.jpg)
ಸಂಚಾರಕ್ಕೆ ಅಡ್ಡಿ ಪ್ರಕರಣ: ನಾಲ್ಕು ದಿನ ಪೊಲೀಸ್ ಠಾಣೆಯಲ್ಲಿ ಕಸ ಗುಡಿಸುವ ಶಿಕ್ಷೆ- ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ಕೋರ್ಟ್ ತೀರ್ಪು
ಸಂಚಾರಕ್ಕೆ ಅಡ್ಡಿ ಪ್ರಕರಣ: ನಾಲ್ಕು ದಿನ ಪೊಲೀಸ್ ಠಾಣೆಯಲ್ಲಿ ಕಸ ಗುಡಿಸುವ ಶಿಕ್ಷೆ- ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ಕೋರ್ಟ್ ತೀರ್ಪು
ಸಾರ್ವಜನಿಕ ಸಂಚಾರಕ್ಕೆ ಅಡ್ಡಿ ಉಂಟು ಮಾಡಿದ ಪ್ರಕರಣದಲ್ಲಿ ವ್ಯಾಪಾರಿಯೊಬ್ಬರಿಗೆ ನಾಲ್ಕು ದಿನ ಕಸ ಗುಡಿಸುವ ಶಿಕ್ಷೆಯನ್ನು ವಿಧಿಸಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ತೀರ್ಪು ನೀಡಿದೆ.
ಸಕಲೇಶಪುರದ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಈ ತೀರ್ಪು ನೀಡಿದ್ದು, ತೀರ್ಪಿನ ಪ್ರಕಾರ, ಆರೋಪಿ ನಾಲ್ಕು ದಿನ ಪೊಲೀಸ್ ಠಾಣೆ ಕಸ ಗುಡಿಸುವ ಶಿಕ್ಷೆ ವಿಧಿಸಲಾಗಿದೆ.
ಸಕಲೇಶಪುರದ ಬಾಳೆಗದ್ದೆಯ ನಿವಾಸಿಯಾದ ಹಯಾತ್ ಖಾನ್ ಶಿಕ್ಷೆಗೆ ಒಳಗಾದ ವ್ಯಕ್ತಿ. ಈತ ಪಟ್ಟಣದ ಹಳೇಬಸ್ ನಿಲ್ದಾಣ ಸಮೀಪ ಸಾರ್ವಜನಿಕರು ಓಡಾಡುವ ರಸ್ತೆಯಲ್ಲಿ ಅಂಗಡಿ ಹಾಕಿಕೊಂಡು ತರಕಾರಿ, ಸೊಪ್ಪು ಮಾರಾಟ ಮಾಡುತ್ತಿದ್ದ.
ರಸ್ತೆಗೆ ಅಡ್ಡಲಾಗಿ ಪೆಟ್ಟಿಗೆ ಅಂಗಡಿ ಇಟ್ಟುಕೊಂಡಿದ್ದ ಈತ ಸಾರ್ವಜನಿಕರ ಸಂಚಾರಕ್ಕೆ ಅಡ್ಡಿಯುಂಟು ಮಾಡಿದ್ದ. ಅಂಗಡಿಯನ್ನು ತೆರವುಗೊಳಿಸಬೇಕು ಎಂದು ಅಧಿಕಾರಿಗಳು ವ್ಯಾಪಾರಿಗೆ ನೀಡಿದ್ದ ಆದೇಶವನ್ನು ಈತ ಧಿಕ್ಕರಿಸಿದ್ದ.
ಈ ಹಿನ್ನೆಲೆಯಲ್ಲಿ ವ್ಯಾಪಾರಿ ಹಯಾತ್ ವಿರುದ್ಧ ಪೊಲೀಸ್ ಅಧಿಕಾರಿಗಳು ಪ್ರಕರಣ ದಾಖಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಸಕಲೇಶಪುರದ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಆರೋಪಿಗೆ ನಾಲ್ಕು ದಿನ ಪೊಲೀಸ್ ಠಾಣೆ ಕಸ ಗುಡಿಸುವ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.