-->
ಜೀವಿತಾವಧಿವರೆಗೆ ಶಿಕ್ಷೆ ವಿಧಿಸುವ ಅಧಿಕಾರ ಸಂವಿಧಾನಿಕ ಪೀಠಗಳಿಗೆ ಮಾತ್ರ: ಟ್ರಯಲ್ ಕೋರ್ಟ್‌ಗೆ ಇಂತಹ ಅಧಿಕಾರವಿಲ್ಲ - ಸುಪ್ರೀಂ ಕೋರ್ಟ್‌

ಜೀವಿತಾವಧಿವರೆಗೆ ಶಿಕ್ಷೆ ವಿಧಿಸುವ ಅಧಿಕಾರ ಸಂವಿಧಾನಿಕ ಪೀಠಗಳಿಗೆ ಮಾತ್ರ: ಟ್ರಯಲ್ ಕೋರ್ಟ್‌ಗೆ ಇಂತಹ ಅಧಿಕಾರವಿಲ್ಲ - ಸುಪ್ರೀಂ ಕೋರ್ಟ್‌

ಜೀವಿತಾವಧಿವರೆಗೆ ಶಿಕ್ಷೆ ವಿಧಿಸುವ ಅಧಿಕಾರ ಸಂವಿಧಾನಿಕ ಪೀಠಗಳಿಗೆ ಮಾತ್ರ: ವಿಚಾರಣಾ ನ್ಯಾಯಾಲಯ ಇಂತಹ ಅಧಿಕಾರವಿಲ್ಲ - ಸುಪ್ರೀಂ ಕೋರ್ಟ್‌





ಅಪರಾಧಿಗೆ ತನ್ನ ಸ್ವಾಭಾವಿಕ ಜೀವಿತಾವಧಿವರೆಗೆ ಶಿಕ್ಷೆ ವಿಧಿಸುವ ಅಧಿಕಾರ ಸಂವಿಧಾನಿಕ ಪೀಠಗಳಿಗೆ ಮಾತ್ರ ಇದೆ. ಇಂತಹ ಶಿಕ್ಷೆಯನ್ನು ಬೇರೆ ಯಾವುದೇ ವಿಚಾರಣಾ ನ್ಯಾಯಾಲಯಗಳು ವಿಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ.


ವಿಧವೆಯೊಬ್ಬರಿಗೆ ಬೆಂಕಿ ಇಟ್ಟ ಪ್ರಕರಣವೊಂದರಲ್ಲಿ ಸುಪ್ರೀಂ ಕೋರ್ಟ್‌ನ ನ್ಯಾಯ ಮೂರ್ತಿಗಳಾದ ಅಹಸಾನುದ್ದೀನ್ ಅಮಾನುಲ್ಲಾಹ್ ಮತ್ತು ಕೆ.ವಿನೋದ್ ಚಂದ್ರನ್ ನೇತೃತ್ವದ ನ್ಯಾಯಪೀಠ ಈ ತೀರ್ಪು ನೀಡಿದೆ.


ಜೀವಿತಾವಧಿಯವರೆಗೆ ಜೀವಾವಧಿ ಶಿಕ್ಷೆ ವಿಧಿಸುವ ಅಧಿಕಾರ ಕೇವಲ ಸಾಂವಿಧಾನಿಕ ನ್ಯಾಯಾಲಯಗಳಿಗೆ ಮಾತ್ರ ಇರುತ್ತದೆ. ಸೆಷನ್ಸ್ ಕೋರ್ಟ್‌ಗಳಿಗೆ ಅಂಥ ಅಧಿಕಾರ ಇರುವುದಿಲ್ಲ ಎಂದು ನ್ಯಾಯಪೀಠ ಸ್ಪಷ್ಟಪಡಿಸಿತು.


ಲೈಂಗಿಕವಾಗಿ ಸಹಕರಿಸದ ವಿಧವೆಯೊಬ್ಬರಿಗೆ ಬೆಂಕಿ ಇಟ್ಟ ಪ್ರಕರಣದ ಅಪರಾಧಿ ಕಿರಣ್ ಮನವಿಯನ್ನು ನ್ಯಾಯಾಲಯವು ಭಾಗಶಃ ಪರಿಗಣಿಸಿತು. ಘಟನೆ ನಡೆದ 10 ದಿನಗಳ ನಂತರ ಸಂತ್ರಸ್ತೆಯು ಮೃತಪಟ್ಟಿದ್ದರು.


ತಪ್ಪಿತಸ್ಥನಿಗೆ ವಿಚಾರಣಾ ನ್ಯಾಯಾಲಯವು ಜೀವಿತಾವಧಿಯವರೆಗೆ ಜೀವಾವಧಿ ಶಿಕ್ಷೆಯನ್ನು ವಿಧಿಸಿತ್ತು ಮತ್ತು ಸೆಕ್ಷನ್‌ 428ರ ಅಡಿಯಲ್ಲಿ ಕ್ಷಮೆಯನ್ನೂ ಪಡೆಯುವಂತಿಲ್ಲ ಎಂದು ಸೂಚಿಸಿತ್ತು.


ಪ್ರಕರಣದ ವಿಚಾರಣೆ ನಡೆಸಿದ ಪೀಠವು, ತಪ್ಪಿತಸ್ಥ ಎಂಬ ತೀರ್ಪನ್ನು ಎತ್ತಿಹಿಡಿಯಿತು ಮತ್ತು 14 ವರ್ಷಗಳ ಜೀವಾವಧಿ ಶಿಕ್ಷೆಯಾಗಿ ಪರಿಷ್ಕರಿಸಿತು.


Ads on article

Advertise in articles 1

advertising articles 2

Advertise under the article