-->
ಮಗುವಿನ ಆರೈಕೆಗೆ ಜಡ್ಜ್‌ಗೆ ರಜೆ ನಿರಾಕರಣೆ: ಜಾರ್ಖಂಡ್ ಹೈಕೋರ್ಟ್ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್‌

ಮಗುವಿನ ಆರೈಕೆಗೆ ಜಡ್ಜ್‌ಗೆ ರಜೆ ನಿರಾಕರಣೆ: ಜಾರ್ಖಂಡ್ ಹೈಕೋರ್ಟ್ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್‌

ಮಗುವಿನ ಆರೈಕೆಗೆ ಜಡ್ಜ್‌ಗೆ ರಜೆ ನಿರಾಕರಣೆ: ಜಾರ್ಖಂಡ್ ಹೈಕೋರ್ಟ್ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್‌





ತನ್ನ ಮಕ್ಕಳ ಆರೈಕೆಗೆ ತಮಗೆ ರಜೆ ನಿರಾಕರಣೆ ಮಾಡಿದ್ದ ಕ್ರಮವನ್ನು ಪ್ರಶ್ನಿಸಿ ಜಾರ್ಖಂಡ್‌ನ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರೊಬ್ಬರು ಸುಪ್ರೀಂ ಕೋರ್ಟ್ ಕದ ತಟ್ಟಿದ್ಧಾರೆ. ಈ ಅರ್ಜಿಯನ್ನು ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಜಾರ್ಖಂಡ್ ಹೈಕೋರ್ಟ್‌ನ ಪ್ರತಿಕ್ರಿಯೆಯನ್ನು ಕೇಳಿದೆ.


ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾ. ಆಗಸ್ಟಿನ್ ಜಾರ್ಜ್ ಮಸೀಹ್ ಅವರಿದ್ದ ನ್ಯಾಯಪೀಠ ಈ ಆದೇಶ ಹೊರಡಿಸಿದೆ.


ಮಧ್ಯಪ್ರದೇಶದ ಕಾಶಿಕಾ ಎಂ. ಕಾಶಿಕಾ ಎಂ. ಪ್ರಸಾದ್  ಅವರು ಸುಪ್ರೀಂ ಕೋರ್ಟ್‌ನಲ್ಲಿ ಈ ಅರ್ಜಿ ಸಲ್ಲಿಸಿದ್ದರು. ತಾನೊಬ್ಬ ಸಿಂಗಲ್ ಪೇರೆಂಟ್ ಎಂದು ಹೇಳಿಕೊಂಡಿರುವ ಜಡ್ಜ್‌ ಅವರ ರಜೆ ಕುರಿತಂತೆ ಜಾರ್ಖಂಡ್ ಹೈಕೋರ್ಟ್‌ನ ಪ್ರತಿಕ್ರಿಯೆ ಕೋರಿ ಸುಪ್ರೀಂ ಕೋರ್ಟ್‌ ನೋಟೀಸ್ ಜಾರಿಗೊಳಿಸಿದೆ.


ನೋಟೀಸಿಗೆ ಒಂದು ವಾರದೊಳಗೆ ಪ್ರತಿಕ್ರಿಯೆ ನೀಡಬೇಕು ಎಂದು ಸೂಚಿಸಿರುವ ನ್ಯಾಯಪೀಠ, ಮುಂದಿನ ವಿಚಾರಣೆ ವೇಳೆ ಪ್ರಕರಣದ ವಿಲೇವಾರಿ ಮಾಡುವುದಾಗಿ ತಿಳಿಸಿದೆ.


ಅರ್ಜಿದಾರ ನ್ಯಾಯಾಧೀಶರ ಕಾರ್ಯಕ್ಷಮತೆಯ ದಾಖಲೆಯನ್ನು ಪರಿಗಣಿಸಿ ಅವರಿಗೆ ರಜೆ ನೀಡಬೇಕು ಎಂದು ಅವರ ಪರ ವಕೀಲರು ನ್ಯಾಯಪೀಠಕ್ಕೆ ನಿವೇದಿಸಿಕೊಂಡರು.


ಸುಪ್ರೀಂ ಕೋರ್ಟ್‌ನ್ನು ಸಂಪರ್ಕಿಸುವ ಮುನ್ನ ಹೈಕೋರ್ಟ್‌ ಮುಂದೆ ಏಕೆ ಅರ್ಜಿ ಸಲ್ಲಿಸಲಿಲ್ಲ ಎಂಬುದಾಗಿ ನ್ಯಾಯಪೀಠ ಅರ್ಜಿದಾರರಲ್ಲಿ ಕೇಳಿತು. ಇದಕ್ಕೆ ಉತ್ತರಿಸಿದ ಅವರ ಪರ ವಕೀಲರು, ಅರ್ಜಿದಾರರು ತುರ್ತು ಪರಿಹಾರ ಕೋರುತ್ತಿದ್ಧಾರೆ, ರಜಾ ಕಾಲೀನ ಪೀಠ ಬೇಸಿಗೆ ರಜೆಯ ನಂತರ ಈ ಪ್ರಕರಣವನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದ್ದ ಕಾರಣ ಅರ್ಜಿದಾರರು ಅನಿವಾರ್ಯವಾಗಿ ಸುಪ್ರೀಂ ಕದ ತಟ್ಟಬೇಕಾಯಿತು ಎಂದು ಜಡ್ಜ್ ಪರ ವಾದ ಮಂಡಿಸಿದ ವಕೀಲರು ಮನವರಿಕೆ ಮಾಡಿಕೊಟ್ಟರು.


ಪ್ರಕರಣ: ಕಾಶಿಕಾ ಎಂ. ಪ್ರಸಾದ್ Vs ಮಧ್ಯಪ್ರದೇಶ ಸರ್ಕಾರ (ಸುಪ್ರೀಂ ಕೋರ್ಟ್‌)

Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu