-->
 ಕಟ್ಟಡ ನಕ್ಷೆದಲ್ಲಿ ಶೇಕಡಾ 15ರಷ್ಟು ಉಲ್ಲಂಘನೆ ಸಕ್ರಮಕ್ಕೆ ಅವಕಾಶ- ರಾಜ್ಯ ಸರ್ಕಾರ ಆದೇಶ

ಕಟ್ಟಡ ನಕ್ಷೆದಲ್ಲಿ ಶೇಕಡಾ 15ರಷ್ಟು ಉಲ್ಲಂಘನೆ ಸಕ್ರಮಕ್ಕೆ ಅವಕಾಶ- ರಾಜ್ಯ ಸರ್ಕಾರ ಆದೇಶ

 ಕಟ್ಟಡ ನಕ್ಷೆದಲ್ಲಿ ಶೇಕಡಾ 15ರಷ್ಟು ಉಲ್ಲಂಘನೆ ಸಕ್ರಮಕ್ಕೆ ಅವಕಾಶ- ರಾಜ್ಯ ಸರ್ಕಾರ ಆದೇಶ




ಕರ್ನಾಟಕದ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಟ್ಟಡ ನಿರ್ಮಾಣ ಪರವಾನಗಿಯ ಅಪ್ರೂವ್ ಆದ ನಕ್ಷೆಯ ಶೇ 15ರವರೆಗಿನ ಉಲ್ಲಂಘನೆಯನ್ನು ಸಕ್ರಮಗೊಳಿಸಲು ನಾಗರಿಕರಿಗೆ ರಾಜ್ಯ ಸರ್ಕಾರ ಅವಕಾಶ ನೀಡಿದೆ.


ರಾಜ್ಯದ ರಾಜಧಾನಿ ಬೆಂಗಳೂರು ಹೊರತು ಪಡಿಸಿ ಕರ್ನಾಟಕದ ಎಲ್ಲ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಈ ಅಕ್ರಮ ಸಕ್ರಮದ ಅವಕಾಶವನ್ನು ಬಳಸಬಹುದಾಗಿದೆ.


ಈ ಬಗ್ಗೆ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. ಕರ್ನಾಟಕ ಮಹಾನಗರ ಪಾಲಿಕೆ (ತಿದ್ದುಪಡಿ) ಕಾಯ್ದೆ 2025ರ ಕಲಂ 299-ಎಬಿ (2) (ಐ) ಹಾಗೂ ಕರ್ನಾಟಕ ಪೌರ ನಿಗಮಗಳ (ತಿದ್ದುಪಡಿ) ಕಾಯ್ದೆ 2025ರ ಕಲಂ 187 (1-ಎ) ಯಂತೆ ಕಟ್ಟಡ ನಕ್ಷೆ ಉಲ್ಲಂಘನೆಗೆ ದಂಡ ವಿಧಿಸಿ, ಪರಿಷ್ಕೃತ ನಕ್ಷೆ ನೀಡಲಾಗುತ್ತದೆ.


ಮಂಜೂರಾದ ಕಟ್ಟಡ ನಕ್ಷೆಯಲ್ಲಿ ಸೆಟ್‌ಬ್ಯಾಕ್/ಕವರೇಜ್‌ನಲ್ಲಿ ಶೇ 15 ರಷ್ಟು ಉಲ್ಲಂಘಿಸಿದವರಿಗೆ ಪ್ರತಿ ಚ.ಮೀಗೆ ದಂಡ ಶುಲ್ಕ ನಿಗದಿ ಮಾಡಲಾಗಿದೆ. ಕಟ್ಟಡಗಳ ಉಲ್ಲಂಘನೆ ಪರಿಗಣಿಸಿ, ದಂಡ ಪಡೆದು ಪರಿಷ್ಕೃತ ನಕ್ಷೆ ನೀಡಬಹುದು.


ಕಟ್ಟಡ ನಕ್ಷೆ ಪಡೆದು ಎಫ್‌ಎಆರ್ ಮತ್ತು ಕಾರ್ ಪಾರ್ಕಿಂಗ್ ಪ್ರದೇಶ ಉಲ್ಲಂಘನೆ ಶೇ 5ರ ಮಿತಿಯಲ್ಲಿದ್ದರೆ ಅದಕ್ಕೂ ದಂಡ ವಿಧಿಸಿ, ಪರಿಷ್ಕೃತ ನಕ್ಷೆ ನೀಡಬಹುದು ಎಂದು ಆದೇಶದಲ್ಲಿ ಸೂಚಿಸಲಾಗಿದೆ.


ಕಟ್ಟಡ ನಕ್ಷೆ: ಶೇ 15ರಷ್ಟು ಉಲ್ಲಂಘನೆ ಸಕ್ರಮ


 

 ಉಲ್ಲಂಘನೆ ಪ್ರತಿ ಚ.ಮೀ.

ಎಫ್‌ಎಆರ್ ಉಲ್ಲಂಘನೆ ಪ್ರತಿ ಚ.ಮೀ.

ಎಫ್‌ಎಆರ್ ಉಲ್ಲಂಘನೆ ಪ್ರತಿ ಚ.ಮೀ.

ಸ್ಥಳೀಯ ಸಂಸ್ಥೆ

ಕಾರು ಪಾರ್ಕಿಂಗ್ ಒಂದಕ್ಕೆ ದಂಡ

ವಸತಿ/ಕೈಗಾರಿಕೆ/ಇತರೆ

ವಾಣಿಜ್ಯ ಕಟ್ಟಡ

ಪಟ್ಟಣ ಪಂಚಾಯಿತಿ

₹5,000

₹1,000

₹1,500

ಪುರಸಭೆ

₹5,000

₹1,200

₹1,800

ನಗರಸಭೆ

₹5,000

₹1,500

₹2,250

ಮಹಾನಗರ ಪಾಲಿಕೆ

₹5,000

₹2,000

₹3,000

 

ಸೆಟ್‌ಬ್ಯಾಕ್/ ಕವರೇಜ್ ಉಲ್ಲಂಘನೆ


 

ಸೆಟ್‌ಬ್ಯಾಕ್/ ಕವರೇಜ್ ಉಲ್ಲಂಘನೆ ಪ್ರತಿ ಚ.ಮೀ.

ಸ್ಥಳೀಯ ಸಂಸ್ಥೆ

ವಸತಿ/ಕೈಗಾರಿಕೆ/ಇತರೆ

ವಾಣಿಜ್ಯ ಕಟ್ಟಡ

ಪಟ್ಟಣ ಪಂಚಾಯಿತಿ

₹1,000

₹1,500

ಪುರಸಭೆ

₹1,200

₹1,800

ನಗರಸಭೆ

₹1,500

₹2,250

ಮಹಾನಗರ ಪಾಲಿಕೆ

₹2,000

₹3,000


Ads on article

Advertise in articles 1

advertising articles 2

Advertise under the article