ಜನನ ಪ್ರಮಾಣಪತ್ರದಲ್ಲಿ ಜೈವಿಕ ತಂದೆಯ ಬದಲಿಗೆ ಮಲತಂದೆಯ ಹೆಸರು ನಮೂದು: ಹೈಕೋರ್ಟ್ ತೀರ್ಪು
Sunday, August 30, 2026
ಜನನ ಪ್ರಮಾಣಪತ್ರದಲ್ಲಿ ಜೈವಿಕ ತಂದೆಯ ಬದಲಿಗೆ ಮಲತಂದೆಯ ಹೆಸರು ನಮೂದು: ಹೈಕೋರ್ಟ್ ತೀರ್ಪು
ಅಪ್ರಾಪ್ತ ಮಗುವಿನ ಹಿತಾಸಕ್ತಿಗೆ ಅನುಕೂಲವಾಗಿದ್ದರೆ ಜನನ ಪ್ರಮಾಣಪತ್ರದಲ್ಲಿ ಜೈವಿಕ ತಂದೆಯ ಹೆಸರಿನ ಬದಲಿಗೆ ಮಲ ತಂದೆಯ ಹೆಸರನ್ನು ನಮೂದಿಸಬಹುದು ಎಂದು ಕೊಲ್ಕತಾ ಹೈಕೋರ್ಟ್ ತೀರ್ಪು ನೀಡಿದೆ.
ಮಗುವಿನ ಪರವಾಗಿ ಅವರ ತಾಯಿ ಶ್ರೀಮತಿ ಬರ್ನಾಲಿ ಘೋಷ್ ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆ ನಡೆಸಿದ ಕೊಲ್ಕತಾ ಹೈಕೋರ್ಟ್‌ನ ನ್ಯಾಯಮೂರ್ತಿ ರಾಜಾ ಬಸು ಚೌಧುರಿ ಅವರಿದ್ದ ನ್ಯಾಯಪೀಠ ಈ ತೀರ್ಪು ನೀಡಿದೆ.
ಅಕೆಲ್ಲಾ ಲಲಿತಾ ವಿರುದ್ಧ ಕೊಂಡ ಹನುಮಂತ ರಾವ್ (2022 SCC Online SC 928) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಅವಲಂಬಿಸಿದ ನ್ಯಾಯಪೀಠ ಮಗುವಿನ ಉಪ ನಾಮ ಮತ್ತು ಐಡೆಂಟಿಟಿಯನ್ನು ನಿರ್ಧರಿಸುವ ಹಕ್ಕು ಮಗುವಿನ ತಾಯಿಗೆ ಇದೆ ಎಂದು ಸ್ಪಷ್ಟಪಡಿಸಿದೆ.
ಪ್ರಕರಣ: ಶ್ರೀಮತಿ ಬರ್ನಾಲಿ ಘೋಷ್ (ಕರ್ಮಾಕರ್) ವಿರುದ್ಧ ಪಶ್ಚಿಮ ಬಂಗಾಳ ಸರ್ಕಾರ
ಕೊಲ್ಕೊತಾ ಹೈಕೋರ್ಟ್, WPA 21054/2025 Dated 18-08-2026