![ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ: ಸರ್ಕಾರಿ ಕಚೇರಿ, ಬ್ಯಾಂಕ್, ನ್ಯಾಯಾಲಯಗಳಿಗೆ ರಜೆ ಘೋಷಣೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ: ಸರ್ಕಾರಿ ಕಚೇರಿ, ಬ್ಯಾಂಕ್, ನ್ಯಾಯಾಲಯಗಳಿಗೆ ರಜೆ ಘೋಷಣೆ](https://blogger.googleusercontent.com/img/b/R29vZ2xl/AVvXsEjDxVN2Llobsk3BxmRab5Rn5lb-JUAO1hfcwoLP-sw_xU2Tkx9wlYPDqEp8085q_N0rfjkCTbDksGp23P9KVvZeMo_FA6D5_L0_3ArMZPH7RGnQkm3sF_6m6hnjdJXUlkIYD82t5D2glQrSC2PkZeRQFCBy-2yhWpVO7-4royXx4K7WK6FLyCtidcUawnaV/w640-h418/Law%20Legal%20Court%20(3).jpg)
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ: ಸರ್ಕಾರಿ ಕಚೇರಿ, ಬ್ಯಾಂಕ್, ನ್ಯಾಯಾಲಯಗಳಿಗೆ ರಜೆ ಘೋಷಣೆ
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನ: ಸರ್ಕಾರಿ ಕಚೇರಿ, ಬ್ಯಾಂಕ್, ನ್ಯಾಯಾಲಯಗಳಿಗೆ ರಜೆ ಘೋಷಣೆ
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನರಾಗಿದ್ದಾರೆ. ಮೃತರ ಗೌರವಾರ್ಥ ದೇಶಾದ್ಯಂತ ಏಳು ದಿನಗಳ ಶೋಕಾಚರಣೆಗೆ ಕೇಂದ್ರ ಸರ್ಕಾರ ಕರೆ ನೀಡಿದೆ.
ಇದೇ ವೇಳೆ, ಮಾಜಿ ಪ್ರಧಾನಿ ನಿಧನದ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿ, ಬ್ಯಾಂಕ್ ಗಳಿಗೆ ಶುಕ್ರವಾರ ರಜೆ ಘೋಷಿಸಲಾಗಿದೆ.
ದೇಶದ ಎಲ್ಲ ನ್ಯಾಯಾಲಯಗಳಿಗೂ ರಜೆ ಘೋಷಿಸಲಾಗಿದ್ದು, ನ್ಯಾಯಾಲಯ ಕಲಾಪಗಳು ಇಂದು ನಡೆಯುವುದಿಲ್ಲ.
ಕೋರ್ಟ್ ಕಲಾಪದಲ್ಲಿ ಇಂದು ನಡೆಯಬೇಕಿದ್ದ ಎಲ್ಲ ಪ್ರಕರಣಗಳನ್ನು ಮುಂದಿನ ವಿಚಾರಣಾ ದಿನದಂದು ಕೈಗೆತ್ತಿಕೊಳ್ಳಲಾಗುವುದು.
ಈ ಬಗ್ಗೆ ಕರ್ನಾಟಕ ಹೈಕೋರ್ಟ್ ಅಧಿಕೃತ ಪ್ರಕಟಣೆಯನ್ನು ಹೊರಡಿಸಿದ್ದು, ನೆಗೋಷಿಯೆಬಲ್ ಇನ್ಸ್‌ಟ್ರುಮೆಂಟ್ ಆಕ್ಟ್ ಅಡಿಯಲ್ಲಿ ರಜೆ ಘೋಷಿಸಿದೆ. ಹಾಗೂ 26-12-2024ರಿಂದ 1-1-2025ರ ವರೆಗೆ ಶೋಕಾಚರಣೆ ನಡೆಸಲು ಅಧಿಸೂಚನೆಯಲ್ಲಿ ಹೇಳಿದೆ.
ರಾಜ್ಯದ ಎಲ್ಲ ನ್ಯಾಯಾಲಯ ಸಂಕೀರ್ಣಗಳಲ್ಲಿ ರಾಷ್ಟ್ರಧ್ವಜವನ್ನು ಅರ್ಧಕ್ಕೆ ಇಳಿಸಿ ಮೃತ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಗೌರವ ಸಲ್ಲಿಸುವಂತೆ ಜಿಲ್ಲಾ ಹಾಗೂ ವಿಚಾರಣಾ ನ್ಯಾಯಾಲಯಗಳಿಗೆ ಸೂಚನೆ ನೀಡಿದೆ.
ಬೆಂಗಳೂರು ವಕೀಲರ ಸಂಘ ಸಂದೇಶವನ್ನು ಕಳಿಸಿದ್ದು, ನ್ಯಾಯಾಲಯಗಳಿಗೆ ರಜೆ ನೀಡಿರುವ ವಿಷಯವನ್ನು ದೃಢಪಡಿಸಿದೆ.