ಅನಾರೋಗ್ಯದಿಂದ ನಿತ್ರಾಣಗೊಂಡಿದ್ದ ವೃದ್ಧರಿಗೆ ಚಿಕಿತ್ಸೆ ನೀಡಿ ಮಾನವೀಯತೆ ಮರೆದ ಜಿಲ್ಲಾ ನ್ಯಾಯಾಧೀಶ
Saturday, June 28, 2025
ಅನಾರೋಗ್ಯದಿಂದ ನಿತ್ರಾಣಗೊಂಡಿದ್ದ ವೃದ್ಧರಿಗೆ ಚಿಕಿತ್ಸೆ ನೀಡಿ ಮಾನವೀಯತೆ ಮರೆದ ಜಿಲ್ಲಾ ನ್ಯಾಯಾಧೀಶ
ಅನಾರೋಗ್ಯದಿಂದ ನಿತ್ರಾಣಗೊಂಡು ಬೀದಿ ಬದಿಯಲ್ಲಿ ನರಳುತ್ತಿದ್ದ ವೃದ್ಧರಿಗೆ ಜಿಲ್ಲಾ ನ್ಯಾಯಾಧೀಶರೊಬ್ಬರು ಚಿಕಿತ್ಸೆ ನೀಡಿ ಮಾನವೀಯತೆ ಮರೆದಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ಪಟ್ಟಣದ ದೊಡ್ಡಬಾತಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಜಿಲ್ಲಾ ನ್ಯಾಯಾಧೀಶರ ಮಾನವೀಯ ಕೃತ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ದಾವಣಗೆರೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ.ಕೆ. ವೇಲು ಅವರು ದೊಡ್ಡಬಾತಿ ಗ್ರಾಮದಲ್ಲಿ ಹಾದುಹೋಗುತ್ತಿದ್ದಾಗ ರಸ್ತೆ ಬದಿಯಲ್ಲಿ ನಿಸ್ತೇಜಗೊಂಡು ನರಳುತ್ತಿದ್ದ ವೃದ್ದರನ್ನು ಗಮನಿಸಿದರು. ಕೂಡಲೇ ಅವರನ್ನು ವೈದ್ಯಾಧಿಕಾರಿ ಬಳಿ ಕರೆದೊಯ್ದು ಚಿಕಿತ್ಸೆ ಕೊಡಿಸಿದರು.
ಹರಪನಹಳ್ಳಿ ತಾಲೂಕು ತೆಲಗಿ ಗ್ರಾಮದ ಕರಿಯಪ್ಪ ಅವರು ಚಿಕಿತ್ಸೆ ಪಡೆದ ವಯೋವೃದ್ಧರಾಗಿದ್ದಾರೆ.