ಜನನ-ಮರಣ ನೋಂದಣಿ: ವಿಳಂಬ ಮಾಡಿದರೆ ಸಂಕಷ್ಟ - ಕಠಿಣ ಕಾಯ್ದೆಗೆ ಕೇಂದ್ರ ಸರ್ಕಾರ ಸಿದ್ಧತೆ
Tuesday, July 28, 2026
ಜನನ-ಮರಣ ನೋಂದಣಿ: ವಿಳಂಬ ಮಾಡಿದರೆ ಸಂಕಷ್ಟ - ಕಠಿಣ ಕಾಯ್ದೆಗೆ ಕೇಂದ್ರ ಸರ್ಕಾರ ಸಿದ್ಧತೆ
ಜನನ ಮತ್ತು ಮರಣ ನೋಂದಣಿ ವಿಚಾರದಲ್ಲಿ ಕೇಂದ್ರ ಸರ್ಕಾರ ಕಠಿಣ ಕಾಯ್ದೆಯೊಂದನ್ನು ಸಿದ್ಧಪಡಿಸಿದೆ. ಇನ್ನು ಮುಂದೆ ಜನನ ಮತ್ತು ಮರಣ ನೋಂದಣಿ ವಿಳಂಬ ಮಾಡಿದರೆ ಅರ್ಜಿದಾರರು ಸಂಕಷ್ಟ ಎದುರಿಸಲಿದ್ದಾರೆ.
ಜನನ ಅಥವಾ ಮರಣ ನೋಂದಣಿ ಕಾರ್ಯವಿಳಂಬ ಮಾಡಿದರೆ, ಮುಂದೆ ಈ ಪ್ರಕ್ರಿಯೆ ಹೆಚ್ಚು ಕಠಿಣವಾಗಲಿದೆ. ಈ ಸಂಬಂಧ ಹೊಸ ಮಸೂದೆ ಜಾರಿಗೆ ಸರ್ಕಾರ ಸಿದ್ಧತೆ ನಡೆಸಿದೆ.
ಎರಡು ವರ್ಷಗಳ ನಂತರ ನೋಂದಾಯಿಸಲು ಮುಂದಾದರೆ, ಪ್ರಥಮ ದರ್ಜೆ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅನುಮತಿ, ಒಂದರಿಂದ ಎರಡು ವರ್ಷಗಳ ನಡುವಿನ ಅವಧಿಯಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟ್, ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಅಥವಾ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್ ಅನುಮೋದನೆ ಅಗತ್ಯ ಎಂಬುದು ಪ್ರಸ್ತಾಪಿತ ನೂತನ ಕಾಯ್ದೆಯಲ್ಲಿ ಅಡಕವಾಗಿರುವ ಅಂಶ.
ಈ ಎರಡೂ ಸಂದರ್ಭಗಳಲ್ಲಿ, ನಿಯೋಜಿತ ಅಧಿಕಾರಿ ಜನನ ಅಥವಾ ಮರಣದ ಸತ್ಯಾಸತ್ಯತೆ ಪರಿಶೀಲಿಸಬೇಕಾಗುತ್ತದೆ ಎಂಬ ನಿಯಮವನ್ನು ಮಾಡಲಾಗಿದೆ.