-->
ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರ: ವಕೀಲರಿಗೆ ಬಾರ್ ಕೌನ್ಸಿಲ್ ಶೋಕಾಸ್ ನೋಟೀಸ್‌

ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರ: ವಕೀಲರಿಗೆ ಬಾರ್ ಕೌನ್ಸಿಲ್ ಶೋಕಾಸ್ ನೋಟೀಸ್‌

ಸೋಶಿಯಲ್ ಮೀಡಿಯಾದಲ್ಲಿ ಪ್ರಚಾರ: ವಕೀಲರಿಗೆ ಬಾರ್ ಕೌನ್ಸಿಲ್ ಶೋಕಾಸ್ ನೋಟೀಸ್‌





ಸಾಮಾಜಿಕ ಜಾಲತಾಣದಲ್ಲಿ ವಕೀಲರ ವೃತ್ತಿಯ ಬಗ್ಗೆ ಪ್ರಚಾರ ನಡೆಸಿದ ವಕೀಲರೊಬ್ಬರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ವಿವಾದಾತ್ಮಕ ವೀಡಿಯೋ ವೈರಲ್ ಆಗಿದ್ದು, ರಾಜ್ಯ ವಕೀಲರ ಸಂಘ ಆರೋಪಿ ವಕೀಲರಿಗೆ ನೋಟೀಸ್ ಜಾರಿಗೊಳಿಸಿದೆ.


ಆದರೆ, ಈ ಆರೋಪವನ್ನು ನಿರಾಕರಿಸಿರುವ ವಕೀಲ ಹ್ಯಾಪಿಮೊನ್ ಬಾಬು, ಕೃತಕ ಬುದ್ದಿಮತ್ತೆ ಹಾಗೂ ಆಡ್ ಏಜೆನ್ಸಿ ಮೇಲೆ ಆರೋಪ ಹೊರಿಸಿ, ತಾನು ಯಾವುದೇ ಇಂತಹ ಕೃತ್ಯ ಎಸಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.


ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಜೊತೆಗೆ ಸಹಕರಿಸಲು ಬಯಸಿದ ಪಬ್ಲಿಕ್ ರಿಲೇಷನ್ ಸಂಸ್ಥೆಯೊಂದು ಕೃತಕ ಬುದ್ಧಿಮತ್ತೆ ಬಳಸಿಕೊಂಡು ಈ ಕೃತ್ಯ ಎಸಗಿದೆ ಎಂದು ವಕೀಲರು ಸ್ಪಷ್ಟನೆ ನೀಡಿದ್ದಾರೆ.

ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ) ನಿಯಮಗಳು ಮತ್ತು ವಕೀಲರ ಕಾಯಿದೆ ಸೆಕ್ಷನ್ 196ರ ಉಲ್ಲಂಘನೆಯ ಆರೋಪ ಹೊತ್ತಿರುವ ವಕೀಲ ಬಾಬು ಯಾವುದೇ ರೀತಿಯ ಆನ್‌ಲೈನ್ ಪ್ರಚಾರ ಮಾಡಿದ್ದರೆ ಅದು ವೃತ್ತಿಪರ ನೀತಿ ಮತ್ತು ಸಭ್ಯತೆಯ ಉಲ್ಲಂಘನೆಯಾಗುತ್ತದೆ. ಅಲ್ಲದೆ, ಬಿಸಿಐ ಇತ್ತೀಚೆಗೆ ಹೊರಡಿಸಿದ ನಿರ್ದೇಶನಗಳನ್ನೂ ಅವರು ಉಲ್ಲಂಘಿಸಿದ್ದಾರೆ ಎಂದು ನೋಟಿಸ್‌ನಲ್ಲಿ ಆರೊಪಿಸಲಾಗಿದೆ.


ಕೇರಳ ವಕೀಲರ ಪರಿಷತ್ (ಬಿಸಿಕೆ) ಈ ಶೋಕಾಸ್ ನೋಟಿಸ್ ಜಾರಿ ಮಾಡಿದ್ದು, ಆರೋಪಗಳಿಗೆ ಪ್ರತಿಕ್ರಿಯಿಸಬೇಕು ಮತ್ತು ತಮ್ಮ ವಿರುದ್ಧ ಶಿಸ್ತು ಕ್ರಮ ಏಕೆ ತೆಗೆದುಕೊಳ್ಳಬಾರದು ಎಂಬುದಕ್ಕೆ ಕಾರಣ ನೀಡಬೇಕು. ಈ ಸಂಬಂಧ, 15 ದಿನಗಳಲ್ಲಿ ಲಿಖಿತ ವಿವರಣೆ ಸಲ್ಲಿಸಬೇಕು ಎಂದು ಆರೋಪಿ ವಕೀಲರಾದ ಬಾಬು ಅವರಿಗೆ ಸೂಚಿಸಲಾಗಿದೆ.


ವೈವಾಹಿಕ ಪ್ರಕರಣ, ಆಸ್ತಿ ವಿವಾದ, ಕ್ರಿಮಿನಲ್ ಪ್ರಕರಣ ಇತ್ಯಾದಿಗಳ ಬಗ್ಗೆ ವಕೀಲ ಹ್ಯಾಪಿಮೊನ್ ಬಾಬು ಅವರಿಂದ ಕಾನೂನು ಸಲಹೆ ಪಡೆಯಬಹುದು ಎಂದು ಮಹಿಳೆಯೊಬ್ಬರು ಸಲಹೆ ನೀಡುತ್ತಿರುವ ವೀಡಿಯೋ ವೈರಲ್ ಆಗಿತ್ತು.


ಆದರೆ, ಈ ಆರೋಪಗಳನ್ನು ತಳ್ಳಿಹಾಕಿರುವ ವಕೀಲ ಹ್ಯಾಪಿಮೊನ್ ಬಾಬು, ತಕ್ಷಣವೇ ವಿಡಿಯೋ ಡಿಲಿಟ್ ಮಾಡಲು ಸಾರ್ವಜನಿಕ ಸಂಪರ್ಕ ಸಂಸ್ಥೆಗೆ ಹೇಳಿದ್ದೆ. ಆದರೆ, ಅಷ್ಟರಲ್ಲಾಗಲೇ ಆ ವೀಡಿಯೋ ಡೌನ್‌ಲೋಡ್ ಆಗಿ ಪ್ರಕೇಳಿಕೊಂಡೆ. ಆದರೆ ಆ ಹೊತ್ತಿಗೆ ಅದನ್ನು ಡೌನ್ಲೋಡ್ ಮಾಡಿ ವಾಟ್ಸಾಪ್‌ನ ವಕೀಲರ ಗುಂಪುಗಳಲ್ಲಿ ಹಂಚಿಕೊಳ್ಳಲಾಗಿತ್ತು ಎಂದು ಅವರು ಅಳಲು ತೋಡಿಕೊಂಡಿದ್ದಾರೆ.


ಈ ವರ್ಷ ಎರ್ನಾಕುಲಂ ವಕೀಲರ ಸಂಘದ ಚುನಾವಣೆಯಲ್ಲಿ ತಾನು ಸ್ಪರ್ಧಿಸಿದ್ದು, ವಿಡಿಯೋ ಹರಡಲು ಕಾರಣವಾಗಿರಬಹುದು ಎಂದು ಬಾಬು ಹೇಳಿದರು. ಈ ವಿಡಿಯೋವನ್ನು ಯಾರೋ ದುರುದೇಶಪೂರ್ವಕವಾಗಿ ಹರಿಬಿಟ್ಟಿರಬಹುದು ಎಂಬುದನ್ನು ಬಾಬು ತಳ್ಳಿಹಾಕಿಲ್ಲ.


Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu