-->
ಪಿಂಚಣಿ ಯೋಜನೆ: ಕೇಂದ್ರ ಸರಕಾರದಿಂದ ನೌಕರರಿಗೆ ಮಹತ್ವದ ಅಧಿಸೂಚನೆ- ಎಪ್ರಿಲ್ ಒಂದರಿಂದಲೇ ಹೊಸ ನಿಯಮ ಜಾರಿ

ಪಿಂಚಣಿ ಯೋಜನೆ: ಕೇಂದ್ರ ಸರಕಾರದಿಂದ ನೌಕರರಿಗೆ ಮಹತ್ವದ ಅಧಿಸೂಚನೆ- ಎಪ್ರಿಲ್ ಒಂದರಿಂದಲೇ ಹೊಸ ನಿಯಮ ಜಾರಿ

ಪಿಂಚಣಿ ಯೋಜನೆ: ಕೇಂದ್ರ ಸರಕಾರದಿಂದ ನೌಕರರಿಗೆ ಮಹತ್ವದ ಅಧಿಸೂಚನೆ

ಎಪ್ರಿಲ್ ಒಂದರಿಂದಲೇ ಹೊಸ ನಿಯಮ ಜಾರಿ



ಕೇಂದ್ರ ಸರಕಾರದ ನೌಕರರಿಗೆ ನಿವೃತ್ತಿಯ ನಂತರ ಆರ್ಥಿಕ ಭದ್ರತೆಯನ್ನು ಖಚಿತಪಡಿಸುವ ಏಕೀಕೃತ ಪಿಂಚಣಿ ಯೋಜನೆ (ಯೂನಿಫೈಡ್ ಪೆನ್ಷನ್ ಸ್ಕೀಮ್ - ಯುಪಿಎಸ್) ಜಾರಿಗೆ ತರಲು ಕೇಂದ್ರ ಸರಕಾರ ನಿರ್ಧರಿಸಿದೆ. ಈ ಬಗ್ಗೆ ಅಧಿಸೂಚನೆ ಹೊರಡಿಸಿರುವ ಕೇಂದ್ರ ಹಣಕಾಸು ಸಚಿವಾಲಯ ಎಪ್ರಿಲ್ ಒಂದರಿಂದ ನೂತನ ಪಿಂಚಣಿ ಯೋಜನೆಯಾದ ಏಕೀಕೃತ ಪೆನ್ಷನ್ ಸ್ಕೀಮ್‌ (ಯುಪಿಎಸ್)ನ್ನು ಜಾರಿಗೊಳಿಸಲಾಗುವುದು ಎಂದು ಸ್ಪಷ್ಟಪಡಿಸಿದೆ.


ಹಳೆಯ ಪಿಂಚಣಿ ಯೋಜನೆ (ಓಪಿಎಸ್) ಮತ್ತು ರಾಷ್ಟ್ರೀಯ ಪಿಂಚಣಿ ವ್ಯವಸ್ಥೆ (ಎನ್‌ಪಿಎಸ್) ಎರಡನ್ನೂ ಸಂಯೋಜಿಸಿ ಏಕೀಕೃತ ಪೆನ್ಶನ್ ಯೋಜನೆ (ಯುಪಿಎಸ್)ನ್ನು ರೂಪಿಸಲಾಗಿದೆ. ಕನಿಷ್ಠ 10 ವರ್ಷಗಳ ಸೇವೆ ಪೂರ್ಣಗೊಳಿಸಿದವರು ಇದಕ್ಕೆ ಅರ್ಹರು. ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್ ಪಿ ಎಸ್) ನಲ್ಲಿ ಈಗಾಗಲೇ ನೋಂದಣಿಯಾದವರಿಗೆ ಯುಪಿಎಸ್ ಯೋಜನೆ ತನ್ನಂತಾನೆ ಅನ್ವಯವಾಗುತ್ತದೆ.


ಕೇಂದ್ರ ಸರ್ಕಾರ ಹಲವು ವರ್ಷಗಳ ಹಿಂದೆ ಸ್ಥಗಿತಗೊಳಿಸಿದ್ದ ಹಳೆಯ ಪಿಂಚಣಿ ಯೋಜನೆಯನ್ನು ಮತ್ತೆ ಪ್ರಾರಂಭಿಸುವಂತೆ ಕೇಂದ್ರ ಸರಕಾರದ ಅನೇಕ ಇಲಾಖೆಗಳ ನೌಕರರು ಒತ್ತಾಯ ಮಾಡುತ್ತಿದ್ದರು. ಅವರಿಗೂ ಹೊಸ ಯೋಜನೆಯಲ್ಲಿ ಗಮನಾರ್ಹ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.


ಕೆಲವು ರಾಜ್ಯಗಳಂತೂ ರಾಜ್ಯ ಸರ್ಕಾರಿ ನೌಕರರ ಸಂಘಟನೆಗಳ ಒತ್ತಾಯಕ್ಕೆ ಮಣಿದು ಈಗಾಗಲೇ  ಹಳೆಯ ಪಿಂಚಣಿ ಯೋಜನೆ (ಓ ಪಿ ಎಸ್)ಯನ್ನು ಪುನರ್ ಆರಂಭಿಸಿವೆ. ಕೇಂದ್ರ ಸರಕಾರಿ ನೌಕರರಿಗೆ ರಾಷ್ಟ್ರೀಯ ಪಿಂಚಣಿ ಯೋಜನೆಯ ಅಡಿಯಲ್ಲಿ ಯುಪಿಎಸ್ ಒಂದು ಆಯ್ಕೆ ಆಗಿರುತ್ತದೆ.


ಈಗಾಗಲೇ ಎನ್ ಪಿ ಎಸ್ ಪಿಂಚಣಿ ಯೋಜನೆಯ ಭಾಗ ಆಗಿರುವವರಿಗೆ ಮತ್ತು ಹೊಸ ಯೋಜನೆ ಆಯ್ಕೆ ಮಾಡಿಕೊಳ್ಳಲು ಬಯಸುವವರಿಗೆ ಮಾತ್ರ ಏಕೀಕೃತ ಪಿಂಚಣಿ ಯೋಜನೆ ಅನ್ವಯವಾಗುತ್ತದೆ ಎಂಬ ವಿಷಯವನ್ನು ಕೇಂದ್ರ ಹಣಕಾಸು ಸಚಿವಾಲಯ ಹೊರಡಿಸಿರುವ ಅಧಿಸೂಚನೆಯಲ್ಲಿ ಸ್ಪಷ್ಟಪಡಿಸಲಾಗಿದೆ.


ಏಕೀಕೃತ ಪೆನ್ಷನ್ ಸ್ಕೀಮ್‌ (ಯುಪಿಎಸ್) ಯೋಜನೆಯನ್ನು ಜಾರಿಗೆ ತರಲು ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ ಪಿಎಫ್ಆರ್‌ಡಿಎ ನೂತನ ನಿಯಮಗಳನ್ನು ರೂಪಿಸಲಿದೆ.


ಆದರೆ, ಈಗ ಹೊರಡಿಸಿರುವ ಅಧಿಸೂಚನೆಯಲ್ಲಿ ಕೆಲವೊಂದು ಗೊಂದಲ ಇದ್ದು, ಅದಕ್ಕೆ ಸೂಕ್ತ ಸ್ಪಷ್ಟನೆ ಅಗತ್ಯವಿದೆ. ಇಂತಹ ಹಲವಾರು ಅಂಶಗಳು ಕರಡು ಯೋಜನೆಯಲ್ಲಿ ಅಡಕವಾಗಿವೆ.


ಕೇಂದ್ರ ಸರಕಾರಿ ನೌಕರರೊಬ್ಬರು ಕನಿಷ್ಠ 25 ವರ್ಷಗಳ ಸೇವೆ ಪೂರ್ಣಗೊಳಿಸಿ ಸ್ವಯಂ ನಿವೃತ್ತಿ ಪಡೆದರೆ ಅವರಿಗೆ ಪಿಂಚಣಿ ಸೌಲಭ್ಯಗಳು ತಕ್ಷಣದಿಂದಲೇ ಪ್ರಾರಂಭವಾಗುವುದಿಲ್ಲ. ಸ್ವಯಂ ನಿವೃತ್ತಿ ಪಡೆದ ಸರ್ಕಾರಿ ನೌಕರರು ಅಧಿಕೃತವಾಗಿ ನಿವೃತ್ತಿ ವಯಸ್ಸನ್ನು ಯಾವ ದಿನಾಂಕದಂದು ತಲುಪುತ್ತಾರೋ ಆ ದಿದಿಂದ ಅವರಿಗೆ ಪಿಂಚಣಿ ಸೌಲಭ್ಯಗಳು ಪ್ರಾರಂಭವಾಗುತ್ತವೆ ಎಂಬುದನ್ನು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.


ಹೀಗಾದರೆ ಸ್ವಯಂ ನಿವೃತ್ತಿಗೆ ಇರುವ ಕನಿಷ್ಠ ಸೇವಾ ಅವಧಿಯನ್ನು ಈಗಿರುವ 20 ವರ್ಷಗಳಿಂದ 25 ವರ್ಷಗಳಿಗೆ ಏರಿಸಲಾಯಿತೇ ಎಂಬ ಪ್ರಶ್ನೆ ಉದ್ಭವಿಸುತ್ತದೆ. 


2024ರ ಆಗಸ್ಟ್ 24ರಂದು ಸಚಿವ ಸಂಪುಟ ಕೇಂದ್ರದ 23 ಲಕ್ಷ ನೌಕರರಿಗೆ ಯುಪಿಎಸ್ ಅನುಮೋದನೆ ನೀಡಿದೆ. ಸರ್ಕಾರಿ ನೌಕರರು ಸರ್ಕಾರಿ ಸೇವೆಯಲ್ಲಿ ತಮ್ಮ 25 ವರ್ಷಗಳ ಸೇವಾವಧಿ ಪೂರ್ಣಗೊಳಿಸಿದ್ದರೆ, ಡಿದ್ದರೆ ಸರಾಸರಿ ಮೂಲ ವೇತನದ ಶೇಕಡ 50ರಷ್ಟು ಹಣವನ್ನು ಮಾಸಿಕ ಪಿಂಚಣಿಯಾಗಿ ನೀಡಲಾಗುವುದು ಎಂದು ಭರವಸೆ ನೀಡಲಾಗಿದೆ.


ನೌಕರರ ಸಂಘಟನೆಗಳು ಒತ್ತಾಯಿಸುತ್ತಿರುವುದರಿಂದ ಪಿಂಚಣಿ ವ್ಯವಸ್ಥೆಯನ್ನು ಮರು ವಿನ್ಯಾಸಗೊಳಿಸುವುದಕ್ಕಾಗಿ 2023ರ ಏಪ್ರಿಲ್ ನಲ್ಲಿ ಆಗಿನ ಹಣಕಾಸು ಕಾರ್ಯದರ್ಶಿ ಟಿವಿ ಸೋಮನಾಥನ್ ಅವರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನು ಕೇಂದ್ರ ಸರಕಾರ ರಚನೆ ಮಾಡಿತ್ತು. 


ಈ ಸಮಿತಿ ನೀಡಿದ ಶಿಫಾರಸುಗಳ ಆಧಾರದಲ್ಲಿ ಯೂನಿಫೈಡ್ ಪೆನ್ಷನ್ ಸ್ಕೀಮ್ ಅಥವಾ ಏಕೀಕೃತ ಪಿಂಚಣಿ ಯೋಜನೆಯನ್ನು ಜಾರಿಗೆ ತರಲಾಗಿದೆ


ಯುಪಿಎಸ್ ನ ವಿಶೇಷತೆಗಳೇನು

ಕನಿಷ್ಠ 10 ವರ್ಷ ಸೇವೆ ಸಲ್ಲಿಸಿ, ನಿವ್ರತ್ತರಾದವರಿಗೆ ಮಾಸಿಕ 10,000 ಪಿಂಚಣಿ ಸಿಗುತ್ತದೆ 

ಕನಿಷ್ಠ 25 ವರ್ಷ ಸೇವೆ ಸಲ್ಲಿಸಿದವರಿಗೆ ಮೂಲವೇತನದ ಶೇಕಡ 50ರಷ್ಟು ಪಿಂಚಣಿ ಸಿಗುತ್ತದೆ.

ಪಿಂಚಣಿದಾರರು ನಿಧನ ಹೊಂದಿದರೆ, ಆಗ ಅವರ ಬಾಳಸಂಗಾತಿಗೆ ಶೇಕಡ 60ರಷ್ಟು ಪಿಂಚಣಿ ದೊರೆಯುತ್ತದೆ


ಏಕೀಕೃತ ಪಿಂಚಣಿ ಯೋಜನೆ, ಯಾರಿಗೆ ಅನ್ವಯವಾಗುತ್ತದೆ?

2025ರ ಏಪ್ರಿಲ್ 1ರ ನಂತರ ಕೆಲಸಕ್ಕೆ ಸೇರುವವರಿಗೆ ಈ ಯೋಜನೆ ಅನ್ವಯವಾಗುತ್ತದೆ.

ಈಗಾಗಲೇ ನಿವೃತ್ತಿ ಹೊಂದಿದವರಿಗೆ ಈ ಯೋಜನೆಯನ್ನು ಅನ್ವಯ ಮಾಡಬಹುದು.

2025ರ ಮಾರ್ಚ್ ವರೆಗೆ ನಿವೃತ್ತಿ ಹೊಂದುವವರಿಗೆ ಇದು ಅನ್ವಯ.


ಯಾರಿಗೆ ಅರ್ಹತೆ ಇಲ್ಲ?

ಸೇವೆಯಿಂದ ವಜಾ ಆದವರು 

ಅಥವಾ 

ರಾಜೀನಾಮೆ ನೀಡಿದವರು ಏಕೀಕೃತ ಪಿಂಚಣಿ ಯೋಜನೆಗೆ ಅರ್ಹರಾಗಿರುವುದಿಲ್ಲ

Ads on article

Advertise in articles 1

advertising articles 2

Advertise under the article