-->
ಇ-ಕೋರ್ಟ್ ಬಳಕೆದಾರರಿಗೆ ಮಹತ್ವದ ಸಂದೇಶ: ಹೈಕೋರ್ಟ್‌ ತುರ್ತು ಇಮೇಲ್ ಸೂಚನೆ

ಇ-ಕೋರ್ಟ್ ಬಳಕೆದಾರರಿಗೆ ಮಹತ್ವದ ಸಂದೇಶ: ಹೈಕೋರ್ಟ್‌ ತುರ್ತು ಇಮೇಲ್ ಸೂಚನೆ

ಇ-ಕೋರ್ಟ್ ಬಳಕೆದಾರರಿಗೆ ಮಹತ್ವದ ಸಂದೇಶ: ಹೈಕೋರ್ಟ್‌ ತುರ್ತು ಇಮೇಲ್ ಸೂಚನೆ


ಇ-ಕೋರ್ಟ್‌ಗಳ ಮೊಬೈಲ್ ಆಪ್ ನವೀಕರಣ ಕುರಿತು ಮಹತ್ವದ ಸೂಚನೆ





ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯವು ದಿನಾಂಕ 21.04.2026 ರಂದು ಇ-ಮೇಲ್ ಮೂಲಕ ನೀಡಿದ ನಿರ್ದೇಶನದನ್ವಯ, e-Courts Mobile App Version 4.0 ಅನ್ನು 05.05.2026 ರಂದು ಬಿಡುಗಡೆಗೊಳಿಸಲು ನಿಗದಿಪಡಿಸಲಾಗಿದೆ.


ಮಾನ್ಯ ಹೈಕೋರ್ಟ್ ನಿರ್ದೇಶನ ಪ್ರಕಾರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು, ದಕ್ಷಿಣ ಕನ್ನಡ, ಮಂಗಳೂರು ಇವರ ಕಚೇರಿಯಿಂದ ದಿನಾಂಕ: 22.04.2026 ರಂದು ಜ್ಞಾಪನಾ ಪತ್ರ ಸಂಖ್ಯೆ: 5107/2026 ಅನ್ನು ಹೊರಡಿಸಲಾಗಿದೆ.


ಇದಕ್ಕೆ ಸಂಬಂಧಿಸಿದಂತೆ, ಇ-ಕೋರ್ಟ್‌ಗಳ ಮೊಬೈಲ್ ಆಪ್ ಬಳಸುತ್ತಿರುವ ಎಲ್ಲಾ ವಕೀಲರು ಹಾಗೂ ಇತರೆ ಬಳಕೆದಾರರು, ಪ್ರಸ್ತುತ ಆಪ್‌ನಲ್ಲಿರುವ “Export” ಆಯ್ಕೆಯನ್ನು ಬಳಸಿ ತಮ್ಮಲ್ಲಿ ಉಳಿಸಿಕೊಂಡಿರುವ ಪ್ರಕರಣಗಳ ಮಾಹಿತಿಯ ಬ್ಯಾಕಪ್ ಪ್ರತಿಯನ್ನು ಕಡ್ಡಾಯವಾಗಿ ತೆಗೆದುಕೊಂಡಿರಬೇಕು.


ಇದರಿಂದ ಈಗಿರುವ ಮಾಹಿತಿಯ ನಷ್ಟವನ್ನು ತಪ್ಪಿಸಬಹುದು. ನಂತರ ನವೀಕರಿಸಿದ ಆಪ್ ಅನ್ನು ಸ್ಥಾಪಿಸಿದ ಬಳಿಕ “Import” ಆಯ್ಕೆಯನ್ನು ಬಳಸಿ ಆ ಮಾಹಿತಿಯನ್ನು ಮರು ಸ್ಥಾಪಿಸಬಹುದು.


ಆಪ್ ನವೀಕರಣದಿಂದ ಸಂಗ್ರಹಿತ ಮಾಹಿತಿಗೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಯಾವುದೇ ಅಸೌಕರ್ಯ ಅಥವಾ ಮಾಹಿತಿಯ ನಷ್ಟವನ್ನು ತಪ್ಪಿಸಲು ಎಲ್ಲಾ ಬಳಕೆದಾರರು 05.05.2026 ರೊಳಗಾಗಿ ಬ್ಯಾಕಪ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗಿದೆ.


ಮೇಲ್ಕಂಡ ವಿಷಯವನ್ನು ಪರಿಗಣಿಸಿ, ಈ ಮಾಹಿತಿಯನ್ನು ಎಲ್ಲಾ ವಕೀಲರಿಗೆ ತಲುಪುವಂತೆ ಪ್ರಸಾರ ಮಾಡುವುದರೊಂದಿಗೆ, ಹೆಚ್ಚಿನ ಜಾಗೃತಿಗಾಗಿ ಅದನ್ನು ಬಾರ್ ಅಸೋಸಿಯೇಷನ್‌ನ ಸೂಚನಾ ಫಲಕದಲ್ಲಿ ಪ್ರದರ್ಶಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ವಿನಂತಿಸಲಾಗಿದೆ.


ಇದನ್ನು ಅತ್ಯಂತ ತುರ್ತು ಮತ್ತು ಮಹತ್ವದ ವಿಷಯ ಎಂದು ಪರಿಗಣಿಸಬೇಕು ಎಂದು ಜ್ಞಾಪನಾ ಪತ್ರದಲ್ಲಿ ಸೂಚಿಸಲಾಗಿದೆ.


Ads on article

Advertise in articles 1

advertising articles 2

Advertise under the article

  

  

  

Join our WhatsApp Channel Powered By : Online Pudu