-->
ಆರೋಪಿಯನ್ನು ವಿನಾ ಕಾರಣ ಬಂಧನದಲ್ಲಿ ಇಡುವುದು ಅರ್ಥಹೀನ: ನ್ಯಾಯಾಂಗ ಬಂಧನದ ಬಗ್ಗೆ ಕರ್ನಾಟಕ ಹೈಕೋರ್ಟ್ ತೀರ್ಪು

ಆರೋಪಿಯನ್ನು ವಿನಾ ಕಾರಣ ಬಂಧನದಲ್ಲಿ ಇಡುವುದು ಅರ್ಥಹೀನ: ನ್ಯಾಯಾಂಗ ಬಂಧನದ ಬಗ್ಗೆ ಕರ್ನಾಟಕ ಹೈಕೋರ್ಟ್ ತೀರ್ಪು

ಆರೋಪಿಯನ್ನು ವಿನಾ ಕಾರಣ ಬಂಧನದಲ್ಲಿ ಇಡುವುದು ಅರ್ಥಹೀನ: ನ್ಯಾಯಾಂಗ ಬಂಧನದ ಬಗ್ಗೆ ಕರ್ನಾಟಕ ಹೈಕೋರ್ಟ್ ತೀರ್ಪು

ಆರೋಪಿಯನ್ನು ವೈಯಕ್ತಿಕವಾಗಿ ಅಥವಾ ವೀಡಿಯೋ ಕಾನ್ಫರೆನ್ಸ್ ಮೂಲಕ ತನ್ನ ಮುಂದೆ ಹಾಜರುಪಡಿಸದ ಹೊರತು ಮತ್ತು ತನಿಖಾಧಿಕಾರಿ ನ್ಯಾಯಾಂಗ ಬಂಧನದ ವಿಸ್ತರಣೆ ಕೋರಿ ರಿಮಾಂಡ್ ಅರ್ಜಿಯನ್ನು ಸಲ್ಲಿಸದ ಹೊರತು ಯಾವುದೇ ಮ್ಯಾಜಿಸ್ಟ್ರೇಟ್ ಆರೋಪಿಯನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲು ಆದೇಶ ನೀಡಲಾಗದು ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

"ಚರಣ್ ಎಚ್.ವಿ. ವಿರುದ್ದ ಕರ್ನಾಟಕ ರಾಜ್ಯ ಮತ್ತಿತರರು" ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಜಿ. ಬಸವರಾಜ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ತೀರ್ಪು ಪ್ರಕಟಿಸಿದೆ.

"ಜಿಗರ್ ಆಲಿಯಾಸ್ ಜಿಮ್ಮಿ ಪ್ರವೀಣ್ ಚಂದ್ರ ಆದಿತ್ಯ ವಿರುದ್ಧ ಗುಜರಾತ್ ರಾಜ್ಯ" ಪ್ರಕರಣ ಹಾಗೂ "ಸುಭಾಷ್ ವಿರುದ್ಧ ಮಧ್ಯಪ್ರದೇಶ ಸರ್ಕಾರ" ಪ್ರಕರಣದಲ್ಲಿ ಮಾನ್ಯ ಸುಪ್ರೀಂ ಕೋರ್ಟ್ ನೀಡಿದ ತೀರ್ಪನ್ನು ಉಲ್ಲೇಖಿಸಿದ ನ್ಯಾಯಪೀಠ, ಆರೋಪಿಯನ್ನು ಯಾವುದೇ ಕಾರಣವಿಲ್ಲದೆ ಬಂಧನದಲ್ಲಿ ಇಡುವುದು ಅರ್ಥಹೀನ ಎಂದು ಹೇಳಿದೆ.

ಪ್ರಕರಣದ ಶೀರ್ಷಿಕೆ: ಚರಣ್ ಎಚ್.ವಿ. ವಿರುದ್ದ ಕರ್ನಾಟಕ ರಾಜ್ಯ ಮತ್ತಿತರರು

ಕರ್ನಾಟಕ ಹೈಕೋರ್ಟ್‌, Crl.A. 2056/2025 Dated 20-10-2025

Ads on article

Advertise in articles 1

advertising articles 2

Advertise under the article