Supre Court upheld 97th constitution amendment- ಸಹಕಾರ ಕ್ಷೇತ್ರ ರಾಜ್ಯಗಳ ಪರಮಾಧಿಕಾರ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಸಹಕಾರ ಕ್ಷೇತ್ರ ರಾಜ್ಯಗಳ ಪರಮಾಧಿಕಾರ- ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು
ಸಹಕಾರ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡುವ ಪ್ರಯತ್ನಕ್ಕೆ ಸುಪ್ರೀಂ ಕೋರ್ಟ್ ತಣ್ಣೀರು ಎರಚಿದ್ದು, ಸಹಕಾರ ಕ್ಷೇತ್ರದಲ್ಲಿ ಕೇಂದ್ರ ಸರ್ಕಾರ ಕಾನೂನು ರೂಪಿಸಲು ಆಗದು ಎಂಬ ಮಹತ್ವದ ತೀರ್ಪು ನೀಡಿದೆ.
ಈ ಮೂಲಕ ಸಂವಿಧಾನದ 97ನೇ ತಿದ್ದುಪಡಿಯ ಸಿಂಧುತ್ವವನ್ನು ಎತ್ತಿ ಹಿಡಿದಿದ್ದು, ತಿದ್ದುಪಡಿಯ ಕೆಲವು ಭಾಗಗಳನ್ನು ಮಾತ್ರ ರದ್ದುಪಡಿಸಿದೆ.
Union Of India Vs Rajendra Shah and others
Citation: LL 2021 SC 312
ಗುಜರಾತ್ ಹೈಕೋರ್ಟ್ 2013ರಲ್ಲಿ ನೀಡಿದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ. ನ್ಯಾಯಮೂರ್ತಿ ರೋಹಿಂಗ್ಟನ್ ನಾರಿಮನ್, ಕೆ.ಎಂ. ಜೋಸೆಫ್ ಹಾಗೂ ಬಿ.ಆರ್. ಗವಾಯಿ ಅವರನ್ನೊಳಗೊಂಡ 3 ನ್ಯಾಯಮೂರ್ತಿಗಳ ಪೀಠ ಕೇಂದ್ರ ಸರ್ಕಾರದ ಅರ್ಜಿಯನ್ನು ತಿರಸ್ಕರಿಸಿತು.
ತೀರ್ಪಿನ ಕೆಲವು ಮಹತ್ವದ ಅಂಶಗಳು:
ಸಹಕಾರ ಕ್ಷೇತ್ರ ರಾಜ್ಯ ವಲಯದಲ್ಲಿ ಬರುವುದರಿಂದ ಕೇಂದ್ರ ಸರ್ಕಾರವು ಸಹಕಾರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಯಾವುದೇ ಕಾನೂನು ರೂಪಿಸುವಂತಿಲ್ಲ.
ಸುಪ್ರೀಂ ಕೋರ್ಟ್‌ನ ಈ ತೀರ್ಪಿನಿಂದ ಸಹಕಾರ ಕ್ಷೇತ್ರದ ಪರಮಾಧಿಕಾರ ರಾಜ್ಯ ಸರ್ಕಾರಗಳ ಕೈಯಲ್ಲೇ ಉಳಿಯಲಿದೆ. ಕೇಂದ್ರದ ಮಧ್ಯಪ್ರವೇಶ ತಪ್ಪಲಿದೆ.
ಸಹಕಾರ ಸಂಘಗಳ ಪರಿಣಾಮಕಾರಿ ಕಾರ್ಯ ನಿರ್ವಹಣೆಗೆ ಸಂಬಂಧಿಸಿದ ಸಂವಿಧಾನದ 97ನೇ ತಿದ್ದುಪಡಿಯ ಸಿಂಧುತ್ವವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.