
ಪೋಕ್ಸೊ ಪ್ರಕರಣ: ಆರೋಪ ಸಾಬೀತುಪಡಿಸಲು ಅಭಿಯೋಜನೆ ವಿಫಲ- ವಿಚಾರಣಾ ನ್ಯಾಯಾಲಯದ ತೀರ್ಪು ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್
ಪೋಕ್ಸೊ ಪ್ರಕರಣ: ಆರೋಪ ಸಾಬೀತುಪಡಿಸಲು ಅಭಿಯೋಜನೆ ವಿಫಲ- ವಿಚಾರಣಾ ನ್ಯಾಯಾಲಯದ ತೀರ್ಪು ಎತ್ತಿ ಹಿಡಿದ ಕರ್ನಾಟಕ ಹೈಕೋರ್ಟ್
ಅಭಿಯೋಜನೆಯು ಆರೋಪಿ ವಿರುದ್ಧ ಮಾಡಲಾದ ಆರೋಪಗಳನ್ನು ಅನುಮಾನಕ್ಕೆ ಎಡೆ ಇಲ್ಲದಂತೆ ಸಾಬೀತು ಪಡಿಸುವ ಹೊಣೆಗಾರಿಕೆ ಹೊಂದಿದೆ. ಆರೋಪಿಯ ವಿರುದ್ಧ ಮಾಡಲಾದ ಆರೋಪಗಳನ್ನು ಸಾಬೀತುಪಡಿಸಲು ವಿಫಲವಾದರೆ, ಆಪಾದಿತರಿಗೆ ಅನುಮಾನದ ಲಾಭ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್ ಹೇಳಿದೆ.
ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ನೀಡಿದೆ.
ಪ್ರಾಸಿಕ್ಯೂಷನ್ ಸಮಂಜಸವಾದ ಅನುಮಾನಕ್ಕೆ ಮೀರಿದ ಆರೋಪಗಳನ್ನು ಸಾಬೀತುಪಡಿಸಲು ವಿಫಲವಾದಾಗ ಮತ್ತು ಸಾಕ್ಷ್ಯವು ವಿರೋಧಾಭಾಸಗಳನ್ನು ಬಹಿರಂಗಪಡಿಸಿದಾಗ, ಅಂತಹ ಸಂದರ್ಭದಲ್ಲಿ ಆಪಾದಿತರಿಗೆ ಅನುಮಾನದ ಲಾಭವನ್ನು ನೀಡಬೇಕು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
when prosecution fails to establish charges beyond reasonable doubt and evidence reveals contradictions, benefit of doubt must be given to the accused.
ಪ್ರಕರಣ: ಕರ್ನಾಟಕ ರಾಜ್ಯ ವಿರುದ್ಧ ಗೋವರ್ಧನ್ ಮತ್ತೊಬ್ಬರು
ಕರ್ನಾಟಕ ಹೈಕೋರ್ಟ್ Criminal Appeal 556/2024 Dated 03-03-2025
2025:KHC:9054