-->
ಜಿಲ್ಲಾ ಕೋರ್ಟ್‌ನಲ್ಲೂ A4 ವೈಟ್‌ ಶೀಟ್‌ನಲ್ಲಿ ಅರ್ಜಿ ಮನವಿ: ಕರ್ನಾಟಕ ಹೈಕೋರ್ಟ್ ನಿರ್ದೇಶನ

ಜಿಲ್ಲಾ ಕೋರ್ಟ್‌ನಲ್ಲೂ A4 ವೈಟ್‌ ಶೀಟ್‌ನಲ್ಲಿ ಅರ್ಜಿ ಮನವಿ: ಕರ್ನಾಟಕ ಹೈಕೋರ್ಟ್ ನಿರ್ದೇಶನ

ಜಿಲ್ಲಾ ಕೋರ್ಟ್‌ನಲ್ಲೂ A4 ವೈಟ್‌ ಶೀಟ್‌ನಲ್ಲಿ ಅರ್ಜಿ ಮನವಿ: ಕರ್ನಾಟಕ ಹೈಕೋರ್ಟ್ ನಿರ್ದೇಶನ




ಹೈಕೋರ್ಟ್ ಮಾದರಿಯಲ್ಲೇ ಜಿಲ್ಲಾ ನ್ಯಾಯಾಲಯಗಳಲ್ಲೂ ಎ4 ವೈಟ್ ಶೀಟ್‌ಗಳಲ್ಲಿ ಅರ್ಜಿಗಳನ್ನು ಸಲ್ಲಿಸಬಹುದು ಮತ್ತು ಇಂತಹ ಅರ್ಜಿ ಮತ್ತು ಮನವಿಗಳನ್ನು ನ್ಯಾಯಾಲಯದ ಸಿಬ್ಬಂದಿ ಸ್ವೀಕರಿಸಬೇಕು ಎಂದು ಕರ್ನಾಟಕ ಹೈಕೋರ್ಟ್‌ ರಾಜ್ಯದ ಎಲ್ಲ ಜಿಲ್ಲಾ ನ್ಯಾಯಾಲಯಗಳಿಗೆ ನಿರ್ದೇಶನ ಹೊರಡಿಸಿದೆ.


ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯವರ ಆದೇಶದ ಹಿನ್ನೆಲೆಯಲ್ಲಿ ರಿಜಿಸ್ಟ್ರಾರ್ ಜನರಲ್ ಕೆ.ಎಸ್. ಭರತ್ ಕುಮಾರ್ ಅವರು ಡಿಸ್ಟ್ರಿಕ್ಟ್‌ ಕೋರ್ಟ್‌ಗಳಿಗೆ ಸುತ್ತೋಲೆಯನ್ನು ಹೊರಡಿಸಿರುತ್ತಾರೆ.


ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ ಮಾದರಿಯಲ್ಲೇ ವಕೀಲರು ಜಿಲ್ಲಾ ನ್ಯಾಯಾಲಯಗಳಲ್ಲೂ A4 ವೈಟ್‌ ಶೀಟ್‌ನಲ್ಲೇ ತಮ್ಮ ಅರ್ಜಿಗಳನ್ನು ಮನವಿಗಳನ್ನು ಸಲ್ಲಿಸಬಹುದು ಎಂದು ಸುತ್ತೋಲೆಯಲ್ಲಿ ಸೂಚಿಸಲಾಗಿದೆ.


ಜಿಲ್ಲಾ ನ್ಯಾಯಾಲಯಗಳಲ್ಲಿ A4 ಶೀಟ್‌ಗಳಲ್ಲಿ ಅರ್ಜಿಗಳನ್ನು ಸ್ವೀಕರಿಸದಿರುವ ಬಗ್ಗೆ ವಕೀಲರು ಹೈಕೋರ್ಟ್‌ ಗಮನಕ್ಕೆ ತಂದರು. ಇದನ್ನು ಪರಿಗಣಿಸಿದ ಹೈಕೋರ್ಟ್‌, ಸಿವಿಲ್ ಮತ್ತು ಕ್ರಿಮಿನಲ್ ರೂಲ್ಸ್‌ ಆಫ್ ಪ್ರ್ಯಾಕ್ಟೀಸ್‌ಗೆ ಮಾರ್ಪಾಟು ಮಾಡಲಾಗಿದ್ದು, ಜಿಲ್ಲಾ ನ್ಯಾಯಾಲಯಗಳೂ ಇನ್ನು ಮುಂದೆ ಯಾವುದೇ ಪತ್ರಿಕೆಗಳು ದಾಖಲೆಗಳು ಇತ್ಯಾದಿಗಳನ್ನು ಸ್ವೀಕರಿಸುವಾಗ ಕರ್ನಾಟಕ ಸಿವಿಲ್ ರೂಲ್ಸ್ ಆಫ್ ಪ್ರ್ಯಾಕ್ಟೀಸ್‌ನಂತೆ ಹೈಕೋರ್ಟ್ ಸೂಚನೆಯನ್ನು ಪಾಲಿಸುವಂತೆ ನಿರ್ದೇಶನ ನೀಡಲಾಗಿದೆ.


ಈ ಸೂಚನೆ ಮತ್ತು ಆಫ್ ಪ್ರ್ಯಾಕ್ಟೀಸ್‌ ನಂತೆ ವಕೀಲರು ತಮ್ಮ ವಾದ ಮನವಿ, ಜ್ಞಾಪನ ಇತ್ಯಾದಿಗಳನ್ನು A4 ವೈಟ್‌ ಶೀಟ್‌ನಲ್ಲಿ ಸಲ್ಲಿಸಬಹುದಾಗಿದೆ. ಈ ನಿಯಮಗಳನ್ನು ಜಿಲ್ಲಾ ನ್ಯಾಯಾಂಗದ ಎಲ್ಲ ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಹೈಕೋರ್ಟ್ ತಾಕೀತು ಮಾಡಿದೆ.


ಹೈಕೋರ್ಟ್‌ನಲ್ಲಿ ಲೀಗಲ್ ಗ್ರೀನ್ ಶೀಟ್‌ಗಳಲ್ಲಿ ಫೈಲಿಂಗ್ ಮಾಡುವುದರಿಂದ ವಿನಾಯಿತಿ ನೀಡಲಾಗಿತ್ತು. ಅಲ್ಲಿಂದೀಚೆಗೆ ಎಲ್ಲ ಮೇಲ್ಮನವಿಗಳು, ಮನವಿಗಳು, ಅಫಿಡವಿಟ್‌ಗಳು, ಮಧ್ಯಂತರ ಅರ್ಜಿಗಳು ಅಥವಾ ಇತರೆ ಮೊಮೊರಾಂಡಮ್‌ಗಳು ಮತ್ತು ದಾಖಲೆಗಳನ್ನು A4 ಸೈಜ್‌ನ ದೃಢವಾದ ಮತ್ತು ಬಾಳಿಕೆ ಬರುವ ಬಿಳಿ ಹಾಳೆಯಲ್ಲಿ ಸಲ್ಲಿಸಲು ಸೂಚಿಲಾಗಿತ್ತು.


ಎರಡು ವರ್ಷಗಳ ಹಿಂದೆ ಇದೇ ನಿಯಮಗಳನ್ನು ಕರ್ನಾಟಕ ಹೈಕೋರ್ಟ್‌ ಈ ನಿಯಮಗಳನ್ನು ಜಾರಿಗೊಳಿಸಿತ್ತು. ಈಗ ಅದು ಜಿಲ್ಲಾ ನ್ಯಾಯಾಂಗಕ್ಕೂ ವಿಸ್ತರಣೆಯಾಗಿದೆ.



Ads on article

Advertise in articles 1

advertising articles 2

Advertise under the article