-->
ವಂಚನೆ ಪ್ರಕರಣ: ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ವಂಚನೆ ಪ್ರಕರಣ

ವಂಚನೆ ಪ್ರಕರಣ: ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ವಂಚನೆ ಪ್ರಕರಣ


ವಂಚನೆ ಪ್ರಕರಣ: ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ವಂಚನೆ ಪ್ರಕರಣ



ಕನ್ನಡ ಚಲನಚಿತ್ರ ರಂಗದ ನಿರ್ಮಾಪಕ ಸೂರಪ್ಪ ಬಾಬು ವಿರುದ್ಧ ವಂಚನೆ ಪ್ರಕರಣ ದಾಖಲಾಗಿದೆ. ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.


2023ರಲ್ಲಿ ತಮಗೆ ಆರೋಪಿ ಸೂರಪ್ಪ ಬಾಬು ವಂಚಿಸಿದ್ದಾರೆ ಎಂದು ದೂರುದಾರೆ ಲಕ್ಷ್ಮಿ ಎಂಬವರು ದೂರು ನೀಡಿದ್ದಾರೆ.


ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ತಮ್ಮನ್ನು ನಟಿಯನ್ನಾಗಿ ಮಾಡಿ ಚಲನಚಿತ್ರ ನಿರ್ಮಿಸುತ್ತೇನೆ ಎಂದು ಭರವಸೆ ನೀಡಿ ಆರೋಪಿ ಸೂರಪ್ಪ ಬಾಬು ತಮ್ಮಿಂದ ಹಂತ ಹಂತವಾಗಿ 92 ಲಕ್ಷ ರೂ.ಗಳನ್ನು ಪಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.


ಸೂರಪ್ಪ ಬಾಬು ಮಾತನ್ನು ನಂಬಿ ನಾನು ಹಣ ನೀಡಿದ್ದೇನೆ. ಕಾಲಾನಂತರ ನನಗೆ ಸೂರಪ್ಪ ಅವರು ತಾವು ಹೇಳಿದ ಪ್ರಸಿದ್ಧ ನಟರೊಂದಿಗೆ ಚಿತ್ರ ನಿರ್ಮಿಸುತ್ತಿಲ್ಲ ಎಂದು ಗೊತ್ತಾಯಿತು. ತಾನು ನೀಡಿದ ಹಣ ವಾಪಸ್ ಕೇಳಿದಾಗ 25 ಲಕ್ಷ ರೂ. ಮಾತ್ರ ಕೊಟ್ಟರು. ಉಳಿದ ಹಣ ಕೊಟ್ಟಿಲ್ಲ ಎಂದು ಲಕ್ಷ್ಮಿ ತಮ್ಮ ದೂರಿನಲ್ಲಿ ಆರೋಪಿಸಿದ್ಧಾರೆ.


ಅಲ್ಲದೆ, ಉಳಿದ ಹಣ ಕೇಳಿದಾಗ ಸೂರಪ್ಪ ಬಾಬು ನನಗೆ ಬೆದರಿಕೆಯೊಡ್ಡಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಿದ್ದಾರೆ.


Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu