ಬಹುಪತ್ನಿತ್ವ ನಿಷೇಧ: ಏಳು ವರ್ಷಗಳ ಕಠಿಣ ಶಿಕ್ಷೆ ಶಿಫಾರಸ್ಸು- ಸಚಿವ ಸಂಪುಟ ಅಸ್ತು
ಬಹುಪತ್ನಿತ್ವ ನಿಷೇಧ: ಏಳು ವರ್ಷಗಳ ಕಠಿಣ ಶಿಕ್ಷೆ ಶಿಫಾರಸ್ಸು- ಸಚಿವ ಸಂಪುಟ ಅಸ್ತು
ಅಸ್ಸಾಂ ರಾಜ್ಯದಲ್ಲಿ ಬಹುಪತ್ನಿತ್ವ ನಿಷೇಧ ಮಾಡಿ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದ ಸರ್ಕಾರ ಮಸೂದೆ ಅಂಗೀಕರಿಸಿದೆ.
ಕಾಯ್ದೆಯಲ್ಲಿ ಅಪರಾಧ ಸಾಬೀತಾದರೆ ಏಳು ವರ್ಷಗಳ ಕಠಿಣ ಶಿಕ್ಷೆ ಶಿಫಾರಸ್ಸು ಮಾಡಿದ್ದು, ಕರಡು ಮಸೂದೆಗೆ ಸಚಿವ ಸಂಪುಟ ಅಂಗೀಕಾರ ನೀಡಿದೆ.
ಮುಂದಿನ ವಿಧಾನ ಮಂಡಲದ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲಾಗುವುದು ಎಂದು ಸರ್ಕಾರ ಹೇಳಿಕೊಂಡಿದೆ. ಬಹುಪತ್ನಿತ್ವ ನಿಷೇಧದ ಕಾರಣಕ್ಕೆ ಸಂತ್ರಸ್ತರಾಗುವವರಿಗೆ ನೆರವು ಕಲ್ಪಿಸಲು ಪ್ರತ್ಯೇಕ ಹಣಕಾಸು ನಿಧಿ ಸ್ಥಾಪಿಸಲಾಗುವುದು ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಬಹುಪತ್ನಿತ್ತ ನಿಷೇಧಕ್ಕೆ ಸಂಬಂಧಿಸಿದ ಮಸೂದೆಯನ್ನು ಅಸ್ಸಾಂ ಸಚಿವ ಸಂಪುಟ ಸಭೆ ಅನುಮೋದಿ ಸಿದೆ. ಮಸೂದೆಯು ಕಾಯ್ದೆಯಾಗಿ ಜಾರಿಗೆ ಬಂದ ನಂತರ ನಿಯಮ ಉಲ್ಲಂಘಿಸಿ, ಬಹುಪತ್ನಿತ್ವ ಅನುಸರಿಸುವವರಿಗೆ ಏಳು ವರ್ಷಗಳವರೆಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ತಿಳಿಸಿದ್ದಾರೆ.