-->
ರಾಜ್ಯದಲ್ಲಿ ನಕಲಿ ವಕೀಲರ ಹಾವಳಿ ಹೆಚ್ಚಾಗಿದೆ: ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಆತಂಕ

ರಾಜ್ಯದಲ್ಲಿ ನಕಲಿ ವಕೀಲರ ಹಾವಳಿ ಹೆಚ್ಚಾಗಿದೆ: ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಆತಂಕ

ರಾಜ್ಯದಲ್ಲಿ ನಕಲಿ ವಕೀಲರ ಹಾವಳಿ ಹೆಚ್ಚಾಗಿದೆ: ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಆತಂಕ





ರಾಜ್ಯದಲ್ಲಿ ನಕಲಿ ವಕೀಲರ ಹಾವಳಿ ವಿಪರೀತವಾಗಿ ಹೆಚ್ಚಾಗಿದೆ ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಆತಂಕ ವ್ಯಕ್ತಪಡಿಸಿದೆ.


ಈಗಾಗಲೇ ಈ ಬಗ್ಗೆ ಅನೇಕ ನಕಲಿ ವಕೀಲರ ವಿರುದ್ಧ ದೂರುಗಳು ದಾಖಲಾಗಿದ್ದು, ಕೆಲವು ಪ್ರಕರಣದಲ್ಲಿ ಫೇಕ್ ವಕೀಲರ ವಿರುದ್ಧ ಎಫ್‌ಐಆರ್‌ನ್ನೂ ದಾಖಲಿಸಲಾಗಿದೆ ಎಂದು ವಕೀಲರ ಪರಿಷತ್ತು ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.


ಹೊರ ರಾಜ್ಯಗಳಲ್ಲಿ ಕಾನೂನು ಪದವಿಯನ್ನು ಮುಗಿಸಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನಲ್ಲಿ ನೋಂದಣಿಯಾದ ಕೆಲವು ವ್ಯಕ್ತಿಗಳ ಅಂಕಪಟ್ಟಿಗಳನ್ನು ದೃಢೀಕರಣಕ್ಕಾಗಿ ಆಯಾ ಶಿಕ್ಷಣ ಸಂಸ್ಥೆಗಳಿಗೆ ಕಳಿಸಿದಾಗ ಈ ಸರ್ಟಿಫಿಕೇಟ್‌ಗಳು ನಕಲಿ ಎಂದು ದೃಢಪಟ್ಟಿವೆ. ಕಂಡುಬಂದಿವೆ.


ತುಮಕೂರಿನಲ್ಲಿ ಸೈಯದ್ ಸಾದದ ಎಂಬವರು ತಾವೊಬ್ಬ ವಕೀಲರನೆಂದು ಹೇಳಿಕೊಂಡು ಶ್ರೀಮತಿ ಪೂಜಾ ಕುಮಾರಿ ಎಂಬವರ ನೋಂದಣಿಸಂಖ್ಯೆಯನ್ನು ದುರ್ಬಳಕೆ ಮಾಡಿಕೊಂಡು ತುಮಕೂರು ಉಪ ವಿಭಾಗಾಧಿಕಾರಿಗಳ ಕಚೇರಿಯಲ್ಲಿ ಕೇಸುಗಳಲ್ಲಿ ವಕಾಲತ್ತು ಹಾಕಿ ವಾದ ಮಾಡುತ್ತಿದ್ದಾರೆ. ಈತ ಸಾರ್ವಜನಿಕರಿಗೂ ಸಾಕಷ್ಟು ಕಿರುಕುಳ ನೀಡಿದ ಬಗ್ಗೆ ವರದಿಗಳು ಬಂದಿದ್ದು, ಈತನ ವಿರುದ್ಧ ಎಫ್‌ಐಆರ್ ದಾಖಲಾಗಿರುತ್ತದೆ. ಸದ್ರಿ ಪ್ರಕರಣ ನ್ಯಾಯಾಲಯದಲ್ಲಿ ತನಿಖೆಯಲ್ಲಿ ಇದೆ ಎಂದು ವಕೀಲರ ಪರಿಷತ್ತಿನ ಪ್ರಕಟಣೆ ತಿಳಿಸಿದೆ.


ಇನ್ನೊಂದು ಪ್ರಕರಣದಲ್ಲಿ ತುಮಕೂರಿನ ಎಸ್‌ಜಿ ಸದಾನಂದ ಗೌಡ್ರು ಎಂಬ ನಕಲಿ ವಕೀಲರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಇವರು ಸದಾನಂದ ಎಂಬ ಹೆಸರಿನ ವಕೀಲರ ನೋಂದಣಿ ಸಂಖ್ಯೆಯನ್ನು ದುರ್ಬಳಕೆ ಮಾಡಿಕೊಂಡಿದ್ಧಾರೆ.


ಹುಬ್ಬಳ್ಳಿಯ ಸುವರ್ಣ ಲತಾ ಗದಿಗೆಪ್ಪಗೌಡರ ಎಂಬವರು 2023ರಲ್ಲಿ ವಕೀಲರ ಪರಿಷತ್ತಿನಲ್ಲಿ ನೋಂದಣಿಯಾಗಿದ್ದು, ನೋಂದಣಿ ಸಂದರ್ಭದಲ್ಲಿ ನಕಲಿ ದಾಖಲೆಗಳು ಮತ್ತು ಸುಳ್ಳು ಮಾಹಿತಿಗಳನ್ನು ನೀಡಿರುವುದು ಕಂಡುಬಂದಿದೆ.


ಈ ಮಹಿಳೆ 2019-20ನೇ ಸಾಲಿನಲ್ಲಿ ಹುಬ್ಬಳ್ಳಿಯ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕಿಯಾಗಿ ವೇತನವನ್ನೂ ಪಡೆದಿರುತ್ತಾರೆ. ಇವರ ವಿರುದ್ಧ ಈಗಾಗಲೇ ಹುಬ್ಬಳ್ಳಿಯ ಅನೇಕ ಪೊಲೀಸ್ ಠಾಣೆಗಳಲ್ಲಿ ಕೇಸುಗಳು ದಾಖಲಾಗಿರುತ್ತದೆ.


ಇನ್ನು ಕೆಲವರು ನೋಂದಣಿ ಸಮಯದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಅಪರಾಧ ಪ್ರಕರಣಗಳ ಬಗ್ಗೆ ಮಾಹಿತಿಯನ್ನು ಮುಚ್ಚಿಟ್ಟಿದ್ದಾರೆ.


ಬೆಂಗಳೂರಿನ ಬಸವೇಶ್ವರ ಪೊಲೀಸ್ ಠಾಣೆಗೆ ಪವಿತ್ರಾ ಎಂಬವರ ಪರವಾಗಿ ಯೋಗಾನಂದ ಎಂಬವರು ಭೇಟಿ ನೀಡಿ ತಾನೊಬ್ಬ ವಕೀಲನೆಂದು ಹೇಳಿದ್ದ. ಆರೋಪಿಯ ಮನೆಯ ಬೀಗ ಪಡೆದುಕೊಂಡು ಹೋಗುತ್ತಿದ್ದ ಆತನನ್ನು ವಿಚಾರಿಸಿದಾಗ, ಆತ ವಕೀಲನಲ್ಲ, ಬದಲಿಗೆ ಒಬ್ಬ ಶಿಕ್ಷಕ ಎಂದು ತಪ್ಪೊಪ್ಪಿಕೊಂಡಿದ್ದಾನೆ. ಈತನ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ ಎಂದು ವಕೀಲರ ಪರಿಷತ್ತಿನ ಅಧ್ಯಕ್ಷರಾದ ಎಸ್.ಎಸ್. ಮಿಟ್ಟಲಕೋಡ ಅವರು ಮಾಹಿತಿ ನೀಡಿದ್ದಾರೆ.


Ads on article

Advertise in articles 1

advertising articles 2

Advertise under the article