ರಾಜ್ಯದ ನ್ಯಾಯಾಲಯಗಳಿಗೆ ಸತತ ನಾಲ್ಕು ದಿನ ರಜೆ: ನ್ಯಾಯಾಂಗ ಸಿಬ್ಬಂದಿ, ವಕೀಲರಿಗೆ ಭರ್ಜರಿ ವೀಕ್‌ಎಂಡ್ ಖುಷಿ
ರಾಜ್ಯದ ನ್ಯಾಯಾಲಯಗಳಿಗೆ ಸತತ ನಾಲ್ಕು ದಿನ ರಜೆ: ನ್ಯಾಯಾಂಗ ಸಿಬ್ಬಂದಿ, ವಕೀಲರಿಗೆ ಭರ್ಜರಿ ವೀಕ್‌ಎಂಡ್ ಖುಷಿ
ಮಾರ್ಚ್ 19ರಿಂದ 22ರ ವರೆಗೆ ರಾಜ್ಯದ ನ್ಯಾಯಾಲಯಗಳಿಗೆ ಸತತ ನಾಲ್ಕು ದಿನ ರಜೆ ಲಭ್ಯವಾಗಿದ್ದು, ಸತತ ನಾಲ್ಕು ದಿನಗಳ ರಜೆಯಿಂದ ನ್ಯಾಯಾಂಗ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ವಕೀಲರಿಗೆ ಭರ್ಜರಿ ವೀಕ್‌ಎಂಡ್ ಖುಷಿ ಲಭಿಸಿದೆ.
ಮಾರ್ಚ್ 19ರಂದು ರಾಜ್ಯದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಕೋರ್ಟ್‌ಗಳಿಗೆ ರಜೆ ಸಾರಲಾಗಿದೆ. ಮಾರ್ಚ್ 20ರಂದು ಲಿಂಕಿಂಗ್ ಹಾಲಿಡೇ ಆಗಿ ರಾಜ್ಯ ಹೈಕೋರ್ಟ್ ರಜೆ ಘೋಷಿಸಿದ್ದು, ರಾಜ್ಯದ ಎಲ್ಲ ಜಿಲ್ಲಾ ಮತ್ತು ವಿಚಾರಣಾ ನ್ಯಾಯಾಲಯಗಳಿಗೆ ರಜೆ ಸಿಗಲಿದೆ.
ಈ ದಿನದ ರಜೆಯನ್ನು ತಿಂಗಳ ನಾಲ್ಕನೇ ಶನಿವಾರ ಕರ್ತವ್ಯದ ದಿನವಾಗಿ ಪರಿಗಣಿಸಿದ್ದು, ಕಲಾಪ ನಡೆಸುವ ಮೂಲಕ ಈ ರಜೆಯನ್ನು ಸರಿದೂಗಿಸಲಾಗುವುದು.
ಮಾರ್ಚ್ 21ರಂದು ಮುಸಲ್ಮಾನ ಬಾಂಧವರ ಹಬ್ಬವಾದ ರಮಜಾನ್ ಪ್ರಯುಕ್ತ ರಜೆ ದೊರೆಯಲಿದ್ದು, ಮಾರ್ಚ್ 22ರಂದು ಭಾನುವಾರವಾದ ಕಾರಣ ರಜೆ ಸಿಗಲಿದೆ.
ಹೀಗೆ, ಸತತ ನಾಲ್ಕು ದಿನಗಳ ಕಾಲ ನ್ಯಾಯಾಂಗ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ, ವಕೀಲರಿಗೆ ಭರ್ಜರಿ ದೊರೆಯಲಿದೆ.
ಮಾರ್ಚ್ 19 : ಯುಗಾದಿ
ಮಾರ್ಚ್ 20 : ಲಿಂಕಿಂಗ್ ಹಾಲಿಡೇ
ಮಾರ್ಚ್ 21 : ರಮ್ಜಾನ್
ಮಾರ್ಚ್ 22 : ಭಾನುವಾರ
ಅದೇ ರೀತಿ, ಮಾರ್ಚ್ 29ರಿಂದ 31ರ ವರೆಗೆ ಸತತ ಮೂರು ದಿನಗಳ ವರೆಗೆ ರಜೆ ದೊರೆಯಲಿದೆ. ಮಾರ್ಚ್ 30ನ್ನು ಲಿಂಕಿಂಗ್ ಹಾಲಿಡೇ ಆಗಿ ಕರ್ನಾಟಕ ಹೈಕೋರ್ಟ್ ಘೋಷಣೆ ಮಾಡಿದ್ದು, ಆ ವಾರದಲ್ಲೂ ಸತತ ಮೂರು ದಿನಗಳ ರಜೆಯ ಖುಷಿ ವಕೀಲರು ಮತ್ತು ನ್ಯಾಯಾಂಗ ಸಿಬ್ಬಂದಿಗೆ ದೊರೆಯಲಿದೆ.