-->
ನೋಟು ಅಮಾನ್ಯೀಕರಣದ ಮೊದಲು ಪೊಲೀಸ್ ಕಸ್ಟಡಿಯಲ್ಲಿದ್ದ ಹಳೆ ನೋಟು: ಹೊಸ ಕರೆನ್ಸಿಗೆ ಬದಲಾಯಿಸಬಹುದೇ?- ಬಾಂಬೆ ಹೈಕೋರ್ಟ್‌ ತೀರ್ಪು

ನೋಟು ಅಮಾನ್ಯೀಕರಣದ ಮೊದಲು ಪೊಲೀಸ್ ಕಸ್ಟಡಿಯಲ್ಲಿದ್ದ ಹಳೆ ನೋಟು: ಹೊಸ ಕರೆನ್ಸಿಗೆ ಬದಲಾಯಿಸಬಹುದೇ?- ಬಾಂಬೆ ಹೈಕೋರ್ಟ್‌ ತೀರ್ಪು

ನೋಟು ಅಮಾನ್ಯೀಕರಣದ ಮೊದಲು ಪೊಲೀಸ್ ಕಸ್ಟಡಿಯಲ್ಲಿದ್ದ ಹಳೆ ನೋಟು: ಹೊಸ ಕರೆನ್ಸಿಗೆ ಬದಲಾಯಿಸಬಹುದೇ?- ಬಾಂಬೆ ಹೈಕೋರ್ಟ್‌ ತೀರ್ಪು





ನೋಟು ಅಮಾನ್ಯೀಕರಣ (ಡಿಮೊನೆಟೈಸೇಶನ್‌) ಗಿಂತ ಮೊದಲು ಪೊಲೀಸ್ ಕಸ್ಟಡಿಯಲ್ಲಿ ಇದ್ದ ಕರೆನ್ಸಿ ನೋಟುಗಳನ್ನು ಪ್ರಸ್ತುತ ಚಲಾವಣೆಯಲ್ಲಿರುವ ಮಾನ್ಯ ಕರೆನ್ಸಿಯಿಂದ ಬದಲಾಯಿಸಬಹುದೇ? ಎಂಬ ಬಗ್ಗೆ ಬಾಂಬೆ ಹೈಕೋರ್ಟ್ ತೀರ್ಪು ನೀಡಿದೆ.


ಬಾಂಬೆ ಹೈಕೋರ್ಟ್ ನ ನ್ಯಾಯಮೂರ್ತಿಗಳಾದ ಜಿ.ಎಸ್. ಪಟೇಲ್ ಹಾಗೂ ಮಧವ್ ಜೆ. ಜಮ್ದಾರ್ ಅವರ ವಿಭಾಗೀಯ ಪೀಠ ಈ ತೀರ್ಪು ನೀಡಿದೆ.


ನೋಟು ಅಮಾನ್ಯೀಕರಣ ಅಂದರೆ ಡಿಮೊನೆಟೈಸೇಶನ್‌ಗೆ ಮೊದಲು ಇದ್ದ ಕರೆನ್ಸಿ ನೋಟುಗಳು ಮತ್ತು ಅವುಗಳನ್ನು ಪ್ರಸ್ತುತ ಚಲಾವಣೆಯಲ್ಲಿರುವ ಮಾನ್ಯ ಕರೆನ್ಸಿಯಿಂದ ಬದಲಾಯಿಸುವ ಕುರಿತು ಕಿಶೋರ್ ರಮೇಶ್ ಸಹೋನಿ ವಿರುದ್ಧ ಭಾರತ ಸರಕಾರ ಈ ಪ್ರಕರಣದಲ್ಲಿ ವಿಚಾರಣೆ ನಡೆಸಿ ದಿನಾಂಕ 22.02.2022 ರಲ್ಲಿ ನೀಡಿದ ತೀರ್ಪಿನ ಮುಖ್ಯಾಂಶಗಳು ಈ ಕೆಳಗಿನಂತಿವೆ.


ಭಾರತೀಯ ದಂಡ ಸಂಹಿತೆ, 1860ರ ಸೆಕ್ಷನ್‌ಗಳು 420, 504 ಮತ್ತು 506 ಅಡಿಯಲ್ಲಿ ದಾಖಲಾದ ಪ್ರಕರಣದಲ್ಲಿ ನ್ಯಾಯಿಕ ಮ್ಯಾಜಿಸ್ಟ್ರೇಟ್ ಅವರು ಆರೋಪಿಗೆ ₹1,60,000ನ್ನು ಪೊಲೀಸ್ ಠಾಣೆಯಲ್ಲಿ ಠೇವಣಿ ಇಡಲು ನಿರ್ದೇಶಿಸಿದ್ದರು ಮತ್ತು ಆ ಮೊತ್ತವನ್ನು ನಗದಾಗಿ ಠೇವಣಿ ಮಾಡಲಾಗಿತ್ತು.


ಅರ್ಜಿದಾರರು ಹಾಗೂ ಒಬ್ಬ ಸಾಕ್ಷಿಗೆ ಮೇಲ್ಕಂಡ ಮೊತ್ತವನ್ನು ಪೊಲೀಸ್ ಠಾಣೆಯಿಂದ ಪಡೆದುಕೊಳ್ಳುವಂತೆ ಸೂಚಿಸಲಾಗಿದ್ದು, ಅರ್ಜಿದಾರರಿಗೆ ₹60,000 ಮತ್ತು ಸಾಕ್ಷಿಗೆ ₹1,00,000 ದೊರೆಯಬೇಕಾಗಿತ್ತು.


ಭಾರತ ಸರ್ಕಾರದ 8-1-2016ರ ಅಧಿಸೂಚನೆಯ ಮೂಲಕ ಕೆಲವು ಕರೆನ್ಸಿ ನೋಟುಗಳನ್ನು ಅಮಾನ್ಯಗೊಳಿಸಲಾಯಿತು.


ಅರ್ಜಿದಾರರು, ತಮ್ಮ ನಗದು ಅಧಿಕಾರಿಯ ವಶದಲ್ಲಿದ್ದ ಕಾರಣ ಅದು ಡಿಮೊನೆಟೈಸೇಶನ್‌ನಿಂದ ರಕ್ಷಿತವಾಗಿದೆ ಎಂದು ನಂಬಿದ್ದರು.


ಮುಂದುವರೆದು, ಅರ್ಜಿದಾರರು ತಮ್ಮ ಹಣವನ್ನು ಮರಳಿ ಪಡೆಯಲು ಕೊನೆಗೂ ಪೊಲೀಸ್ ಠಾಣೆಗೆ ಹೋದಾಗ, ಅವರಿಗೆ ಹಳೆಯ ಕರೆನ್ಸಿ ನೋಟುಗಳನ್ನು ನೀಡಲಾಯಿತು. ಆ ವೇಳೆಗೆ ಅವೆಲ್ಲವೂ ಅಮಾನ್ಯಗೊಂಡಿದ್ದು, ಅರ್ಜಿಯಲ್ಲಿ ಅವರು ಹೇಳಿರುವಂತೆ “ಮಹಾತ್ಮಾ ಗಾಂಧಿಯವರ ಚಿತ್ರವಿರುವ ಕೇವಲ ಕಾಗದದ ತುಂಡುಗಳಾಗಿತ್ತು.”


ಅರ್ಜಿದಾರರು ಬೇಡಿದ ಪರಿಹಾರವೆಂದರೆ, ಪೊಲೀಸ್ ಕಸ್ಟಡಿಯಲ್ಲಿದ್ದ ಹಳೆಯ ಕರೆನ್ಸಿ ನೋಟುಗಳನ್ನು ಪ್ರಸ್ತುತ ಚಲಾವಣೆಯಲ್ಲಿರುವ ಕರೆನ್ಸಿಯಿಂದ ಬದಲಾಯಿಸುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಗೆ ನಿರ್ದೇಶನ ನೀಡುವುದು.


ಭಾರತ ಸಂವಿಧಾನದ ಕಲಂ 226 ಅಡಿಯಲ್ಲಿ ಸಮನ್ವಯಾತ್ಮಕ ವಿವೇಚನಾ ಅಧಿಕಾರವನ್ನು ಬಳಸಿಕೊಂಡ ಹೈಕೋರ್ಟ್, ಅರ್ಜಿದಾರರು ಸರಣಿ ಸಂಖ್ಯೆಗಳ ಉಲ್ಲೇಖ ಸೇರಿದಂತೆ ಇತರ ಅವಶ್ಯಕತೆಗಳನ್ನು ಪೂರೈಸುವ ಷರತ್ತಿನ ಮೇಲೆ, ಅರ್ಜಿದಾರರು ಸಲ್ಲಿಸಿದ ಕರೆನ್ಸಿಯನ್ನು ಪ್ರಸ್ತುತ ಚಲಾವಣೆಯಲ್ಲಿರುವ ಕರೆನ್ಸಿಯಿಂದ ಬದಲಾಯಿಸುವಂತೆ ಆರ್‌ಬಿಐಗೆ ನಿರ್ದೇಶನ ನೀಡಿತು. ಸಂಬಂಧಿತ ವಿವರಗಳು 12-5-2017ರ ಅಧಿಸೂಚನೆ ಹಾಗೂ ಆರ್‌ಬಿಐ ಸಲ್ಲಿಸಿದ ಪ್ರಮಾಣಪತ್ರದ ಪ್ಯಾರಾಗ್ರಾಫ್‌ಗಳು 10 ಮತ್ತು 11ರಲ್ಲಿ ನೀಡಲಾಗಿದೆ.


ಪ್ರಕರಣದ ಶೀರ್ಷಿಕೆ- ಕಿಶೋರ್ ರಮೇಶ್ ಸೊಹೋನಿ ವಿರುದ್ಧ ಭಾರತ ಸರಕಾರ

ಬಾಂಬೆ ಹೈಕೋರ್ಟ್‌, ತೀರ್ಪು ದಿನಾಂಕ: 22-2-2022

Ads on article

Advertise in articles 1

advertising articles 2

Advertise under the article