗಳು ಘೋಷಿಸಿದ್ದರು. ಮಗುವಿನ ಮೃತದೇಹ ಪರಿಶೀಲಿಸಿದಾಗ ಕತ್ತಿನ ಭಾಗದಲ್ಲಿ ಗಾಯದ ಕಲೆಗಳಿದ್ದವು. ಇದನ್ನು ಆಸ್ಪತ್ರೆ ಅಧಿಕಾರಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದರು.


ತಾಯಿ ಮತ್ತು ಸಂಬಂಧಿಕರನ್ನು ತಕ್ಷಣವೇ ವಿಚಾರಣೆಗೆ ಒಳಪಡಿಸಲಾಯಿತು. ಆ ವೇಳೆ ತಾನೇ ಮಗಳನ್ನು ಕೊಲೆ ಮಾಡಿರುವುದಾಗಿ ತಾಯಿ ತಪ್ಪೊಪ್ಪಿಕೊಂಡರು.


Ads on article

Advertise in articles 1

advertising articles 2

Advertise under the article