ನರ್ಸ್, ಅರಿವಳಿಕೆ ತಜ್ಞರ ಜೊತೆ ವೈದ್ಯರ ಲವ್ವಿ ಡವ್ವಿ: ಡಾಕ್ಟರ್ ವಿರುದ್ಧ ಕ್ರಿಮಿನಲ್ ಕೇಸ್ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ಗ್ರೀನ್ ಸಿಗ್ನಲ್
ನರ್ಸ್, ಅರಿವಳಿಕೆ ತಜ್ಞರ ಜೊತೆ ವೈದ್ಯರ ಲವ್ವಿ ಡವ್ವಿ: ಡಾಕ್ಟರ್ ವಿರುದ್ಧ ಕ್ರಿಮಿನಲ್ ಕೇಸ್ ವಿಚಾರಣೆಗೆ ಕರ್ನಾಟಕ ಹೈಕೋರ್ಟ್ ಗ್ರೀನ್ ಸಿಗ್ನಲ್
ನರ್ಸ್, ಅರಿವಳಿಕೆ ತಜ್ಞರ ಜೊತೆ ಪ್ರೇಮದಾಟ ನಡೆಸಿದ್ದ ವೈದ್ಯನ ವಿರುದ್ಧ ಕ್ರಿಮಿನಲ್ ಕೇಸ್‌ನ ವಿಚಾರಣೆಗೆ ಹಸಿರು ನಿಶಾನೆ ತೋರಿದ ಕರ್ನಾಟಕ ಹೈಕೋರ್ಟ್, ಅನಸ್ತೇಷಿಯಾ ಡಾಕ್ಟರ್ ವಿರುದ್ಧದ ವಿಚಾರಣೆಗೆ ತಡೆ ನೀಡಿದೆ.
ಪ್ರಕರಣದ ವಿವರ:
'ಆತ್ಮಹತ್ಯೆಗೆ ಶರಣಾದ ನರ್ಸ್ ಡೆತ್ ನೋಟ್ ಬರೆದಿದ್ದರು. ಈ ಡೆತ್‌ನೋಟ್‌ನ್ನು ಆಧರಿಸಿ ವೈದ್ಯರು ಮತ್ತು ಅರೆವಳಿಕೆ ತಜ್ಞೆ ವಿರುದ್ಧ ಜೆ.ಪಿ.ನಗರದ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿಸಲಾಘಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ 30ನೇ ಹೆಚ್ಚುವರಿ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ವಿಚಾರಣೆಗೆ ದಿನ ನಿಗದಿಪಡಿಸಲಾಗಿತ್ತು.
ಈ ವಿಚಾರಣೆಯನ್ನು ರದ್ದುಪಡಿಸಬೇಕು ಎಂದು ಕೋರಿ ಅಸ್ಸಾಂನ ಜೋರ್‌ಹಾಟ್ ಜಿಲ್ಲೆಯ 33 ವರ್ಷದ ಅರಿವಳಿಕೆ ತಜ್ಞೆ ಕರ್ನಾಟಕ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠ ಈ ತೀರ್ಪು ನೀಡಿದೆ.
ಆರೋಪಿ ವೈದ್ಯರು, ಅರಿವಳಿಕೆ ತಜ್ಞೆ ಜೊತೆಗೆ ಹೊಂದಿರುವ ಅನೈತಿಕ ಸಂಬಂಧದ ವಿಷಯ ತಿಳಿದು ನರ್ಸ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಘಟನೆಯಲ್ಲಿ ಅರಿವಳಿಕೆ ತಜ್ಞೆಯ ಪಾತ್ರ ಸೀಮಿತವಾಗಿ ಕಂಡು ಬರುತ್ತಿದೆ ಎಂಬುದನ್ನು ನ್ಯಾಯಪೀಠ ಗಮನಿಸಿತು.
ತಜ್ಞೆಯು ವೈದ್ಯರ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದಾರೆ ಎಂಬ ಏಕಮಾತ್ರ ಆರೋಪವನ್ನು ಹೊರತುಪಡಿಸಿದರೆ ಇವರದ್ದು ಬೇರಾವುದೇ ಪಾತ್ರ ಕಾಣುತ್ತಿಲ್ಲ. ಆದ್ದರಿಂದ, ಅರ್ಜಿದಾರರ ವಿರುದ್ಧದ ಅಧೀನ ನ್ಯಾಯಾಲಯದ ವಿಚಾರಣೆಗೆ ತಡೆ ನೀಡಲಾಗುತ್ತಿದೆ' ಎಂದು ನ್ಯಾಯಪೀಠ ಹೇಳಿದೆ.