-->
ಜಾತಿ ನಿಂದನೆ, ಪೋಕ್ಸೋ ಸುಳ್ಳು ಕೇಸು ಹಾಕಿದ ಸಂತ್ರಸ್ತೆಗೆ ಕೋರ್ಟ್ ದಂಡ!- ಪರಿಹಾರ ವಾಪಸ್ ನೀಡಲು ಆದೇಶ

ಜಾತಿ ನಿಂದನೆ, ಪೋಕ್ಸೋ ಸುಳ್ಳು ಕೇಸು ಹಾಕಿದ ಸಂತ್ರಸ್ತೆಗೆ ಕೋರ್ಟ್ ದಂಡ!- ಪರಿಹಾರ ವಾಪಸ್ ನೀಡಲು ಆದೇಶ

ಜಾತಿ ನಿಂದನೆ, ಪೋಕ್ಸೋ ಸುಳ್ಳು ಕೇಸು ಹಾಕಿದ ಸಂತ್ರಸ್ತೆಗೆ ಕೋರ್ಟ್ ದಂಡ!- ಪರಿಹಾರ ವಾಪಸ್ ನೀಡಲು ಆದೇಶ





ಅಮಾಯಕ ಯುವಕನ ಮೇಲೆ ಸುಳ್ಳು ಜಾತಿ ನಿಂದನೆ ಮತ್ತು ಪೋಕ್ಸೊ ಪ್ರಕರಣ ದಾಖಲಿಸಿದ ಸಂತ್ರಸ್ತೆ ಮತ್ತು ಫಿರ್ಯಾದಿ ವಿರುದ್ಧ ನ್ಯಾಯಾಲಯ ದಂಡ ಹಾಕಿ ತೀರ್ಪು ನೀಡಿದೆ.


ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯ (ಪೋಕ್ಸೋ ಫಾಸ್ಟ್ ಟ್ರ್ಯಾಕ್‌) ಇಲ್ಲಿನ ಮಾನ್ಯ ನ್ಯಾಯಾಧೀಶರಾದ ವಿನಯ್ ದೇವರಾಜ್ ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿದೆ.


ಕಾನೂನು ದುರುಪಯೋಗ ಮಾಡಿ ಅಮಾಯಕರು ಜೈಲು ಕಂಬಿ ಎಣಿಸುವಂತೆ ಮಾಡಿದ್ದ ಫಿರ್ಯಾದಿಯವರು ಮತ್ತು ಸಂತ್ರಸ್ತೆಗೆ ಸರ್ಕಾರದಿಂದ ನೀಡಲಾದ ಪರಿಹಾರದ ಮೊತ್ತವನ್ನು ವಾಪಸ್ ಕೊಡುವಂತೆ ನ್ಯಾಯಾಲಯ ಆದೇಶ ಮಾಡಿದೆ. ಒಂದು ವೇಳೆ, ಇದಕ್ಕೆ ವಿಫಲವಾದಲ್ಲಿ ಸರ್ಕಾರವೇ ಫಿರ್ಯಾದಿಯಿಂದ ಈ ಮೊತ್ತವನ್ನು ವಸೂಲಿ ಮಾಡುವಂತೆ ಜಿಲ್ಲಾಧಿಕಾರಿಗೆ ನಿರ್ದೇಶಿಸಲಾಗಿದೆ.


ತನ್ನ ಮೇಲಿನ ಸಾಲದ ವಸೂಲಿಯಿಂದ ತಪ್ಪಿಸಿಕೊಳ್ಳಲು ಮಂಗಳೂರಿನ ಯುವಕನ ಮೇಲೆ ಬಾಲಕಿಯ ತಾಯಿ ಸುಳ್ಳು ಜಾತಿ ನಿಂದನೆ ಮತ್ತು ಪೋಕ್ಸೋ ಪ್ರಕರಣ ದಾಖಲಿಸಿದ್ದರು.


ಘಟನೆಯ ವಿವರ:

ಬಂಟ್ವಾಳ ತಾಲೂಕಿನ ತೇಜಸ್ ಎಂಬ ಯುವಕ 2024ರ ಮಾರ್ಚ್ 21ರಂದು ತಮ್ಮ ಮನೆಗೆ ಅಕ್ರಮ ಪ್ರವೇಶ ಮಾಡಿ ವಾಗ್ವಾದ ಮಾಡಿದ್ದಲ್ಲದೆ ತನ್ನ ಅಪ್ರಾಪ್ತ ಪುತ್ರಿಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಹಾಗೂ ತಮ್ಮ ಜಾತಿ ನಿಂದನೆ ಮಾಡಿದ್ದ ಹಾಗೂ ಆತ ತನ್ನ ಕುಟುಂಬದ ಸದಸ್ಯರಿಗೆ ಕೊಲೆ ಬೆದರಿಕೆ ಹಾಕಿದ್ದ ಎಂದು ಬಾಲಕಿಯ ತಾಯಿ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ಬಗ್ಗೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಪ್ರಕರಣದ ತನಿಖೆಯನ್ನು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ (ಕ್ಷಿಪ್ರಗತಿಯ ಪೋಕ್ಸೋ) ನ್ಯಾಯಾಲಯ ನಡೆಸಿತ್ತು.


ವಿಚಾರಣೆಯ ವೇಳೆ ಬಾಲಕಿಯ ತಾಯಿ ಆರೋಪಿ ತೇಜಸ್‌ನಿಂದ ಸಾಲ ಮತ್ತು ಚಿನ್ನ ಸಹಿತ 5.5 ಲಕ್ಷ ರೂಪಾಯಿ ಮೌಲ್ಯದ ಸ್ವತ್ತು ಪಡೆದುಕೊಂಡಿದ್ದರು ಎಂಬುದನ್ನು ಒಪ್ಪಿಕೊಂಡಿದ್ದರು. ತೇಜಸ್ ಈ ಬಗ್ಗೆ ಆಗಾಗ ತಾನು ನೀಡಿದ ಸಾಲ ವಾಪಸ್ ಕೇಳಿದ್ದ. ಇದರಿಂದ ತಪ್ಪಿಸಿಕೊಳ್ಳಲು ಫಿರ್ಯಾದಿ ತೇಜಸ್ ವಿರುದ್ದ ಲೈಂಗಿಕ ಕಿರುಕುಳ ಮತ್ತು ಜಾತಿ ನಿಂದನೆಯ ಆರೋಪ ಮಾಡಿ ಸುಳ್ಳು ದೂರು ದಾಖಲಿಸಿದ್ದರು.


ಜೊತೆಗೆ ಸಮಾಜ ಕಲ್ಯಾಣ ಇಲಾಖೆಯಿಂದ ಪರಿಹಾರದ ಮೊತ್ತವನ್ನು ಪಡೆದುಕೊಂಡಿದ್ದರು. ಪ್ರಕರಣದ ವಿಚಾರಣೆ ನಡೆಸುವ ವೇಳೆ ಬಾಲಕಿಯ ತಾಯಿ ಸಾಲ ಪಡೆದಿರುವ ವಿಚಾರವನ್ನು ಒಪ್ಪಿಕೊಂಡಿದ್ದರು. ಅಲ್ಲದೆ ಯುವಕನ ಮೇಲೆ ಸುಳ್ಳು ದೂರು ಹಾಕಿರುವುದನ್ನು ತಪ್ಪೊಪಿಕೊಂಡಿದ್ದರು.


ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಮಾನ್ಯ ನ್ಯಾಯಾಲಯ ಬಾಲಕಿಯ ಕುಟುಂಬಕ್ಕೆ ನೀಡಿದ ಪರಿಹಾರದ ಮತ್ತವನ್ನು ವಾಪಸ್ ನೀಡುವಂತೆ ಆದೇಶ ನೀಡಿದ್ದಾರೆ ಪರಿಹಾರದ ಮತ್ತ ವಾಪಸ್ ಕೊಡದಿದ್ದರೆ ಆಸ್ತಿಯ್ನು ಜಪ್ತಿ ಮಾಡಿ ಹಣ ವಸೂಲಿಗೆ ಕ್ರಮ ಕೈಗೊಳ್ಳುವಂತೆಯೂ ಜಿಲ್ಲಾಧಿಕಾರಿಗೆ ನಿರ್ದೇಶನ ನೀಡಿದ್ದಾರೆ.


Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu