ಜಡ್ಜ್ ಪರೀಕ್ಷೆ ಬರೆಯಲು ನ್ಯಾಯಾಂಗ ನೌಕರರಿಗೂ ಅವಕಾಶ: ಕರ್ನಾಟಕ ಹೈಕೋರ್ಟ್ ತೀರ್ಪು
ಜಡ್ಜ್ ಪರೀಕ್ಷೆ ಬರೆಯಲು ನ್ಯಾಯಾಂಗ ನೌಕರರಿಗೂ ಅವಕಾಶ: ಕರ್ನಾಟಕ ಹೈಕೋರ್ಟ್ ತೀರ್ಪು
ಕಾನೂನು ಪದವಿ ಪಡೆದು ನ್ಯಾಯಾಂಗ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ನ್ಯಾಯಾಂಗ ನೌಕರರಿಗೆ ಸಿವಿಲ್ ಜಡ್ಜ್ ಹುದ್ದೆಗೆ ಸ್ಪರ್ಧಿಸಲು ಅವಕಾಶ ನೀಡಲಾಗಿದೆ.
90 ಸಿವಿಲ್ ಜಡ್ಜ್ ಹುದ್ದೆಗಳ ಭರ್ತಿಗಾಗಿ ಹೊರಡಿಸಿದ್ದ ಅಧಿಸೂಚನೆಯಲ್ಲಿ ಕಾನೂನು ಪದವಿ ಪಡೆದ ನ್ಯಾಯಾಂಗ ಇಲಾಖೆ ನೌಕರರಿಗೆ (In-service Candidate)ಅವಕಾಶವನ್ನು ನಿರಾಕರಿಸಲಾಗಿತ್ತು.
ಆದ್ದರಿಂದ ಕಾನೂನು ಪದವಿಧರ ನ್ಯಾಯಾಂಗ ನೌಕರರಿಗೆ ಸಿವಿಲ್ ಜಡ್ಜ್ ಪರೀಕ್ಷೆಯಲ್ಲಿ ಅವಕಾಶ ಕೋರಿ ಕರ್ನಾಟಕ ಹೈಕೋರ್ಟನ ಮೊರೆ ಹೋಗಿದ್ದರು.
ನ್ಯಾಯಾಂಗ ಇಲಾಖೆಯ 15 ನೌಕರರು ಈ ಬಗ್ಗೆ ಹೈಕೋರ್ಟ್ ಮೆಟ್ಟಿಲೇರಿದ್ದರು. ಅವರೆಂದರೆ,
ಯೋಗೇಶ.ಬಿ,
ಮೋನಿತಾ. ಸ
ಮಹಾದೇವಿ ಬೊಮ್ಮನಗಿ
ಶ್ಯಾಮ್ ರಾವ್
ಗಂಗಾಧರ್
ಕಿರಣ್
ನಾಗಾರ್ಜುನ
ಶಂಕರಲಿಂಗಯ್ಯ
ಪರಪ್ಪ ಹೂಗಾರ್
ಸುದರ್ಶನ್
ಅವಿನಾಶ್
ಬಸವರಾಜು ಜೆಲ್ಲಿ
ಮಂಜುನಾಥ್. ಕೆ
ವಿಜಯಲಕ್ಷ್ಮಿ
ಪ್ರೀತಿ.
ಇ 15 ಮಂದಿ ನ್ಯಾಯಾಂಗ ಇಲಾಖೆ ನೌಕರರ ಪರವಾಗಿ ವಾದ ಮಂಡಿಸಿದ ವಕೀಲರಾದ ವೈಭವ್ ಮಳಿಮಠ್ ರವರು ವಾದ ಮಂಡಿಸಿದ್ದರು. ಅವರ ವಾದವನ್ನು ಪುರಸ್ಕರಿಸಿದ ಗೌರವಾನ್ವಿತ ನ್ಯಾಯಮೂರ್ತಿ ಕೃಷ್ಣ ಕುಮಾರ್ ರವರ ಏಕಸದಸ್ಯ ಪೀಠ IA 1/2026 ರಲ್ಲಿ ಅರ್ಜಿದಾರರಿಗೆ ಸಿವಿಲ್ ಜಡ್ಜ್ ಹುದ್ದೆಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಭಾಗವಹಿಸಲು ಅವಕಾಶ ನೀಡಿ ಆದೇಶ ಹೊರಡಿಸಿರುತ್ತದೆ.
ಪ್ರಕರಣ : ಶ್ರೀ ಯೋಗೇಶ ಭದ್ರಪ್ಪ ಮತ್ತಿತರರು ವಿರುದ್ದ ಕರ್ನಾಟಕ ರಾಜ್ಯ
ಕರ್ನಾಟಕ ಹೈಕೋರ್ಟ್, WP :14378/2026