-->
SC restrict time limit to advocates- ವಾದಕ್ಕೆ ಸಮಯ ಮಿತಿ ಹಾಕಿದ ಸುಪ್ರೀಂ ಕೋರ್ಟ್: ಕಾಲ ಬದಲಾಗಿದೆ ಎಂದ ನ್ಯಾಯಪೀಠ

SC restrict time limit to advocates- ವಾದಕ್ಕೆ ಸಮಯ ಮಿತಿ ಹಾಕಿದ ಸುಪ್ರೀಂ ಕೋರ್ಟ್: ಕಾಲ ಬದಲಾಗಿದೆ ಎಂದ ನ್ಯಾಯಪೀಠ

ವಾದಕ್ಕೆ ಸಮಯ ಮಿತಿ ಹಾಕಿದ ಸುಪ್ರೀಂ ಕೋರ್ಟ್: ಕಾಲ ಬದಲಾಗಿದೆ ಎಂದ ನ್ಯಾಯಪೀಠ





ನ್ಯಾಯಾಧೀಶರ ಮುಂದೆ ನಿಂತು ಗಂಟೆಗಟ್ಟಲೆ ವಾದ ಮಾಡುವುದಕ್ಕೆ ಸುಪ್ರೀಂ ಕೋರ್ಟ್ ಕಡಿವಾಣ ಹಾಕಿದೆ. ಇನ್ನು ಮುಂದೆ ವಾದಕ್ಕೆ ನಿರ್ದಿಷ್ಟ ಸಮಯದ ಮಿತಿಯನ್ನು ಹಾಕುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.



ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಮತ್ತು ಆರ್. ಸುಭಾಷ್ ರೆಡ್ಡಿ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಸಮಯ ಮಿತಿ ಹಾಕಿದೆ. ವಕೀಲರು ಗರಿಷ್ಟ 30 ನಿಮಿಷದೊಳಗೆ ತಮ್ಮ ವಾದವನ್ನು ಪೂರ್ಣಗೊಳಿಸಬೇಕು ಮತ್ತು ವಾದ ಪತ್ರವನ್ನು ಮೂರು ಪುಟಗಳಿಗೆ ಸೀಮಿತಗೊಳಿಸಬೇಕು ಎಂಬ ಮಿತಿಯನ್ನು ವಿಧಿಸಿದ್ದಾರೆ.



ನೀವು ಯಾವ ಕಾಲದಲ್ಲಿ ಇದ್ದೀರಿ... ಗಂಟೆಗಟ್ಟಲೆ ವಾದ ಮಾಡುವ ಕ್ರಮ ಯಾವ ದೇಶದಲ್ಲಿ ಜಾರಿಯಲ್ಲಿದೆ ಎಂದು ಪ್ರಶ್ನಿಸಿದ ನ್ಯಾಯಪೀಠ, ವಕೀಲರು ತಮ್ಮ ಈ ಹವ್ಯಾಸವನ್ನು ಬದಲಿಸಬೇಕು ಮತ್ತು ಕಾಲದೊಂದಿಗೆ ಹೆಜ್ಜೆ ಹಾಕಬೇಕು ಎಂದು ಹೇಳಿದೆ.



ಗುಜರಾತ್‌ ಮೂಲದ ಹಿರಿಯ ನ್ಯಾಯವಾದಿ ಯತಿನ್ ನರೇಂದ್ರ ಓಜಾ ಅವರ ವಾದ ಮಂಡಿಸುವ ಸಂದರ್ಭದಲ್ಲಿ ನ್ಯಾಯಪೀಠ ಈ ಮಿತಿಯನ್ನು ಹಾಕಿದೆ.



ನ್ಯಾಯಾಂಗದ ನಿಂದನೆ ಮಾಡಿದ ಹಿನ್ನೆಲೆಯಲ್ಲಿ ಗುಜರಾತ್ ಹೈಕೋರ್ಟ್ ಯತಿನ್ ನರೇಂದ್ರ ಓಜಾ ಅವರ "ಹಿರಿಯ ನ್ಯಾಯವಾದಿ" ಎಂಬ ಪದವನ್ನು ಕಿತ್ತೊಗೆದ ಪ್ರಕರಣಕ್ಕೆ ಸಂಬಂಧಿಸಿ ಓಜಾ ಕಳೆದ ಆಗಸ್ಟ್ 2020ರಂದು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು. 


ಓಜಾ ಅವರು ಹೈಕೋರ್ಟ್ ನ್ಯಾಯಾಧೀಶರ ಬಗ್ಗೆ ಅಸಭ್ಯ ಹಾಗೂ ಕೀಳುದರ್ಜೆಯ ಪದಪ್ರಯೋಗ ಮಾಡುವ ಮೂಲಕ ನ್ಯಾಯಾಂಗದ ಕೆಂಗಣ್ಣಿಗೆ ಗುರಿಯಾಗಿದ್ದರು.

Ads on article

Advertise in articles 1

advertising articles 2

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

PAY RS 202

  

ಉಚಿತವಾಗಿ ಸುದ್ದಿಗಳನ್ನು ನೀಡುತ್ತಿರುವ ನಮಗೆ ನೀವು ಸಪೋರ್ಟ್ ಮಾಡಲು ಕೆಳಗೆ ಕ್ಲಿಕ್ ಮಾಡಿ   

Pay RS 101

  

Advertise under the article

  

  

  

ನಿಮ್ಮ ಪ್ರೀತಿಯ ಕೋರ್ಟ್ ಬೀಟ್ ನ್ಯೂಸ್ ಗೆ DONATION ನೀಡಲು ಕೆಳಗೆ ಕ್ಲಿಕ್ ಮಾಡಿ

  

Pay Rs 200